ಸುತ್ತ-ಮುತ್ತ

ಕರ್ನಾಟಕದ ಅನಿವಾಸಿ ಭಾರತೀಯರನ್ನು  ಕ್ವಾರಂಟೈನ್ನಲ್ಲಿಡಲು ನಮ್ಮ ಸಂಸ್ಥೆಯನ್ನು ನೀಡುತ್ತೇವೆ: ಅಲ್-ಮದೀನತ್ತುಲ್ ಮುನವ್ವರ ಮೂಡಡ್ಕ ಸಂಸ್ಥೆ ಘೋಷಣೆ

ವರದಿಗಾರ (ಎ.12): ಕೊರೋನಾ ಸೋಂಕು ವಿಶ್ವವನ್ನೇ ಕಾಡಿದ್ದು, ವಿದೇಶಗಳಲ್ಲಿರುವ ಅನಿವಾಸಿ ಕನ್ನಡಿಗರನ್ನು ಕ್ವಾರಂಟೈನ್ ನಲ್ಲಿಡಲು ನಮ್ಮ ಸಂಸ್ಥೆಯನ್ನು ನೀಡುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೂಡಡ್ಕ ಎಂಬಲ್ಲಿ ಧಾರ್ಮಿಕ, ಶೈಕ್ಷಣಿಕ ವಿಧ್ಯಾಭ್ಯಾಸವನ್ನು ನೀಡುತ್ತಿರುವ ಅಲ್-ಮದೀನತ್ತುಲ್ ಮುನವ್ವರ ಸಂಸ್ಥೆ ಘೋಷಿಸಿದೆ.

ಭಾರತೀಯರಿಂದಲೇ  ಪ್ರಾರಂಭಗೊಂಡು ಧಾರ್ಮಿಕ, ಸಾಮಾಜಿಕ, ಮತ್ತು ಶೈಕ್ಷಣಿಕ ರಂಗಗಳಲ್ಲಿ ಉತ್ತಮ ರೀತಿಯಲ್ಲಿ ಸೇವೆ ಗೈಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ  ವಿದ್ಯಾಸಂಸ್ಥೆ ಎ.ಎಮ್.ಇ.ಸಿ. ಯನ್ನು ಪ್ರವಾಸಿಗಳಿಗೆ ಅಗತ್ಯವಾದರೆ ಕ್ವಾರಂಟೈನ್ ಆಗಿ ನೀಡಲು ಸಿದ್ಧ ಎಂದು  ಸಂಸ್ಥೆಯ ಉಪಾಧ್ಯಕ್ಷರಾದ ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರ್ ಹಾಗೂ ಎ.ಎಮ್.ಇ.ಸಿ ಇದರ ಜನರಲ್ ಮ್ಯಾನೇಜರ್  ಅಶ್ರಫ್ ಸಖಾಫಿ ಮಾಡಾವು ಹೇಳಿದ್ದಾರೆ.

ಜೀವನೋಪಾಯಕ್ಕಾಗಿ ವಿದೇಶದಲ್ಲಿರುವ ನೂರಾರು ಕನ್ನಡಿಗರು ಕೊರೋನ ಭೀತಿಯಿಂದ ಸಂಕಷ್ಟದಲ್ಲಿದ್ದಾರೆ. ಹಲವು ದೇಶಗಳಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಅವರ ಸುರಕ್ಷತೆಯನ್ನು ಸರಕಾರವು ಖಚಿತಪಡಿಸಬೇಕೆಂದು ಸಂಸ್ಥೆಯು ಒತ್ತಾಯಿಸಿದೆ.

2006 ರಲ್ಲಿ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಮೂಡಡ್ಕ ಎಂಬ ಕುಗ್ರಾಮದಲ್ಲಿ ಮರ್ಹೂಂ ಟಿ.ಎಚ್ .ಉಸ್ತಾದರು ಸ್ಥಾಪಿಸಿದ ಸಂಸ್ಥೆಯು ಇಂದು ಒಂದೇ ಸೂರಿನಡಿಯಲ್ಲಿ ಧಾರ್ಮಿಕ, ಲೌಕಿಕ ಶಿಕ್ಷಣಗಳೆರಡನ್ನೂ ನೀಡಿ ಸಮಾಜಕ್ಕೆ ಅವರನ್ನು ಉತ್ತಮ ಉತ್ಪನ್ನಗಳಾಗಿ ನೀಡುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿಕೊಂಡು ಬರುತ್ತಿದೆ. ಇಂದು ಅನಿವಾಸಿ ಕನ್ನಡಗರ ಸಂಕಷ್ಟಗಳಿಗಾಗಿ ಸಂಸ್ಥೆಯನ್ನು ನೀಡಲು ಮುಂದೆ ಬಂದಿರುವುದು ಸಮಾಜದ ಮೆಚ್ಚುಗೆಗೆ ಪಾತ್ರವಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group