
‘ಮಾಧ್ಯಮ ವೈರಸ್’ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸರಕಾರ!
ವರದಿಗಾರ (ಎ.11): ಸದ್ಯ ದೇಶದಲ್ಲಿ ‘ಕೊರೋನಾ ವೈರಸ್’ಗಿಂತಲೂ ಹೆಚ್ಚು ‘ಮಾಧ್ಯಮ ವೈರಸ್’ ಜನರನ್ನು ನಿರಂತರವಾಗಿ ಭಯ ಭೀತಿಗೊಳಿಸುತ್ತಿದೆ. ಸುಳ್ಳನ್ನು ಪ್ರಚಾರಪಡಿಸಿ ಅದೇ ಸತ್ಯವೆಂದು ಜನರನ್ನು ನಂಬಿಸುವ ಪ್ರಯತ್ನಕ್ಕೆ ಕೆಲವೊಂದು ಮಾಧ್ಯಮಗಳು ಪ್ರಯತ್ನಿಸುತ್ತಿವೆ. ಕೊರೋನಾ ವೈರಸ್ ನಿಂದ ದೇಶವು ಅಕ್ಷರಶಃ ಸ್ಥಬ್ತಗೊಂಡಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಬಡವರ ಮತ್ತು ಮಧ್ಯಮ ವರ್ಗ ಶೋಷನೀಯ ಸ್ಥಿತಿಗೆ ತಲುಪುತ್ತಿದೆ. ಅದರ ಮಧ್ಯೆಯೂ ದ್ವೇಷವನ್ನು ಮಾಧ್ಯಮಗಳೇ ಹರಡುತ್ತಿದೆ ಎಂಬುವುದು ಆತಂಕಕಾರಿ ವಿಷಯವಾಗಿದೆ.
ಸುಳ್ಳು ಬಿತ್ತರಿಸಿದ ಕೆಲವು ಕ್ಷಣದಲ್ಲೇ ಅದರ ಸತ್ಯಾಸತ್ಯತೆ ಹೊರಬರುತ್ತಿರುವುದು ಮಾತ್ರ ಆಶಾದಾಯಕ ವಿಚಾರ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಲು ಪ್ರಯತ್ನಿಸುವ ಮಾಧ್ಯಮಗಳು ಅಪಾಯಕಾರಿಯಾಗಿದೆ.
“ತಬ್ಲೀಗಿ ಜಮಾತ್ ಧಾರ್ಮಿಕ ಕಾರ್ಯಕ್ರಮಕ್ಕೆ ಸಂಬಂಧಿಸಿ ಅರುಣಾಚಲ ಪ್ರದೇಶದಲ್ಲಿ 11 ಕೊರೋನ ಪ್ರಕರಣಗಳು ದೃಢಪಟ್ಟಿವೆ” ಎಂದು ‘ಝೀ ನ್ಯೂಸ್’ ಶುಕ್ರವಾರ ಅಸಂಬದ್ದ ವರದಿ ಮಾಡಿತ್ತು.
‘ಝೀ ನ್ಯೂಸ್’ ಪ್ರಸಾರ ಮಾಡಿದ ವರದಿಗೆ ಅರುಣಾಚಲ ಪ್ರದೇಶ ಪ್ರತಿಕ್ರಿಯಿಸಿದ್ದು, ‘ಝೀ ನ್ಯೂಸ್ ಸುಳ್ಳನ್ನು ಪ್ರಸಾರ ಮಾಡುತ್ತಿದೆ. ಇದು ಸತ್ಯಕ್ಕೆ ದೂರವಾಗಿದ್ದು, ಅರುಣಾಚಲ ಪ್ರದೇಶದಲ್ಲಿ ಇದುವರೆಗೆ 1 ಸೋಂಕು ಹರಡಿರುವ ಪ್ರಕರಣ ಮಾತ್ರ ಪತ್ತೆಯಾಗಿದೆ’ ಎಂದು ಹೇಳಿ ‘ಝೀ ನ್ಯೂಸ್’ ಗೆ ಛೀಮಾರಿ ಹಾಕಿದೆ.
This is to clarify that Arunachal Pradesh has got only 1 COVID-19 positive case till date.
The reporting by Zeenews is false and does not carry any authenticity. pic.twitter.com/d74hBGDWbd— ARUNACHAL IPR (@ArunachalDIPR) April 9, 2020
ಈ ಬಗ್ಗೆ ಅರುಣಾಚಲ ಪ್ರದೇಶದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ ಸುದ್ದಿಯನ್ನು ಸುಳ್ಳು ಎಂದು ಟ್ವೀಟ್ ಮಾಡಿದೆ.
