ಸಾಮಾಜಿಕ ತಾಣ

ಮುಸಲ್ಮಾನರ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿಕೆ; ನಮಗೆ ದ್ವೇಷ ಮಾತ್ರ ಮುಖ್ಯವೆಂದು ಸಾಬೀತುಪಡಿಸಿಕೊಂಡ ಕಾರ್ಯಕರ್ತರು!

ವರದಿಗಾರ (ಎ.08): ಕೊರೋನಾ ಸೋಂಕಿಗೆ ವ್ಯವಸ್ಥಿತವಾಗಿ ಧರ್ಮದ ಬಣ್ಣವನ್ನು ನೀಡಲಾಗಿದ್ದು, ಒಂದು ಸಮುದಾಯದ ವಿರುದ್ಧ ದ್ವೇಷವನ್ನು ಬಿತ್ತರಿಸಲಾಗುತ್ತಿರುವುದು ತಾವೆಲ್ಲರೂ ಗಮನಿಸಿರಬಹುದು.

ಕೊರೋನಾ ಸೋಂಕು ತಡೆಗೆ ಸರಕಾರ ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿದ್ದು, ಸಾರ್ವಜನಿಕರೂ ಸರಕಾರದೊಂದಿಗೆ ಸಹಕರಿಸಬೇಕೆಂದು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿನಂತಿಸಿಕೊಂಡಿದ್ದಾರೆ.

ಇತ್ತೀಚೆಗೆ ಬಿ.ಎಸ್. ಯಡಿಯೂರಪ್ಪರೊಂದಿಗೆ ರಾಜ್ಯದ ಎರಡು ಖಾಸಗಿ ಸುದ್ದಿ ವಾಹಿನಿಗಳು ‘ಕೊರೋನಾ ಸೋಂಕು’ಗೆ ಸಂಬಂಧಿಸಿದಂತೆ ಸಂದರ್ಶನ ನಡೆಸಿತ್ತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳೊಂದಿಗೆ ದ್ವೇಷದ ಮತ್ತು ತಮ್ಮ ಮೂಗಿನ ನೇರದ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗಿತ್ತು. ಆದರೆ ಮುಖ್ಯಮಂತ್ರಿಯವರ ಪ್ರತಿಕ್ರಿಯೆ ಅವರಿಗೆ ಮರ್ಮಘಾತ ನೀಡಿದ್ದಲ್ಲದೆ ಅವರ ನಿರೀಕ್ಷೆಯನ್ನು ವಿಫಲ ಮಾಡಿತ್ತು.

ಮುಖ್ಯಮಂತ್ರಿಗಳೊಂದಿಗಿನ ಸಂದರ್ಶನದ ವೀಡಿಯೋ ಕ್ಲಿಪ್ ಇದೀಗ ಸಾಮಾಜಿಕ ತಾಣಗಳಾದ್ಯಂತ ಬಹಳಷ್ಟು ಸುದ್ದಿ ಮಾಡುತ್ತಿದೆ. ಮುಖ್ಯಮಂತ್ರಿಗಳ ಹೇಳಿಕೆಗೆ ಪರ ವಿರೋಧ ಚರ್ಚೆಗಳು ಪ್ರಾರಂಭಗೊಂಡಿದೆ. ಒಂದೆಡೆ ಮುಖ್ಯಮಂತ್ರಿಗಳ ಹೇಳಿಕೆಯನ್ನು ಸ್ವಾಗತಿಸಲಾಗುತ್ತಿದ್ದರೂ ದ್ವೇಷವನ್ನು ಮಾತ್ರ ತುಂಬಿಕೊಂಡಿರುವ ಜನರಿಗೆ ಇದನ್ನು ಸಹಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಾಮಾಜಿಕ ತಾಣದಲ್ಲಿ ಅಭಿಯಾನವೇ ಪ್ರಾರಂಭಗೊಂಡಿದೆ.

ಸಿಎಂ. ಯಡಿಯೂರಪ್ಪ ತನ್ನ ಸಂದರ್ಶನದಲ್ಲಿ ‘ಇದೀಗಾಗಲೇ ಮುಸ್ಲಿಂ ಮುಖಂಡರೊಂದಿಗೆ ಮತ್ತು ಮುಸ್ಲಿಂ ಶಾಸಕರ ಸಭೆಯನ್ನು ಕರೆದು ಮಾತನಾಡಲಾಗಿದ್ದು, ಅವರೆಲ್ಲರೂ ಸರಕಾರಕ್ಕೆ ಸಹಕಾರ ನೀಡುತ್ತಾರೆ ಎಂದು ಹೇಳಿದ್ದಾರೆ. ನಮಾಜ್ ಕೂಡಾ ತಮ್ಮ ತಮ್ಮ ಮನೆಯಲ್ಲೇ ಮಾಡುವುದಾಗಿ ಹೇಳಿ ಸರಕಾರಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಯಾರೋ ಒಂದಿಬ್ಬರು ಮಾಡುವ ಕೃತ್ಯಕ್ಕೆ ಸಂಪೂರ್ಣ ಆ ಸಮುದಾಯವನ್ನೇ ಗುರಿಪಡಿಸುವುದು ಸರಿಯಲ್ಲ. ಮುಸಲ್ಮಾನರ ವಿರುದ್ಧ ಯಾರೇ ಇನ್ನು ಮುಂದೆ ಬೇಜವಾಬ್ದಾರಿ ಹೇಳಿಕೆ ನೀಡಿದರೆ ಅವರು ವಿರುದ್ಧ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆ ಸ್ವತಃ ಬಿಜೆಪಿ ಕಾರ್ಯಕರ್ತರ ಕಣ್ಣು ಕೆಂಪಾಗಿಸಿದೆ ಎಂದು ರಾಜಕೀಯ ವಿಮರ್ಶಕರು ಹೇಳಿಕೊಂಡಿದ್ದು, ಯಡಿಯೂರಪ್ಪರ ವಿರುದ್ಧ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಾಕಷ್ಟು ಪುರಾವೆಗಳು ಸಾಮಾಜಿಕ ತಾಣಗಳಾದ್ಯಂತ ಕಾಣ ಸಿಗುತ್ತಿದೆ.

ಸಾಮಾಜಿಕ ತಾಣಗಳಲ್ಲಿ ಕಂಡು ಬಂದ ಕೆಲವು ಬರಹಗಳು ಈ ರೀತಿಯಲ್ಲಿದೆ.

ರಮೇಶ್ ಮೊಗರ್ ಎಂಬವರ ಫೇಸ್ಬುಕ್ ಕಮೆಂಟ್ ‘ಬುಲೆಟ್ ಪ್ರಕಾಶ ಬದಲು ಯಡಿಯೂರಪ್ಪ ಹೋಗಿದ್ರೆ ಬೇಜಾರಿಲ್ಲ ಅನಿಸ್ತಿದೆ ಇವತ್ತಿನ ಹಿಂದೂಗಳ ಪರಿಸ್ಥಿತಿ ನೋಡಿದ್ರೆ.. (ನಾನು ಒಬ್ಬ ಬಿಜೆಪಿ ಕಾರ್ಯಕರ್ತನಾಗಿ ಹೇಳ್ತೆದ್ದಿನೇ..)’ ಎಂದು ಹೇಳಿದ್ದಾರೆ. ಇದು ಮುಖ್ಯಮಂತ್ರಿ ವಿರುದ್ಧ ಮಾಡಿರುವ ಅತ್ಯಂತ ಹೇಯ ಮನಸ್ಥಿತಿಯ ಕಮೆಂಟ್.

ಪರಮೇಶ್ ಮಿಕ್ರೋ ಅರ್ಟ್ ಅವರ ಫೇಸ್ಬುಕ್ ಬರಹ ‘ನೂತನ ಕರ್ನಾಟಕದ ನೂತನ ಮುಖ್ಯಮಂತ್ರಿ ಅನಂತಕುಮಾರ್ ಹೆಗಡೆ ಅವರಿಗೆ ಅಭಿನಂದನೆಗಳು’. ಇದೇ ಬರಹಕ್ಕೆ ಕನ್ನಡಿಗ ಪ್ರಕಾಶ ಎಂಬವರ ‘ಅವರು ಬಿಟ್ಟುಕೊಡಬೇಕು ಅಲ್ವಾ?’ ಎಂಬ ಕಮೆಂಟ್ ಗೆ ಉತ್ತರಿಸಿದ ಪರಮೇಶ್ ‘ಅದಕ್ಕೆ ನಾವೇ ಮಾಡಿದ್ದೀವಿ’ ಎಂದು ಹೇಳಿದ್ದಾರೆ.

ನಮ್ಮ ಸುದ್ದಿಯಲ್ಲಿ ಪದ ಬಳಕೆಗೆ ಅರ್ಹವಲ್ಲದ ಪದಗಳನ್ನು ಬಳಸಿರುವುದರಿಂದ ಮಾಡಿರುವ ಅಸಹ್ಯ ಬರಹಗಳ ಸ್ಕ್ರೀನ್ ಶಾಟ್ ಗಳನ್ನು ಕೆಳಗೆ ನೀಡಲಾಗಿದೆ. ಈ ರೀತಿಯ ಹಲವು ಬರಹಗಳು ಸಾಮಾಜಿಕ ತಾಣಗಳಾದ್ಯಂತ ರಾರಾಜಿಸುತ್ತಿದೆ. ಇದು ಇವರ ಸಿದ್ಧಾಂತ, ಅನುಸರಿಸುವ ರೀತಿ ಎಲ್ಲವನ್ನೂ ನಮ್ಮ ಮುಂದಿಡುತ್ತೆ. ದ್ವೇಷವನ್ನೇ ಉಸಿರಾಡುವ ಇಂತಹ ಮನಸ್ಸುಗಳು ಎಲ್ಲಿದ್ದರೂ ಅದು ಅಪಾಯಕಾರಿ.

ಸಿಎಂ ಯಡಿಯೂರಪ್ಪ ರವರ ಸಂದರ್ಶನದ ಹೇಳಿಕೆಯ ವೀಡಿಯೋಗಳನ್ನು ಕೆಳಗೆ ನೀಡಲಾಗಿದೆ.

https://twitter.com/ayaz9166/status/1247213714866044928?s=20

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group