ರಾಷ್ಟ್ರೀಯ ಸುದ್ದಿ

“ನಿಮ್ಮ ಪಾದಗಳನ್ನು ತೊಳೆದು ನೀರು ಕುಡಿಯಬೇಕು” : ಬೆಂಗಳೂರು ಹಜ್ ಹೌಸ್ ಸೇವಾ ಕಾರ್ಯಕರ್ತರ ಬಗ್ಗೆ Quarantine ಗೊಳಗಾದ ಗುಜರಾತ್ ಯುವಕನ ಕೃತಜ್ಞತೆ

ವರದಿಗಾರ (ಎ.08): ಕೊರೋನಾ ಮಹಾಮಾರಿಯು ದೇಶವನ್ನು ಅಕ್ಷರಶಃ ಕಾಡುತ್ತಿದ್ದು, ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಎಪ್ರಿಲ್ 7 ರ ವರದಿಯ ಪ್ರಕಾರ, ದೇಶದಲ್ಲಿ ಒಟ್ಟು ಕೊರೋನಾ ಸೋಂಕಿಗೆ ಒಳಗಾದವರು 5,237 ಜನರು. ಕೊರೋನಾದಿಂದ ಇದೀಗಾಗಲೇ 150 ಜನರು ಮೃತಪಟ್ಟಿದ್ದಾರೆ. ದಿನಕ್ಕೆ ಸುಮಾರು 500ಕ್ಕಿಂತಲೂ ಹೆಚ್ಚು ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗುತ್ತಿರುವುದು ಕಳವಳಕಾರಿಯಾಗಿದೆ. ಕರ್ನಾಟಕದಲ್ಲಿ ಒಟ್ಟು 175 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 4 ಜನರ ಜೀವವನ್ನು ಈ ಸೋಂಕು ಬಲಿ ತೆಗೆದುಕೊಂಡಿದೆ. ಹಾಗಾಗಿ ದಯವಿಟ್ಟು ಮುಂಜಾಗೃತೆ ವಹಿಸಿ, ಮನೆಯಲ್ಲಿದ್ದುಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ.

ಇನ್ನು ಕೊರೋನಾ ಸೋಂಕಿಗೆ ವ್ಯವಸ್ಥಿತವಾಗಿ ಧರ್ಮ, ಜಾತಿಯ ಬಣ್ಣ ಬಳಿಯಲಾಗಿದ್ದು, ಒಂದು ಸಮುದಾಯವನ್ನು ಜನರು ಕೆಂಗಣ್ಣಿನಿಂದ ನೋಡುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ಇದೆಲ್ಲವನ್ನೂ ಮೀರಿದ ಮಾನವೀಯ ಸೇವೆ ದೇಶದ ವಿವಿಧ ಭಾಗಗಳಿಂದ ವರದಿಯಾಗುತ್ತಿರುವುದು ಮಾತ್ರ ಕೋಮು ದ್ವೇಷವನ್ನು ಹೃದಯಲ್ಲಿಟ್ಟು ದೇಶದ ಸಾಮರಸ್ಯಕ್ಕೆ ಬೆದರಿಕೆಯಾಗಿರುವವರಿಗೆ ಕಪಾಲಮೋಕ್ಷವಾಗುತ್ತಿದೆ ಮತ್ತು ಹರಿಯಬಿಟ್ಟ ಸುಳ್ಳಿನ ನೈಜತೆ ತಿಳಿಯುತ್ತಿದೆ. ಕೆಳಗೆ ನೀಡಿರುವ ವರದಿಯು ಇದಕ್ಕೆ ಮತ್ತೊಂದು ಉದಾಹರಣೆಯಾಗಿದೆ.

ಬೆಂಗಳೂರಿನ ಹಜ್ ಹೌಸಿನಲ್ಲಿ ಕ್ವಾರಂಟೈನ್ ನಲ್ಲಿದ್ದ ಗುಜರಾತ್ ಮೂಲದ ಮನೀಶ್ ಬರೋಟ್ ಅವರ ಸೋಂಕು ಬಗೆಗಿನ  ವರದಿಯಲ್ಲಿ ನೆಗೆಟಿವ್ ಎಂದು ಸಾಬೀತಾಗಿದ್ದು, ಡಿಸ್ಜರ್ಜ್ ಆಗಿರುವುದಾಗಿ ವರದಿಯಾಗಿದೆ. ಈ ಸಂದರ್ಭ ಬೆಂಗಳೂರು ಹಜ್ ಹೌಸ್ ಸೇವಾ ಕಾರ್ಯಕರ್ತರ  ಮಾಡಿರುವ ಸೇವೆಯನ್ನು ಮನೀಶ್ ಹೇಳಿಕೊಂಡಿರುವುದು ಸಾಮಾಜಿಕ ಜಾಲತಾಣದಾದ್ಯಂತ ವೈರಲ್ ಆಗಿದೆ.

ವೀಡಿಯೋ ವೀಕ್ಷಿಸಿ

ಮುಸ್ಲಿಮರ ಸೇವೆಯನ್ನು ಉಲ್ಲೇಖಿಸಿ ಮಾತನಾಡಿರುವ ಮನೀಶ್ ಬರೋಟ್, ‘ನನ್ನ ಇಲ್ಲಿನ ಅನುಭವವು ಅದು ಬಹಳ ವಿಶಿಷ್ಟತೆಯಿಂದ ಕೂಡಿದೆ. ಜೀವನಾದ್ಯಂತ ಇದನ್ನು ನೆನಪಿಟ್ಟುಕೊಳ್ಳುತ್ತೇವೆ. ನಿಮ್ಮ ಪಾದಗಳನ್ನು ತೊಳೆದು ಅದರ ನೀರನ್ನು ನಾವು ಕುಡಿಯಬೇಕು. ಅಂತಹ ಸೇವೆಯನ್ನು ನೀವು ನೀಡಿದ್ದೀರಿ.’ ಎಂದು ಹೇಳಿದ್ದು, ಸೇವೆಗೈದ ಕಾರ್ಯಕರ್ಯರನ್ನು ಮುಕ್ತ ಕಂಠದಿಂದ ಅಭಿನಂದಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group