ರಾಜ್ಯ ಸುದ್ದಿ

ಸರ್ಕಾರದಿಂದ ನಿರ್ಲಕ್ಷ್ಯಕ್ಕೊಳಗಾದ ಬೆಳ್ತಂಗಡಿಯ ಸೋಂಕುಪೀಡಿತ ಪ್ರದೇಶಕ್ಕೆ ಶಾಸಕರಿಂದ ಶೀಘ್ರ ನೆರವಿನ ಭರವಸೆ

‘ವರದಿಗಾರ’ ವೀಡಿಯೋ ವರದಿಯ ಫಲಶ್ರುತಿ

ಸ್ವಯಂಸೇವಕರ ಕಾರ್ಯವೈಖರಿಗೆ ಶ್ಲಾಘನೆ

ವರದಿಗಾರ(ಎ.04): ಮಹಾಮಾರಿ ಕೊರೋನಾ ವೈರಸ್ ಸೋಂಕು ವಿಶ್ವದ ನಿದ್ದೆಗೆಡಿಸಿದೆ. ಹಲವರ ಜೀವ ಮತ್ತು ಜೀವನವನ್ನು ಹಿಂಡಿದೆ. ಈ ಮಹಾಮಾರಿಯ ವಿರುದ್ಧ ಭಾರತವು ಸಮರ ಸಾರಿದೆ. 21 ದಿನಗಳ ಲಾಕ್ ಡೌನ್ ಘೋಷಣೆಗೊಂಡಿದೆ. ಜನರು ಭಯದ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಬಡ ಜನತೆಯನ್ನು, ಕಾರ್ಮಿಕರನ್ನು ಹಸಿವು ಕಾಡಲಾರಂಭಿಸಿದೆ.

ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಕಲ್ಲೇರಿ ಕಾಟ್ರಸ್ ಎಂಬ ಪ್ರದೇಶವನ್ನು ‘ಕೊರೋನಾ ಸೋಂಕು ಪೀಡಿತ ಪ್ರದೇಶ’ವೆಂದು ಘೋಷಿಸಲಾಗಿದೆ. ಆದರೆ ಸರಕಾರದ ಗಂಭೀರ ನಿರ್ಲಕ್ಷ್ಯ ಇಲ್ಲಿನ ಜನಸಾಮಾನ್ಯರನ್ನು ಆಕ್ರೋಶಕ್ಕೊಳಪಡಿಸಿತ್ತು. ಮಾತ್ರವಲ್ಲದೆ ಜನರು ತನ್ನ ಅಸಹಾಯಕತೆಯನ್ನು ಯಾರೊಂದಿಗೂ ಹೇಳಿಕೊಳ್ಳುವಂತಿರಲಿಲ್ಲ.

ಕಳೆದ 7 ದಿನಗಳಿಂದ ಸಂಪೂರ್ಣವಾಗಿ ಬಂದ್ ನಲ್ಲಿ ಈ ಪ್ರದೇಶದ ಜನತೆ ಕಾಲಕಳೆಯುತ್ತಿದ್ದಾರೆ. ಎಲ್ಲಾ ಮುಖ್ಯ ರಸ್ತೆಗಳನ್ನು ಮುಚ್ಚಲಾಗಿದೆ. ಸೋಂಕು ಪೀಡಿತ ಪ್ರದೇಶವೆಂದು ಘೋಷಣೆಗೊಂಡ ದಿನದಂದು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಸ್ಥಳಕ್ಕೆ ಭೇಟಿ ನೀಡಿ ಫೋಟೋಗಳಿಗೆ ಪೋಸ್ ಕೊಟ್ಟು ಆರಾಮವಾಗಿ ನಿದ್ರಿಸುತ್ತಿದ್ದರು. ಆದರೆ ಕಳೆದ  7 ದಿನಗಳಿಂದಲೂ ನಿದ್ದೆ ಬಿಟ್ಟು, ಮನೆಗೆ ಹೋಗದೆ, ಹಸಿವಿನೊಂದಿಗೆ ಇಲ್ಲಿನ ಸ್ಥಳೀಯ ಯುವಕರ ತಂಡ ಗ್ರಾಮ ಪಂಚಾಯತ್ ಅಧ್ಯಕ್ಷರ, ಪಿಡಿಓ, ಆಯ್ದ ಗ್ರಾಮ ಪಂಚಾಯತ್ ಸದಸ್ಯರ ಮತ್ತು ತಹಶೀಲ್ದಾರರ ಸಹಕಾರದೊಂದಿಗೆ ಸರಕಾರದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. 89 ಮನೆಗಳ ಅಗತ್ಯ ವಸ್ತುಗಳನ್ನು ಮತ್ತು ಎಲ್ಲಾ ರೀತಿಯ ಪೂರೈಕೆಗಳನ್ನು ಇಡೇರಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದರು.

‘ವರದಿಗಾರ’ ಪ್ರಕಟಿಸಿದ್ದ ವೀಡಿಯೋ ವರದಿ ವೀಕ್ಷಿಸಿ: 

ಆರೋಗ್ಯ ಇಲಾಖೆಯೊಂದಿಗೆ ಸಂಬಂಧಪಟ್ಟವರು ನ್ಯಾಯಯುತವಾದ ಬೇಡಿಕೆಯನ್ನು ಮುಂದಿಟ್ಟಾಗ ಆರೋಗ್ಯ ಇಲಾಖೆಯು ತನ್ನ ಅಸಹಾಯಕತೆಯನ್ನು ಮಾತ್ರ ತೋರ್ಪಡಿಸುತ್ತಿತ್ತೇ ಹೊರತು ಪೂರಕವಾದ ಯಾವುದೇ ವಾತಾವರಣವನ್ನು ನಿರ್ಮಿಸಿಕೊಡಲು ಮುಂದಾಗಲಿಲ್ಲ. ಅಪರೂಪಕ್ಕೊಮ್ಮೆ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಯುವಕರನ್ನೇ ಹುರಿದುಂಬಿಸಿದರು. ಆದರೆ ಅದೇ ಯುವಕರ ರಕ್ಷಣೆಗೆ ಬೇಕಾದ ಮಾಸ್ಕ್, ಗ್ಲೌಸ್, ಸ್ಯಾನಿಟಜರ್ ಮತ್ತು ಇನ್ನಿತರ ಯಾವುದನ್ನೂ ಪೂರೈಸುತ್ತಿರಲಿಲ್ಲ ಎಂಬುವುದೇ ಖೇಧಕರ.

ಗ್ರಾ.ಪಂ ಅಧ್ಯಕ್ಷರ ಮತ್ತು ಸದಸ್ಯರ ಹೇಳಿಕೆ ಪ್ರಕಾರ, ಇದುವರೆಗೆ ಪಂಚಾಯತ್ ನಿಂದ ಸಾಧ್ಯವಿದ್ದಷ್ಟು ಕೊಡುಗೆ ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇವೆ. ಯಾವುದೇ ರೀತಿಯ ಆದಾಯವಿಲ್ಲದ ಪಂಚಾಯತ್ ಎಷ್ಷು ಭಾರವನ್ನು ಹೊರಬಹುದು? ಎಂದು ಬೇಸರದಿಂದ ನಮ್ಮನ್ನೇ ಪ್ರಶ್ನಿಸುತ್ತಾರೆ. ಕೆಲವೊಂದು ದಾನಿಗಳು ಬಡವರಿಗೆ ಏನಾದರು ಹಂಚಿ ಎಂದು ಅವರ ಮಟ್ಟಿನಲ್ಲಿ ಸಹಾಯವನ್ನು ಮಾಡಿದ್ದಾರೆ ಎಂದು ಗ್ರಾ,ಪಂ ಸದಸ್ಯರು ಹೇಳುತ್ತಾರೆ. ಇದುವರೆಗೆ ಗ್ರಾಮದ ಜನತೆಯ ಎಲ್ಲಾ ಅವಶ್ಯತೆಗಳನ್ನು ಪೂರೈಸಲು ಪ್ರಯತ್ನಿಸಿದ್ದೇವೆ ಆದರೆ ಮುಂದೇನು???? ಎಂದು ‘ವರದಿಗಾರ.ಕಾಂ’ ದಿನಾಂಕ 2 ಎಪ್ರಿಲ್ 2020 ರಂದು ಮಾಡಿರುವ ವಿಡಿಯೋ ವರದಿಯಲ್ಲಿ ಪಂಚಾಯತ್ ಅಧ್ಯಕ್ಷರು ತನ್ನ ಮುಂದಿರುವ ಅಹವಾಳನ್ನು ತೋಡಿಕೊಂಡಿದ್ದರು ಮತ್ತು ಸರಕಾರದೊಂದಿಗೆ ಕೆಲವೊಂದು ನ್ಯಾಯಯುತ ಬೇಡಿಕೆಯನ್ನು ಮುಂದಿಟ್ಟಿದ್ದರು.

‘ವರದಿಗಾರ’ ದಿನಾಂಕ 2 ಎಪ್ರಿಲ್ 2020 ರಂದು ಮಾಡಿರುವ ವಿಡಿಯೋ ವರದಿಯನ್ನು ಸಕರಾತ್ಮಕವಾಗಿ ಪರಿಗಣಿಸಿರುವ ಬೆಳ್ತಂಗಡಿ ಶಾಸಕ 3 ಎಪ್ರಿಲ್ 2020 (ಇಂದು) ಕೊರೋನಾ ಸೋಂಕು ಪೀಡಿತ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮುಕ್ತವಾಗಿ ಮಾತುಕತೆ ನಡೆಸಿದ್ದಾರೆ. ಎಲ್ಲಾ ರೀತಿಯ ಪರಿಹಾರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಸ್ವಯಂ ಸೇವಕರ ಹಗಲಿರುಳಿನ ಕರ್ತವ್ಯವನ್ನು ಶ್ಲಾಘಿಸಿದ್ದಾರೆ.  ‘ನಿಮ್ಮೊಂದಿಗೆ ನಾನಿರುತ್ತೇನೆ’ ಎಂದಿದ್ದಲ್ಲದೆ ಸ್ಥಳದಲ್ಲೇ ಪಿಡಿಓ ಸಮ್ಮುಖದಲ್ಲಿ ರೂಪಾಯಿ 50,000 ನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಹಸ್ತಾಂತರಿಸಿದ್ದಾರೆ. ಅದಲ್ಲದೆ ಅಗತ್ಯ ವಸ್ತುಗಳ ಪೂರೈಕೆಯನ್ನೂ ಈ ಸಂದರ್ಭದಲ್ಲಿ ಮಾಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಸ್ಪಂದಿಸಿದ ಶಾಸಕ ಹರೀಶ್ ಪೂಂಜಾ ವೀಡಿಯೋ ವೀಕ್ಷಿಸಿ

ಮೋದಿ ಸರಕಾರವು ರೈತ ವಿರೋಧಿಯೇ?

This poll has been finished and no longer available to vote !

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group