ರಾಷ್ಟ್ರೀಯ ಸುದ್ದಿ

ಕೊರೋನಾ ಭೀತಿ; ಹಿಂದೂ ವ್ಯಕ್ತಿಯ ಶವಸಂಸ್ಕಾರಕ್ಕೆ ಹಿಂಜರಿದ ಸಂಬಂಧಿಕರು : ‘ರಾಮ್ ನಾಮ್ ಸತ್ಯ ಹೇ’ ಜಪಿಸುತ್ತಾ ಶವಸಂಸ್ಕಾರಕ್ಕೆ ಸಹಕರಿಸಿದ ಮುಸ್ಲಿಮರು !

ವರದಿಗಾರ(29-03-2020): ದೇಶದಾದ್ಯಂತ ಕೊರೋನಾ ವೈರಸ್ ಭಯ ಆವರಿಸಿದೆ. ಲಾಕ್ ಡೌನ್ ಕಾರಣ ಜನರು ಮನೆಯಿಂದ ಹೊರಗಿಳಿಯುತ್ತಿಲ್ಲ. ಭಯ ಅದೆಷ್ಟು ಆವರಿಸಿದೆ ಅಂದರೆ, ಮೃತ ವ್ಯಕ್ತಿಯ ಸಂಬಂಧಿಕರೇ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುತ್ತಿಲ್ಲ. ಇಂತಹ ಒಂದು ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್ ನಿಂದ ವರದಿಯಾಗಿದೆ. ಈ ಘಟನೆಯು ಹಿಂದೂ – ಮುಸ್ಲಿಮ್ ಏಕತೆಗೂ ಉದಾಹರಣೆಯಾಗಿದೆ.

ಬುಲಂದ್ ಶಹರ್’ನ ಆನಂದ್ ವಿಹಾರದ ಅತೀ ಬಡ ಕುಟುಂಬಗಳಲ್ಲೊಂದಾಗಿದೆ ರವಿಶಂಕರ್ ಕುಟುಂಬ. ಶನಿವಾರದಂದು ರವಿಶಂಕರ್ ಕೊನೆಯುಸಿರೆಳೆದನು. ಆತನ ಮಗ ತನ್ನ ನೆರೆ-ಕರೆಯಲ್ಲಿರುವವರಿಗೂ, ಸಂಬಂಧಿಕರಿಗೂ ಮರಣ ವಾರ್ತೆಯನ್ನು ತಲುಪಿಸಿದನು. ಆದರೆ, ಯಾರೂ ಮನೆಯ ಕಡೆ ಸುಳಿಯದಿದ್ದಾಗ, ಮನೆಯವರು ಆತಂಕಕ್ಕೊಳಗಾದರು. ಶವವನ್ನು ಸ್ಮಶಾನಕ್ಕೆ ತಲುಪಿಸಲು ಹೆಗಲು ನೀಡಲು ಹಾಗೂ ಶವ ಸಂಸ್ಕಾರಕ್ಕೆ  ಸಹಕರಿಸಲು ಯಾರೂ ಇರಲಿಲ್ಲ. ಆನಂದ್ ವಿಹಾರ್ ಮುಸ್ಲಿಮ್ ಬಾಹುಳ್ಯ ಪ್ರದೇಶವಾಗಿದೆ. ಸುದ್ದಿ ತಿಳಿದ ಅಲ್ಲಿಯ ಕೆಲವು ಮುಸ್ಲಿಮರು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದರು.

ಸ್ಥಳೀಯ ಮುಸ್ಲಿಮರು ಶವವನ್ನು, “ರಾಮ್ ನಾಮ್ ಸತ್ಯ ಹೇ” ಜಪಿಸುತ್ತಾ ಹತ್ತಿರದ ನದಿ ತಟದಲ್ಲಿರುವ ಸ್ಮಶಾನಕ್ಕೆ ತಲುಪಿಸಿದರು ಹಾಗೂ ಅಂತ್ಯಕ್ರಿಯೆ ನಡೆಸುವಲ್ಲಿ ರವಿಶಂಕರ್ ನ ಕುಟುಂಬಕ್ಕೆ ಸಹಕರಿಸಿದರು.

ಅಂತ್ಯಕ್ರಿಯೆ ಪೂರ್ಣಗೊಳಿಸಿ ಮೃತ ವ್ಯಕ್ತಿಯ ಮಗನೊಂದಿಗೆ ಆತನ ಮನೆಗೆ ಆಗಮಿಸಿದ ಸ್ಥಳೀಯ ಮುಸ್ಲಿಮರು, ಕುಟುಂಬಕ್ಕೆ ಎಲ್ಲಾ ರೀತಿಯ ಸಹಾಯದ ಭರವಸೆಯನ್ನೂ ನೀಡಿದ್ದಾರೆ.

ವೀಡಿಯೋ ವೀಕ್ಷಿಸಿ

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group