ರಾಷ್ಟ್ರೀಯ ಸುದ್ದಿ

ಕೋವಿಡ್-19 ಲಾಕ್ ಡೌನ್: ದೆಹಲಿಯಿಂದ ಆಗ್ರಾಗೆ 200ಕಿ.ಮೀ ದೂರ ನಡೆದ ಯುವಕನ ಸಾವು!

ಪರ್ಯಾಯ ವ್ಯವಸ್ಥೆಗಳಿಲ್ಲದೆ ಜೀವ ಕಳೆದುಕೊಳ್ಳುತ್ತಿರುವ ದೇಶದ ಜನತೆ

ವರದಿಗಾರ (ಮಾ.29): ವಿಶ್ವವನ್ನೇ ಭಯದ ವಾತಾವರಣದಲ್ಲಿ ಸಿಲುಕಿಸಿರುವ ಮಾಹಾಮಾರಿಯ ತಡೆಗೆ ಭಾರತ ಪ್ರಯತ್ನಿಸುತ್ತಿದ್ದು, ಅದಕ್ಕಾಗಿ ದೇಶವಿಡೀ ಲಾಕ್ ಡೌನ್ ಘೋಷಿಸಲಾಗಿದೆ. ಜನತೆ ಅತಂತ್ರರಾಗಿದ್ದಾರೆ. ಹಸಿವು ದೇಶದ ಬಹುತೇಕ ಬಡ ಜನತೆಯನ್ನು ಅಕ್ಷರಶಃ ಕಾಡಿದೆ. ಲಾಕ್ ಡೌನ್ ನಿಂದಾಗಿ ಕೆಲಸ ಕಳೆದುಕೊಂಡ ಜನತೆ ದಿಕ್ಕು ತೋಚದಂತಾಗಿದ್ದಾರೆ. ಪರ್ಯಾಯ ಸಾರಿಗೆ ವ್ಯವಸ್ಥೆಗಳಿಲ್ಲದೆ ದಾರಿ ಮಧ್ಯೆ ಅಸಹಾಯಕರಾಗಿದ್ದಾರೆ. ಒಪ್ಪೊತ್ತಿನ ಊಟಕ್ಕೂ ಪರದಾಟ ಪ್ರಾರಂಭಗೊಂಡಿದೆ. ದೇಶವು ಅತ್ಯಂತ ಗಂಭೀರ ದಿನಗಳನ್ನು ಎದುರಿಸುತ್ತಿದೆ. ಹಸಿವಿನಿಂದ ಪ್ರಾಣಗಳನ್ನು ಕಳೆದುಕೊಳ್ಳಲಾರಂಭಿಸಿದೆ. ಲಾಕ್ ಡೌನ್ ಘೋಷಣೆಗೊಂಡು ಹಲವು ದಿನಗಳು ಕಳೆದುಕೊಂಡರೂ ಜನತೆ ಬೀದಿಯಲ್ಲಿ ನರಳಾಡುವಂತಹ ಅತ್ಯಂತ ದುಃಖಕರ ಸುದ್ದಿಗಳನ್ನು ನೋಡುತ್ತಿದ್ದೇವೆ. ಈ ಸುದ್ದಿಯು ಅದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ರಾಷ್ಟ್ರ ರಾಜಧಾನಿಯ ಖಾಸಗಿ ರೆಸ್ಟೋರೆಂಟ್‌ವೊಂದರಲ್ಲಿ ಹೋಮ್ ಡೆಲಿವರಿಯಾಗಿ ಕೆಲಸ ನಿರ್ವಹಿಸುತ್ತಿದ್ದ 3 ಮಕ್ಕಳ ತಂದೆಯೊಬ್ಬರು ಸುಮಾರು 200 ಕಿ.ಮೀ ದೂರವಿರುವ ಮಧ್ಯಪ್ರದೇಶದ ಮೊರೆನಾ ಜಿಲ್ಲೆಗೆ ನಡೆದು ಹೋಗುವಂತಹ ದಾರಿ ಮಧ್ಯೆ ಪ್ರಾಣ ಕಳೆದುಕೊಂಡಿರುವ ಅತ್ಯಂತ ಖೇಧಕರ ವಿಷಯ ವರದಿಯಾಗಿದೆ.

200 ಕಿ.ಮೀ ದೂರ ನಡೆದು ದಾರಿ ಮಧ್ಯೆ ಮೃತಪಟ್ಟ ಯುವಕನನ್ನು ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಅಂಬಾ ಪೊಲೀಸ್ ವ್ಯಾಪ್ತಿಯ ಬದ್ಫ್ರಾ ಗ್ರಾಮದ ರಣವೀರ್ ಸಿಂಗ್ ಎಂದು ಗುರುತಿಸಲಾಗಿದೆ.

ಪೊಲೀಸ್ ವರದಿಯ ಪ್ರಕಾರ, ರಾಷ್ಟ್ರೀಯ ಹೆದ್ದಾರಿ -2 ರ ಕೈಲಾಶ್ ಮೋಡ್ ಬಳಿ ಯುವಕ ಕುಸಿದು ಬಿದ್ದಿದ್ದು, ನಂತರ ಸ್ಥಳೀಯ ಹಾರ್ಡ್‌ವೇರ್ ಅಂಗಡಿ ಮಾಲೀಕ ಸಂಜಯ್ ಗುಪ್ತಾ ಯುವಕನತ್ತ ಧಾವಿಸಿ ಶುಶ್ರೂಷೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸ್ ಅಧಿಕಾರಿ ಅರವಿಂದ್ ಕುಮಾರ್, “ರಣವೀರ್ ನಡೆದುಕೊಂಡೇ ತನ್ನ ಮನೆಗೆ ಹೋಗಬೇಕಿದ್ದವರು. 200 ಕಿ.ಮೀ ನಡಿಗೆಯ ಬಳಲಿಕೆಯಿಂದಾಗಿ ಸಾಮಾನ್ಯವಾಗಿ ಎದೆ ನೋವಿನಂದಾಗಿರುವ ಮೃತಪಟ್ಟಿರುವ ಸಾಧ್ಯತೆಯಿದೆ. ಸಾವನ್ನಪ್ಪುವ ಕೆಲ ಸಮಯದ ಮೊದಲು ಯುವಕ ಟ್ರಕ್ನಲ್ಲಿ ಬಂದಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಯುಪಿ ಪೊಲೀಸರು ಇಂತಹ ವ್ಯಕ್ತಿಗಳಿಗೆ ಆಹಾರದ ಪ್ಯಾಕೆಟ್ ಮತ್ತು ನೀರಿನೊಂದಿಗೆ ಹಾಜರಿದ್ದರು. ಆದರೆ ರಣವೀರ್ ಅವರ ಬಳಿಗೆ ತಲುಪುದಕ್ಕಿಂತ ಮೊದಲೇ ಸಾವನ್ನಪ್ಪಿರುವುದು ದುರದೃಷ್ಟಕರವಾಗಿದೆ” ಎಂದು ಹೇಳಿದ್ದಾರೆ.

ಮೃತ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ನಂತರ ಪ್ರತಿಕ್ರಿಯಿಸಿರುವ ಸಿಒ ಹರಿಪರ್ವತ್, ಐಪಿಎಸ್ ಸೌರಭ್ ದೀಕ್ಷಿತ್, ‘ಹೃದಯಾಘಾತದ ಕಾರಣ ಯುವಕ ಸಾವನ್ನಪ್ಪಿದ್ದಾನೆ. ಆದರೆ ಅವರ ಪ್ರಯಾಣದ ಇತಿಹಾಸವನ್ನು ಗಮನಿಸಿದರೆ, ದೀರ್ಘ ನಡಿಗೆಯ ಬಳಲಿಕೆಯಿಂದಾಗಿ ಅವರಿಗೆ ಹೃದಯಾಘಾತವಾಗಿರಬಹುದೆಂದು ನಾವು ಭಾವಿಸುತ್ತೇವೆ” ಎಂದು ಹೇಳಿದ್ದಾರೆ.

ಖಾಸಗಿ ಪತ್ರಿಕೆಯೊಂದಿಗೆ ಮಾತನಾಡಿರುವ ಮೃತರ ಕಿರಿಯ ಸಹೋದರ ಸೋನು ಸಿಂಗ್, “ರಣವೀರ್ ಕಳೆದ ಮೂರು ವರ್ಷಗಳಿಂದ ದೆಹಲಿಯ ತುಘಲಕಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದ. ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಮೂವರು ಮಕ್ಕಳಿದ್ದಾರೆ. ಅವರು ಗುರುವಾರ ಮುಂಜಾನೆ 3 ಗಂಟೆಗೆ ಕಾಲ್ನಡಿಗೆಯಲ್ಲಿ ಗ್ರಾಮಕ್ಕೆ ತೆರಳಿದ್ದರು. ನಾವು ಬಡ ರೈತರು. ನನಗೆ ಗೊತ್ತಾಗುತ್ತಿಲ್ಲ ತಂದೆಯನ್ನು ಕಳೆದುಕೊಂಡ ಅ ಮಕ್ಕಳು ಹೇಗೆ ಬದುಕುಳಿಯುತ್ತಾರೆಂದು. ” ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group