ರಾಷ್ಟ್ರೀಯ ಸುದ್ದಿ

ಮಾ.22: ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ದೇಶವ್ಯಾಪಿ ‘ಜನತಾ ಕರ್ಫ್ಯೂ’; ಪ್ರತಿಯೊಬ್ಬರೂ ಪಾಲಿಸಲು ಪ್ರಧಾನಿ ಮೋದಿ ಕರೆ

ವರದಿಗಾರ (ಮಾ.19): ವಿಶ್ವವನ್ನೇ ಕಾಡಿರುವ ಕೊರೊನ ವೈರಸ್ ದೇಶದಲ್ಲೂ ವೈರಸ್ ನಿಂದ ಹೆಚ್ಚುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ 2020ರ ಮಾರ್ಚ್ 22ರಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ‘ಜನತಾ ಕರ್ಫ್ಯೂ’ ನಡೆಸಲು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ.

ಅವರು ಇಂದು ದೇಶವನ್ನುದ್ದೇಶಿಸಿ ಮಾತನಾಡುತ್ತಾ,
‘ವೈರಸ್​ನಿಂದ ಸುರಕ್ಷಿತವಾಗಿದ್ದೇವೆ ಎಂದು ಭಾವಿಸಿಕೊಂಡು ಸುಮ್ಮನೆ ಇರುವ ಸಮಯ ಇದಲ್ಲ. ಪ್ರತಿ ಭಾರತೀಯನೂ ಕರೊನಾ ಬಗ್ಗೆ ಜಾಗೃತನಾಗಿರಬೇಕು. ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಹೇಳಿದ್ದಾರೆ.

ವೀಡಿಯೋ ವೀಕ್ಷಿಸಿ: 

‘ಭಾರತದಂತಹ ಹೆಚ್ಚಿನ ಜನಸಂಖ್ಯೆ ಇರುವ ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಕೊರೊನಾ ವೈರಸ್​ ಪಸರಿಸುತ್ತಿದೆ. ಇದು ಖಂಡಿತ ಒಂದು ಸವಾಲು. ಪರಿಸ್ಥಿತಿ ಸಹಜವಾಗಿ ಇಲ್ಲ. ಯುದ್ಧ ಸಂದರ್ಭ ಎದುರಾಗಿದೆ. ಜಿಲ್ಲೆ, ಹಳ್ಳಿಗಳೆಲ್ಲ ಪೂರ್ತಿ ಬಂದ್ ಆಗುತ್ತಿವೆ. ಹಾಗಾಗಿ ಸಾಧ್ಯವಾದಷ್ಟು ಎಲ್ಲರೂ ಮನೆಯಲ್ಲೇ ಇರಿ. ರಸ್ತೆಗಳಲ್ಲಿ ಓಡಾಡಬೇಡಿ. 60 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರಬರಬೇಡಿ. ದೇಶದ ಹಿತವನ್ನು ಕಾಪಾಡಲು ಆತ್ಮಸಂಯಮ ವಹಿಸಿ. ತೀರ ಅನಿವಾರ್ಯ ಆದಾಗ ಮಾತ್ರ ಮನೆಯಿಂದ ಹೊರಬನ್ನಿ’ ಎಂದು ಮನವಿ ಮಾಡಿದ್ದಾರೆ.

“ನಿಮ್ಮ ಕೆಲ ವಾರಗಳು ನನಗೆ ಬೇಕಾಗಿದೆ. ಕೊರೊನಾ ವೈರಸ್ ಗೆ ಇನ್ನೂ ಸರಿಯಾದ ಲಸಿಕೆ ಸಿಕ್ಕಿಲ್ಲ. ಜಗತ್ತು ಸಮಸ್ಯೆಯನ್ನು ಎದುರಿಸುತ್ತಿದೆ. ದೊಡ್ಡ ದೇಶಗಳಲ್ಲೂ ಈ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದೆ. ಭಾರತದಲ್ಲಿ ಈ ಮಹಾಮಾರಿ ಹರಡುವುದಿಲ್ಲ ಎಂದು ನಾವು ಆಲೋಚಿಸುವುದು ತಪ್ಪು ಎಂದವರು ಹೇಳಿದರು.

ದೇಶದ ನಾಗರಿಕರು ಕೇಂದ್ರ, ರಾಜ್ಯ ಸರಕಾರಗಳ ಸೂಚನೆಗಳು ಪಾಲಿಸಬೇಕು ಈ ಮೂಲಕ ಸೋಂಕು ಪೀಡಿತರಾಗುವುದರಿಂದ ನಾವು ಪಾರಾಗಬೇಕು. ಇತರರೂ ನಮ್ಮಿಂದ ತೊಂದರೆಗೊಳಗಾಗಬಾರದು. ಮನೆಯಿಂದಲೇ ವ್ಯವಹಾರ, ಉದ್ಯಮ, ಕೆಲಸಗಳನ್ನು ಮಾಡಿ ಎಂದಿದ್ದಾರೆ.

ಜನರು ‘ಜನತಾ ಕರ್ಫ್ಯೂ’ವನ್ನು ಹೇರಬೇಕು ಎಂದರು. “ಜನರಿಂದ ಜನರಿಗಾಗಿ ಜನರೇ ಹೇರುವ ಕರ್ಫ್ಯೂ ‘ಜನತಾ ಕರ್ಫ್ಯೂ’. ಮಾರ್ಚ್ 22ರಂದು ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಜನರು ಈ ಕರ್ಫ್ಯೂ ವಿಧಿಸಿಕೊಳ್ಳಬೇಕು. ಈ ಸಮಯದಲ್ಲಿ ಮನೆಯಿಂದ ಹೊರಬರಬೇಡಿ, ಮಾರುಕಟ್ಟೆಗೆ ಹೋಗಬೇಡಿ. ಇದರ ಪ್ರಯೋಜನ ಮುಂದಿನ ದಿನಗಳಲ್ಲಿ ಲಭಿಸುತ್ತದೆ. ರಾಜ್ಯ ಸರಕಾರಗಳು ಈ ಬಗ್ಗೆ ಗಮನಹರಿಸಬೇಕು. ಜನತಾ ಕರ್ಫ್ಯೂಗೆ ಬೇಕಾದ ಕ್ರಮ ಕೈಗೊಳ್ಳಬೇಕು. ಎಲ್ಲಾ ಸಂಘಟನೆಗಳು, ಧಾರ್ಮಿಕ, ಸಾಮಾಜಿಕ ಸಂಘಟನೆಗಳು ಈ ಬಗ್ಗೆ ಕೆಲಸ ಮಾಡಬೇಕು. ಈ ಬಗ್ಗೆ ಸಾಧ್ಯವಾದರೆ 10 ಜನರಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಬೇಕು” ಎಂದು ಪ್ರಧಾನಿ ಕರೆ ನೀಡಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group