ರಾಷ್ಟ್ರೀಯ ಸುದ್ದಿ

ಭಾರತವು ಒಂದು ಅದ್ಭುತ ದೇಶ. ಭಾರತೀಯರು ಯುದ್ಧವನ್ನು ಇಷ್ಟಪಡುವವರಲ್ಲ: ಪಾಕಿಸ್ತಾನಿ ಕ್ರಿಕೆಟಿಗ ಶೋಯಬ್ ಅಖ್ತರ್

‘ಭಾರತವು ಶ್ರೇಷ್ಠ ತಾಣವಾಗಿದೆ. ಅಲ್ಲಿ ಅದ್ಭುತವಾದ ಜನರಿದ್ದಾರೆ’

‘ಭಾರತದ ಉದ್ದಗಲಕ್ಕೂ ಸಂಚರಿಸಿ, ಆ ದೇಶವನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ’.

‘ಭಾರತವು ಪಾಕಿಸ್ತಾನದೊಂದಿಗೆ ಕೆಲಸ ಮಾಡಲು ತುದಿಗಾಲಲ್ಲಿ ನಿಂತಿದೆ’

ವರದಿಗಾರ (ಮಾ.16): ಭಾರತವು ಒಂದು ಅದ್ಭುತ ದೇಶವಾಗಿದ್ದು, ಭಾರತಿಯರು ಅತಿಥಿಗಳನ್ನು ಅತ್ಯಂತ ಗೌರವದಿಂದ ಸತ್ಕರಿಸುತ್ತಾರೆ. ಭಾರತೀಯರು ಯುದ್ಧದಲ್ಲಿ ನಂಬಿಕೆಯಿಟ್ಟುಕೊಂಡವರಲ್ಲ ಹಾಗೂ ಯುದ್ಧವನ್ನು ಇಷ್ಟಪಡುವವರಲ್ಲ ಮತ್ತು ಪಾಕಿಸ್ತಾನ ಜೊತೆಗಿನ ವೈರತ್ವವನ್ನು ಇಷ್ಟಪಡಲಾರರು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್‌ ಶೋಯಬ್‌ ಅಖ್ತರ್‌ ತನ್ನ ಅಂತರಾಳದ ಅಭಿಪ್ರಾಯ ವ್ಯಕ್ತಪಡಿಸಿರುವುದನ್ನು ಮೂಲಗಳು ವರದಿ ಮಾಡಿವೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅಖ್ತರ್‌, ‘ಭಾರತವು ಶ್ರೇಷ್ಠ ತಾಣವಾಗಿದೆ. ಅಲ್ಲಿ ಅದ್ಭುತವಾದ ಜನರಿದ್ದಾರೆ. ಅವರು ಪಾಕಿಸ್ತಾನದೊಂದಿಗೆ ವೈರತ್ವ ಸಾಧಿಸುತ್ತಿದ್ದಾರೆಂದು ಅಥವಾ ಯಾವುದೇ ತರಹದ ಯುದ್ಧವನ್ನು ಬಯಸುತ್ತಾರೆ ಎಂದು ನಾನು ಭಾವಿಸಿಯೇ ಇಲ್ಲ’ ಎಂದು ಹೇಳಿರುವುದು ಅವರಿಗೆ ಭಾರತದೊಂದಿಗೆ ಆತ್ಮೀಯತೆ ಮತ್ತು ದೇಶದ ಜನರೊಂದಿಗಿರುವ ಪ್ರೀತಿಯನ್ನು ಪರಿಚಯಿಸಿದೆ.

ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ವೀಕ್ಷಕ ವಿವರಣೆಗಾರನಾಗಿಯೂ ಕಾಣಿಸಿಕೊಂಡಿದ್ದ ಅಖ್ತರ್‌, ನಾನು ಟಿವಿ ಕಾರ್ಯಕ್ರಮಗಳು ಮತ್ತು ಇತರೆ ಉದ್ದೇಶಗಳ ಸಲುವಾಗಿ ಭಾರತಕ್ಕೆ ತೆರಳಿದ್ದೇನೆ. ಒಂದು ವೇಳೆ ಯುದ್ಧ ಆರಂಭವಾದರೇ? ಎಂದೆಲ್ಲ ಭಾವಿಸಿದ್ದೆ. ಭಾರತದ ಉದ್ದಗಲಕ್ಕೂ ಸಂಚರಿಸಿ, ಆ ದೇಶವನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಹಾಗಾಗಿ, ಭಾರತವು ಪಾಕಿಸ್ತಾನದೊಂದಿಗೆ ಕೆಲಸ ಮಾಡಲು ತುದಿಗಾಲಲ್ಲಿ ನಿಂತಿದೆ ಎಂದು ನಾನು ಈ ದಿನ ವಿಶ್ವಾಸದಿಂದ ಹೇಳಬಲ್ಲೆ. ಭಾರತದ ಪ್ರಗತಿಯ ಹಾದಿಯು ಪಾಕಿಸ್ತಾನದ ಮೂಲಕವೇ ಸಾಗುತ್ತದೆ ಎಂಬುದು ನನಗೆ ಮನವರಿಕೆಯಾಗಿದೆ’ ಎಂಬುವುದಾಗಿ ಹೇಳಿದ್ದಾರೆ.

ಐಪಿಎಲ್‌ ಮುಂದೂಡಿಕೆ ಕುರಿತಂತೆ ಮಾತನಾಡಿರುವ ಅಖ್ತರ್, ‘ಇದರಿಂದಾಗುವ ನಷ್ಟವನ್ನು ಭರಿಸುವಲ್ಲಿ ಭಾರತ ಸಫಲವಾಗುತ್ತದೆ. ಅದರೆ, ಇದೆಲ್ಲವೂ (ಕೊರೊನಾ ವೈರಸ್‌ ಪರಿಣಾಮ) ದುರದೃಷ್ಟಕರ’ ಎಂದಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group