ರಾಷ್ಟ್ರೀಯ ಸುದ್ದಿ

ಸಾರ್ಕ್ ರಾಷ್ಟ್ರಗಳ ಕೊರೋನ ವೈರಸ್ ಪರಿಹಾರ ನಿಧಿಗೆ ಪ್ರಧಾನಿ ಮೋದಿಯಿಂದ 1 ಕೋಟಿ ಡಾಲರ್ ಘೋಷಣೆ

ವರದಿಗಾರ (ಮಾ.16): ವಿಶ್ವವನ್ನೇ ಕಾಡುತ್ತಿರುವ, ಹಲವು ಜೀವ ಹಾನಿಗೆ ಕಾರಣವಾದ ಕೊರೋನ ವೈರಸ್ ನ ಸಾರ್ಕ್ ರಾಷ್ಟ್ರಗಳ ಕೊರೋನ ಪರಿಹಾರ ನಿಧಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು 1 ಕೋಟಿ ಡಾಲರ್ ನ್ನು ಘೋಷಿಸಿದ್ದಾರೆ.

ಕೊರೋನ ವೈರಸ್ ನ ನಿಯಂತ್ರಣಕ್ಕಾಗಿ ‘ಸ್ವಯಂಪ್ರೇರಿತ ದೇಣಿಗೆ’ಮೂಲಕ ತುರ್ತು ನಿಧಿಯೊಂದನ್ನು ರೂಪಿಸುವಂತೆ
ಸಾರ್ಕ್ ದೇಶಗಳ ನಾಯಕರೊಂದಿಗೆ ವೀಡಿಯೊ ಕಾನ್ಫರೆನ್ಸ್‌ ಮೂಲಕ ನಡೆದ ಸಂವಾದದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ಕ್ ದೇಶಗಳಿಗೆ ಕರೆ ನೀಡಿದ್ದಲ್ಲದೆ ಭಾರತವು 1 ಕೋಟಿ ಡಾಲರ್ ಆರಂಭಿಕ ಕೊಡುಗೆಯನ್ನು ನೀಡಲಿದೆ‌ ಎಂದು ಹೇಳಿದ್ದಾರೆ.

ಸಂವಾದದಲ್ಲಿ ಮಾಲ್ಡಿವ್ ಅಧ್ಯಕ್ಷ ಇಬ್ರಾಹಿಂ ಮುಹಮ್ಮದ್ ಸೊಲಿಹ್, ಶ್ರೀಲಂಕಾ ಪ್ರಧಾನಿ ಗೊಟಬಯ ರಾಜಪಕ್ಷೆ, ಭೂತಾನ್ ಪ್ರಧಾನಿ ಲೋಟೆ ತ್ಯೆರಿಂಗ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಮತ್ತು ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಭಾಗವಹಿಸಿದ್ದರು. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಭಾಗವಹಿಸಿರಲಿಲ್ಲ. ಆದರೆ, ಅವರ ಪ್ರತಿನಿಧಿಯಾಗಿ ಡಾ. ಝಾಫರ್ ಮಿರ್ಜಾ ಪಾಲ್ಗೊಂಡರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group