ರಾಷ್ಟ್ರೀಯ ಸುದ್ದಿ

ಅಟ್ಟಹಾಸ ಮೆರೆದ ಗೋ ರಕ್ಷಕರು : ಪಶ್ಚಿಮ ಬಂಗಾಳದಲ್ಲಿ ಇಬ್ಬರ ಹತ್ಯೆ

ವರದಿಗಾರ- ಕೊಲ್ಕತ್ತಾ: ದೇಶದೆಲ್ಲೆಡೆ ಅಟ್ಟಹಾಸ ಮೆರೆಯುತ್ತಿರುವ ಗೋ ರಕ್ಷಕರ ಉಪಟಳವು ದಿನೇ ದಿನೇ ಮಿತಿ ಮೀರುತ್ತಿದ್ದು, ಪ್ರಧಾನಿ ಮೋದಿಯವರ ಹಲವು ಎಚ್ಚರಿಕೆಗಳ ಬಳಿಕವೂ ತಮ್ಮ ರಾಕ್ಷಸೀಯ  ಕೃತ್ಯವನ್ನು ಮುಂದುವರಿಸಿದ್ದಾರೆ

ಇಂದು ಬೆಳಗ್ಗೆ  ಪಶ್ಚಿಮ ಬಂಗಾಳದ ಜಲ್ಪೈಗುರಿ ಸಮೀಪದ ಬರ್ಹೋರಿಯ ಗ್ರಾಮದಲ್ಲಿ ಗೋ ರಕ್ಷಕರು ಇಬ್ಬರು ಗೋ ಸಾಗಾಟ ಮಾಡುತ್ತಿದ್ದ ವ್ಯಾಪಾರಿಗಳನ್ನು ತಡೆದು, ಹೊಡೆದು ಕೊಂದಿರುವ ಅಘಾತಕಾರಿ ಘಟನೆಯ ಬಗ್ಗೆ ವರದಿಯಾಗಿದೆ.

ಗೋ ರಕ್ಷಕರ ರಾಕ್ಷಸೀ ಕೃತ್ಯಕ್ಕೆ ಜೀವ ಕಳೆದುಕೊಂಡವರು ಅನ್ವರ್ ಹುಸೈನ್ (19) ಮತ್ತು ಹಫೀಝುಲ್ ಶೈಖ್ (19) ಎಂದು ತಿಳಿದು ಬಂದಿದೆ. ಇವರು ಪ್ರಯಾಣಿಸುತ್ತಿದ್ದ ಪಿಕ್ ಅಪ್ ವಾಹನವನ್ನು ಬರ್ಹೋರಿಯಾ ಗ್ರಾಮದಲ್ಲಿ ತಡೆಗಟ್ಟಿದ ದುಷ್ಕರ್ಮಿಗಳು, ವಾಹನದಿಂದ ಹೊರಗೆಳೆದು, ವಾಹನವನ್ನು ಧ್ವಂಸಗೈದು ವ್ಯಾಪಾರಿಗಳನ್ನು ಕೊಂದು ಹಾಕಿದ್ದಾರೆ. ಪೊಲೀಸರು ಇಬ್ಬರನ್ನೂ ಹತ್ತಿರದ ಧೂಪ್ಗುರಿ ಆಸ್ಪತ್ರೆಗೆ ಸಾಗಿಸಿದರೂ ಅಲ್ಲಿ ಅದಾಗಲೇ ಅವರು ಮೃತರಾಗಿದ್ದಾರೆಂದು ಘೋಷಿಸಿದರು

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group