ರಾಷ್ಟ್ರೀಯ ಸುದ್ದಿ

ಕೊರೋನ ವೈರಸ್ ನಿಂದ ಮೃತಪಟ್ಟವರಿಗೆ ಘೋಷಿಸಿದ್ದ 4 ಲಕ್ಷ ರೂ. ಪರಿಹಾರ ಹಿಂದೆಗೆದ ಕೇಂದ್ರ ಸರಕಾರ

ವರದಿಗಾರ (ಮಾ.15): ವಿಶ್ವವನ್ನೇ ಕಾಡಿದ ಅತ್ಯಂತ ಭಯಾನಕ ಕೊರೋನ ವೈರಸ್ ನಿಂದಾಗಿ ಮೃತಪಟ್ಟವರಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಶನಿವಾರ ಘೋಷಿಸಿದ ಕೇವಲ ಒಂದು ಗಂಟೆಗಳ ಅವಧಿಯಲ್ಲೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ತನ್ನ ಘೋಷಣೆಯನ್ನು ಹಿಂದೆ ತೆಗೆದುಕೊಂಡಿರುವುದು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.

ದೇಶದಲ್ಲಿ ಕೊರೋನ ವೈರಸ್ ನ್ನು ‘ಅಧಿಸೂಚಿತ ವಿಪತ್ತು ’ಎಂದು ಘೋಷಿಸಿರುವ ಕೇಂದ್ರ ಸರಕಾರ ಇದು ಸೋಂಕು ಪೀಡಿತ ವ್ಯಕ್ತಿಗಳಿಗೆ ಮತ್ತು ಸೋಂಕಿನಿಂದಾಗಿ ಮೃತರ ಕುಟುಂಬಗಳಿಗೆ ಪರಿಹಾರ ಮತ್ತು ನೆರವನ್ನು ಒದಗಿಸುವ ‘ವಿಶೇಷ ಒಂದು ಬಾರಿಯ ವ್ಯವಸ್ಥೆ ’ಯಾಗಿದೆ ಎಂದು ತಿಳಿಸಿತ್ತು. ಕೊರೋನ ವೈರಸ್ ನಿಂದ ಮೃತರ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂ. ಪರಿಹಾರವನ್ನು ನೀಡಲಾಗುವುದು. ಚಿಕಿತ್ಸೆ ಪಡೆಯುತ್ತಿರುವ ಸೋಂಕು ಪೀಡಿತರ ಆಸ್ಪತ್ರೆ ವೆಚ್ಚವನ್ನು ರಾಜ್ಯ ಸರಕಾರಗಳು ನಿಗದಿಗೊಳಿಸಿವೆ ಎಂದು ಗೃಹ ಸಚಿವಾಲಯವು ತನ್ನ ಪತ್ರದಲ್ಲಿ ತಿಳಿಸಿತ್ತು.

ಆದರೆ, ಘೋಷಿಸಿದ ಒಂದು ಗಂಟೆಗಳ ಬಳಿಕ ಬಿಡುಗಡೆ ಮಾಡಲಾದ ಪರಿಷ್ಕೃತ ಅಧಿಸೂಚನೆಯಲ್ಲಿ ಪ್ರತ್ಯೇಕ ನಿಗಾ ಕ್ರಮಗಳು, ಮಾದರಿ ಸಂಗ್ರಹ ಹಾಗೂ ಪರೀಕ್ಷೆಗೆ ಹಣಕಾಸಿನ ನೆರವು ನೀಡಲಾಗುವುದು ಎಂದು ಮಾತ್ರ ಹೇಳಲಾಗಿದೆ. ಅಗತ್ಯದ ಉಪಕರಣಗಳು ಹಾಗೂ ಪ್ರಯೋಗಾಲಯಗಳನ್ನು ಹೊಂದುವುದು ರಾಜ್ಯ ವಿಪತ್ತು ಪರಿಹಾರ ನಿಧಿ ಒಳಗಡೆ ಬರುತ್ತದೆ ಎಂದು ಹೇಳಿದೆ. ಎಲ್ಲ ಕೊರೋನ ವೈರಸ್ ಸೋಕಿನಿಂದ ಮೃತಪಟ್ಟವರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ಹಾಗೂ ಎಲ್ಲ ಸೋಂಕಿತರಿಗೆ ಆಸ್ಪತ್ರೆಯ ವೆಚ್ಚವನ್ನು ಬರಿಸುವ ಷರತ್ತನ್ನು ಈ ಅಧಿಸೂಚನೆಯಲ್ಲಿ ಅಳಿಸಲಾಗಿದೆ. ಈ ಹಿಂದಿನ ಅಧಿಸೂಚನೆಯಲ್ಲಿ ಪ್ರತ್ಯೇಕ ನಿಗಾ ಶಿಬಿರಗಳಲ್ಲಿರುವ ರೋಗಿಗಳು ಮತ್ತು ಜನರಿಗೆ ತಾತ್ಕಾಲಿಕ ವಸತಿ ಹಾಗೂ ಆಹಾರ, ನೀರು,ಬಟ್ಟೆ ಮತ್ತು ವೈದ್ಯಕೀಯ ನೆರವು ಒದಗಿಸುವುದು ಸರಕಾರವು ವಿವರಿಸಿದೆ. ಹೆಚ್ಚುವರಿ ಪರೀಕ್ಷಾ ಕೇಂದ್ರಗಳು,ಪೊಲೀಸರು,ಆರೋಗ್ಯ ರಕ್ಷಣೆ ಮತ್ತು ಮುನ್ಸಿಪಲ್ ಅಧಿಕಾರಿಗಳಿಗೆ ರಕ್ಷಣಾ ಉಪಕರಣಗಳು,ಸರಕಾರಿ ಆಸ್ಪತ್ರೆಗಳಿಗೆ ಥರ್ಮಲ್ ಸ್ಕಾನರ್‌ಗಳು ಮತ್ತು ಇತರ ಅಗತ್ಯ ಉಪಕರಣಗಳ ವೆಚ್ಚವನ್ನು ಪಾವತಿಸಲು ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಹಣವನ್ನು ಬಳಸಿಕೊಳ್ಳಲಾಗುವುದು. ಇದಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯನ್ನು ಬಳಸಲಾಗುವುದಿಲ್ಲ. ಉಪಕರಣಗಳ ಒಟ್ಟು ವೆಚ್ಚ ನಿಧಿಯ ವಾರ್ಷಿಕ ಹಂಚಿಕೆಯ ಶೇ.10ನ್ನು ಮೀರುವಂತಿಲ್ಲ ಎಂದು ಸರಕಾರವು ತಿಳಿಸಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group