ರಾಜ್ಯ ಸುದ್ದಿ

ಪೌರತ್ವ ಕಾಯ್ದೆ ವಿರುದ್ಧ ಮಾತನಾಡಿದ್ದಕ್ಕೆ ಜೀವ ಬೆದರಿಕೆಯನ್ನು ಎದುರಿಸುತ್ತಿದ್ದೇನೆ: ಭವ್ಯ ನರಸಿಂಹಮೂರ್ತಿ

-ಹೆದರಿಸಿ ಸತ್ಯದ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ

ವರದಿಗಾರ (ಮಾ.13): ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಪೌರತ್ವ ಕಾಯ್ದೆ ವಿರುದ್ಧ ಮಾತನಾಡಿರುವುದಕ್ಕಾಗಿ ನಾನು ಹಲವು ಕಡೆಗಳಿಂದ ಜೀವ ಬೆದರಿಕೆಯನ್ನು ಎದುರಿಸುತ್ತಿದ್ದೇನೆ ಎಂದು ಸಾಮಾಜಿಕ ಹೋರಾಟಗಾರ್ತಿ ಭವ್ಯ ನರಸಿಂಹಮೂರ್ತಿ ಹೇಳಿಕೆ ನೀಡಿದ್ದು, ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಅವರು ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನ ತನ್ನ ಖಾತೆಯಲ್ಲಿಂದು ಪ್ರಸಕ್ತ ಸನ್ನಿವೇಶದ ಬಗ್ಗೆ ನಡೆಸಿದ ಲೈವ್ ಸಂದರ್ಭ ಈ ವಿಚಾರವನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದಲ್ಲದೆ ಈ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಭವ್ಯ ಮಾತನಾಡುತ್ತಾ, ‘ಹಲವು ರೀತಿಯ ಟ್ರೋಲ್ ಗಳಿಗೆ ನಾನಿಂದು ಗುರಿಯಾಗಿದ್ದಲ್ಲದೆ ಅತ್ಯಂತ ಕೆಟ್ಟ ಪದಗಳಿಂದ ಅವರು ಪ್ರತಿಕ್ರಿಸುತ್ತಿದ್ದಾರೆ. ಇನ್ನು ಮುಂದುವರಿದು ಹಲವರು ಜೀವ ಬೆದರಿಕೆಯನ್ನೂ ಹಾಕಿದ್ದಾರೆ. ಇವರ ಈ ಮನಸ್ಥಿಯ ಬಗ್ಗೆ ನಾನು ಆತಂಕ ವ್ಯಕ್ತಪಡಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.

‘ಈ ಮೂಲಕ ನೀವು ಮಹಿಳೆಯೊಬ್ಬರ ಆತ್ಮ ಸ್ಥೈರ್ಯ ವನ್ನು ಕುಗ್ಗಿಸುವ ಪ್ರಯತ್ನವಾದರೆ ಅದು ಖಂಡಿತ ಸಾಧ್ಯವೇ ಇಲ್ಲ’ ಎಂದು ಇದೇ ಸಂದರ್ಭ ಜೀವ ಬೆದರಿಕೆಯೊಡ್ಡಿರುವವರಿಗೆ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದ್ದಾರೆ.

‘ಈ ಬಗ್ಗೆ ಇದೀಗಾಗಲೇ ಯಶವಂತಪುರ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದೇನೆ’ ಎಂದು ಹೇಳಿದ್ದಾರೆ.

ಇದೇ ಸಂದರ್ಭ ಟ್ರೋಲಿಗರನ್ನು ಮತ್ತು ಜೀವ ಬೆದರಿಕೆ ಹಾಕಿದ ಜನರಿಗೆ ತನ್ನ ಪ್ರೀತಿಯ ಮಾತುಗಳಿಂದ ಬುದ್ದಿವಾದವನ್ನೂ ನೀಡಿದ್ದಾರೆ.

ಮಾತನಾಡಿರುವ ಲೈವ್ ವೀಡಿಯೋ ವೀಕ್ಷಿಸಿ

#ಯುವಸಂವಾದ #yuvasamvaada

Posted by Bhavya Narasimhamurthy on Friday, March 13, 2020

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group