
‘ಸಿಎಎ ಕಾನೂನು ಕೇವಲ ಒಂದು ಧರ್ಮದ ವಿರೋಧಿಯಲ್ಲ. ಸಂವಿಧಾನ ಮತ್ತು ಈ ದೇಶದ ವಿರೋಧಿಯಾಗಿದೆ.’
ವರದಿಗಾರ,ಫೆ.18: ಸದಾ ಸುಳ್ಳನ್ನೇ ಹೇಳಿಕೊಂಡು ಬಂದಿರುವ ಪ್ರಧಾನಿ ನರೇಂದ್ರ ಮೋದಿಯವರ ಮಾತಿನಲ್ಲಿ ನನಗೆ ಯಾವುದೇ ನಂಬಿಕೆಯಿಲ್ಲ ಎಂದು ಪತ್ರಕರ್ತ, ಚಿಂತಕರಾದ ರಾ ಚಿಂತನ್ ರವರು ಹೇಳಿದ್ದಾರೆ.
ಅವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಂಸ್ಥಾಪನಾ ದಿನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ದೇರಳಕಟ್ಟೆಯಲ್ಲಿ ನಡೆದ ಐಕ್ಯತಾ ಮಾರ್ಚ್ ಹಾಗೂ ಸಾರ್ವಜನಿಕ ಸಮಾವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಆ ಬಳಿಕ ‘ವರದಿಗಾರ’ರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತಾ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.
ಸಿಎಎ ಕಾಯ್ದೆಯಲ್ಲಿ ಮುಸಲ್ಮಾನರಿಗೆ ಯಾವುದೇ ರೀತಿಯ ತೊಂದರೆಯಿಲ್ಲವೆಂದು ಕೇಂದ್ರ ಸರಕಾರ ಹೇಳಿಕೊಂಡಿದೆ. ಆದರೂ ನೀವ್ಯಾಕೆ ಸಿಎಎ ವಿರುದ್ಧ ಮಾತನಾಡುತ್ತಿದ್ದೀರಿ ಎಂಬ ಪ್ರಶ್ನೆಗೆ ರಾ ಚಿಂತನ್ ಉತ್ತರಿಸುತ್ತಾ, ‘ನಾನು ಪ್ರಧಾನಿ ಮೋದಿಯವರ ಮಾತುಗಳನ್ನು ನಂಬುತ್ತಿದ್ದೆ. ಅದು ಹೇಗೆಂದರೆ, ಅವರು ತಾನು ಮದುವೆಯಾಗಿಲ್ಲ ಎಂದು ಹೇಳಿದರು. ಅದನ್ನು ನಾನು ನಂಬಿದೆ. ಅದು ಸುಳ್ಳು ತಾನೇ?. 15 ಲಕ್ಷ ಹಣವನ್ನು ಖಾತೆಗೆ ಹಾಕುತ್ತೇನೆ ಎಂದು ಹೇಳಿದರು. ಅದನ್ನೂ ನಾನು ನಂಬಿದೆ. ಅದು ಸುಳ್ಳು ತಾನೇ?. 10 ವರ್ಷಗಳ ಹಿಂದೆ ನಾನು ಎಸ್ಎಲ್ಸಿ, ಅಥವಾ ಯಾವುದೇ ಉನ್ನತ ವಿದ್ಯಾಭ್ಯಾಸ ಮುಗಿಸಿಲ್ಲ ಅಂದು ಹೇಳಿದ್ದರು. ಆದರೆ ಅಮಿತ್ ಶಾ ಅವರ ಡಿಗ್ರಿ ಪ್ರಮಾಣ ಪತ್ರ ಬಿಡುಗಡೆಗೊಳಿಸಿದ್ದಾರೆ. ಅದು ಸುಳ್ಳು ತಾನೇ? ಎಂದು ಅವರು ಪ್ರಶ್ನಿಸಿದ್ದಾರೆ.
ವೀಡಿಯೋ ವೀಕ್ಷಿಸಿ
ಸುಳ್ಳನ್ನೇ ಬಂಡವಾಳವಾಗಿಸಿಕೊಂಡು ಬಂದಿರುವ ಅವರು ನೋಟು ಅಮಾನ್ಯೀಕರಣ ಮಾಡಿ ಕ್ರಾಂತಿ ಮಾಡುತ್ತೇನೆ ಎಂದು ಹೇಳಿದ್ರಿ. ಆದರೆ ಅದರಿಂದ ಎಷ್ಟೊಂದು ಜನ ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಸರಿಯಾದ ವೇತನಗಳಿ ಕಳೆದ 6 ತಿಂಗಳಿನಿಂದ ಸಿಗುತ್ತಿಲ್ಲ. ಇರುವಂತಹ ಕಂಪೆನಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ನಂಬಿಕೆ ನೀಡಿದ್ದ ಪ್ರಧಾನಿ ಮೋದಿಯವರ ಸಿಎಎ ಕಾಯ್ದೆಯಲ್ಲಿ ಮುಸಲ್ಮಾನರಿಗೆ ಯಾವುದೇ ರೀತಿಯ ತೊಂದರೆಯಿಲ್ಲ ಎಂಬ ಹೇಳಿಕೆಯನ್ನು ನಂಬುತ್ತಿದ್ದೆ ಎಂದು ಹೇಳಿದ್ದಾರೆ.
ಎನು ಭರವಸೆ ಕೊಟ್ಟಿದ್ರಾ ಅದನ್ನು ಪೂರ್ತಿಗೊಳಿಸುತ್ತಿದ್ದರೆ ನಾನು ಅವರ ಮಾತನ್ನು ನಂಬುತ್ತಿದ್ದೆ. ಆದರೆ ಸುಳ್ಳನ್ನು ಮಾತ್ರ ಹೇಳಿಕೊಂಡು ಬಂದ ಪ್ರಧಾನಿ ಮೇಲೆ ನನಗೆ ಯಾವುದೇ ರೀತಿಯ ನಂಬಿಕೆನೇ ಇಲ್ಲ ಎಂದಿದ್ದಾರೆ.
ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ, ಗೋಡ್ಸೆಯನ್ನು ದೇಶಪ್ರೇಮಿಯಾಗಿ ಬಿಂಬಿಸಲಾಗುತ್ತಿದೆ. ಪೂಜಾ ಶಕುನ್ ಪಾಂಡೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಕ್ರಿತಿಗೆ ಗುಂಡಿಕ್ಕಿದವರ ವಿರುದ್ಧ ಮಾತನಾಡಿದವರ ಮೇಲೆಯೇ ಪ್ರಕರಣ ದಾಖಲಾಗುತ್ತಿದೆಯೇ ಹೊರತು ಅವರ ವಿರುದ್ಧವಲ್ಲ. ನಮ್ಮ ದೇಶದ ಪರವಾಗಿ, ನಮ್ಮ ಹಕ್ಕಿನ ಪರವಾಗಿ ಹೋರಾಟ ಮತ್ತು ಪ್ರತಿಭಟನೆಗೆ ಮಾಡಲು ಅವಕಾಶವನ್ನು ನಿರಾಕರಿಸಲಾಗುತ್ತದೆ ಎಂದು ಹೇಳಿದ್ದಾರೆ.
ರಾ ಚಿಂತನ್ ರವರ ಸಂಪೂರ್ಣ ಭಾಷಣದ ವೀಡಿಯೋ ವೀಕ್ಷಿಸಿ
