ರಾಜ್ಯ ಸುದ್ದಿ

ಗನ್ ಮೂಲಕ ಹೆದರಿಸಲು ಪ್ರಯತ್ನಿಸಿದರೂ ಹೆದರಲಿಲ್ಲ. ಹೆದರಿಸಲು ಸಾಧ್ಯವೂ ಇಲ್ಲ; ಬಿಲಾಲ್ ಬಾಗ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಭವ್ಯ ನರಸಿಂಹಮೂರ್ತಿ

ವರದಿಗಾರ, ಫೆ.11: ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ದೆಹಲಿಯ ಶಾಹೀನ್ ಬಾಗ್ ನಲ್ಲಿ ಕಳೆದ ಹಲವು ದಿನಗಳಿಂದ ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರ ಮೇಲೆ ಗನ್ ಪ್ರಯೋಗಿಸಿ ಹೆದರಿಸಲು ಪ್ರಯತ್ನಿಸಿದರೂ ಒಬ್ಬರೂ ಹೆದರಲಿಲ್ಲ. ಗುಂಡೇಟಿನ ಮೂಲಕ ಹೆದರಿಸಲು ಸಾಧ್ಯವೂ ಇಲ್ಲ ಎಂದು ಮಹಿಳಾ ಹೋರಾಟಗಾರ್ತಿ ಭವ್ಯ ನರಸಿಂಹಮೂರ್ತಿ ಹೇಳಿದ್ದಾರೆ.

ದೆಹಲಿಯ ಶಾಹೀನ್ ಬಾಗ್ ರೀತಿಯಲ್ಲೇ ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿ ‘ಬಿಲಾಲ್ ಬಾಗ್’ ಹೆಸರಿನಲ್ಲಿ ಕಳೆದ ಮೂರು ದಿನಗಳಿಂದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಆಹೋರಾತ್ರಿ ಪ್ರತಿಭಟಿಸುತ್ತಿರುವ ಸಾರ್ವಜನಿಕರಿಗೆ ಬೆಂಬಲ ಸೂಚಿಸಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಭವ್ಯ ಸೋಮವಾರ ರಾತ್ರಿ ಮಾತನಾಡುತ್ತಿದ್ದರು.

ಈ ಪ್ರತಿಭಟನೆ ನಿಮ್ಮ ಧರ್ಮಕ್ಕೋಸ್ಕರ ಮಾಡುತ್ತಿಲ್ಲ. ಬದಲಾಗಿ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಮತ್ತು ಈ ದೇಶಕ್ಕಾಗಿ  ಮಾಡುತ್ತಿದ್ದೀರಿ ಎಂದು ಹೇಳಿದ್ದಾರೆ.

ಒಂದು ಮಹಿಳೆಗೆ ಶಿಕ್ಷಣ ನೀಡಿದರೆ ಅದು ತನ್ನ ಸಂಪೂರ್ಣ ಪರಿವಾರಕ್ಕೆ ಶಿಕ್ಷಣ ನೀಡಿದಕ್ಕೆ ಸಮವಾಗಿದೆ. ಕೇಂದ್ರ ಸರಕಾರ ಸಿಎಎ ಜಾರಿಗೆ ತರಲು ಉದ್ದೇಶಿಸಿರುವ ಹಣದಲ್ಲಿ 10 ಕೋಟಿ ವಿದ್ಯಾರ್ಥಿಗಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಲು ಸಾಧ್ಯವಿದೆ. ಆದರೆ ಸರಕಾರಕ್ಕೆ ಜನರು ಶಿಕ್ಷಿತರಾಗುವುದು ಬೇಕಾಗಿಲ್ಲ. ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿದೆ.

ವೀಡಿಯೋ ವೀಕ್ಷಿಸಿ:

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group