ರಾಷ್ಟ್ರೀಯ ಸುದ್ದಿ

ಕೇಂದ್ರ ಬಜೆಟ್; 10ರಲ್ಲಿ 1 ಅಥವಾ 0 ಯಾವುದನ್ನಾದರೂ ಆಯ್ಕೆ ಮಾಡಬಹುದು: ಚಿದಂಬರಂ ವ್ಯಂಗ್ಯ

ವರದಿಗಾರ, ಫೆ.2: ನಿನ್ನೆಯಷ್ಟೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಪ್ರಕಟಿಸಿರುವ ಕೇಂದ್ರ ಬಜೆಟ್‌ 2020ಗೆ ಬಗ್ಗೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ವ್ಯಂಗ್ಯವಾಡಿದ್ದಲ್ಲದೆ ಜನರಿಗೆ ಸಂಖ್ಯೆಯ ಮೂಲಕ ಆಯ್ಕೆ ನೀಡಿರುವುದು ಬಜೆಟ್ ನ ಬಗ್ಗೆ ಅವರ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ.

ಪಿ.ಚಿದಂಬರಂ ಪ್ರತಿಕ್ರಿಯಿಸುತ್ತಾ, 10 ರಲ್ಲಿ 1 ಮತ್ತು 0 ಇದೆ. ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಿ ಎಂದು ಸಾರ್ವಜನಿಕರೊಂದಿಗೆ ಹೇಳಿಕೊಂಡಿದ್ದಾರೆ.

‘ಸತತ ಮೂರು ತ್ರೈಮಾಸಿಕದಲ್ಲಿ ಬೆಳವಣಿಗೆ ದರ ಇಳಿಕೆಯಾದರೂ ಸರಕಾರ ಮಾತ್ರ ಹಣಕಾಸು ಕ್ಷೇತ್ರದಲ್ಲಿ ಗಂಭೀರ ಆರ್ಥಿಕ ಸವಾಲನ್ನು ಎದುರಿಸುತ್ತಿರುವುದನ್ನು ಈ ಬಜೆಟ್ ನಲ್ಲೂ ಸಂಪೂರ್ಣವಾಗಿ ನಿರಾಕರಿಸಿದೆ’ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

“2020-21 ರಲ್ಲಿ ದೇಶದ ಬೆಳವಣಿಗೆ ದರ ಮೇಲೇಳುತ್ತದೆ ಎಂಬುದನ್ನು ನಂಬಲು ಬಜೆಟ್‌ನಲ್ಲಿ ಒಂದೇ ಒಂದು ಸೂಚನೆಗಳೂ ಇಲ್ಲ. ಮುಂದಿನ ವರ್ಷ 6 ರಿಂದ 6.5 ಬೆಳವಣಿಗೆ ದರ ಇರಲಿದೆ ಎಂಬುವುದು ಬೆರಗುಗೊಳಿಸುವ ಮತ್ತು ಬೇಜವಾಬ್ದಾರಿತನದ ವಾದ,” ಎಂದು ಟೀಕಿಸಿದ್ದಾರೆ.

ಆರ್ಥಿಕತೆ ಬೇಡಿಕೆಯ ಕೊರತೆ ಮತ್ತು ಹೂಡಿಕೆಯ ಹಸಿವಿನಿಂದ ಬಳಲುತ್ತಿದೆ ಎಂದು ಅವರು ವಿಶ್ಲೇಷಿಸಿದ್ದಾರೆ. “ಹಣಕಾಸು ಸಚಿವರು ಈ ಎರಡೂ ಸವಾಲುಗಳನ್ನು ಒಪ್ಪಿಕೊಂಡಿಲ್ಲ. ಅವರ ಬಗ್ಗೆ ಕನಿಕರ ಉಂಟಾಗುತ್ತಿದೆ. ಈ ಎರಡು ಸವಾಲುಗಳಿಗೆ ಆಕೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಈ ಎರಡು ಸವಾಲುಗಳು ಇದ್ದಲ್ಲಿ ಆರ್ಥಿಕತೆ ಮೇಲೇಳಲ್ಲ ಮತ್ತು ಲಕ್ಷಾಂತರ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಉಳಿಗಾಲವಿಲ್ಲ”.

“ಇತ್ತೀಚಿನ ವರ್ಷಗಳಲ್ಲಿ ಹಣಕಾಸು ಮಂತ್ರಿಯೊಬ್ಬರು ನೀಡಿದ ಅತಿ ಉದ್ದದ ಬಜೆಟ್ ಭಾಷಣವನ್ನು ನಾವು ಕೇಳಿದ್ದೇವೆ. ಇದು 160 ನಿಮಿಷಗಳ ಕಾಲ ನಡೆಯಿತು. ಇದರಿಂದ, ನೀವೆಲ್ಲರೂ ದಣಿದಿದ್ದರೆ; ನನ್ನಂತೆ – ನಾನು ನಿಮ್ಮನ್ನು ದೂಷಿಸುವುದಿಲ್ಲ” ಎಂದಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group