ಜಿಲ್ಲಾ ಸುದ್ದಿ

ಕೊಡಂಗೆ ಶಾಲೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಅದೇ ಶಾಲೆಗೆ ಪ್ರಥಮ ಸ್ಥಾನ

ವರದಿಗಾರ-ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ‌ ಹಿರಿಯ ಪ್ರಾಥಮಿಕ ಶಾಲೆ ಕೊಡಂಗೆಯಲ್ಲಿ ವಲಯ ಮಟ್ಟದ ಕಬಡ್ಡಿ ಪಂದ್ಯಾಟ ಆದಿತ್ಯವಾರ ನಡೆಯಿತು.
ಶಾಲಾಭಿವೃಧ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಬಿ.ಎಂ ಇಸ್ಮಾಯಿಲ್ ಕ್ರೀಡಾಕೂಟದ ಅಧ್ಯಕ್ಷತೆಯನ್ನು ವಹಿಸಿದರು.  ಒಟ್ಟು 18 ಶಾಲಾ‌ ವಿದ್ಯಾರ್ಥಿಗಳು ಭಾಗವಹಿಸಿದ್ದು, ಹುಡುಗರ ತಂಡದಲ್ಲಿ ಕೊಡಂಗೆ ಶಾಲೆ ಪ್ರಥಮ‌ ಬಹುಮಾನವನ್ನು, ದ್ವಿತೀಯ ಸ್ಥಾನವನ್ನು ದಾರುಲ್ ಇಸ್ಲಾಂ ಶಾಲೆ ಅಕ್ಕರಂಗಡಿ, ಹುಡುಗಿಯರ ತಂಡದಲ್ಲಿ ತೌಹೀದ್ ಆಂಗ್ಲ ಮಾದ್ಯಮ ಶಾಲೆ ಬಂಟ್ವಾಳ ಪ್ರಥಮ ಸ್ಥಾನವನ್ನು ಬೆಸ್ಟ್ ಇಂಗ್ಲಿಷ್ ಮೀಡಿಯಂ‌ ಶಾಲೆ ಕೈಕಂಬ ದ್ವಿತೀಯ ಸ್ಥಾನವನ್ನು ಪಡೆದಿದೆ ಸಂಸ್ಥೆ ತಿಳಿಸಿದೆ.
ಈ ಸಂದರ್ಭ ಮೊಹಮ್ಮದ್ ಪರ್ಲಿಯಾ ಸಾಗರ್, ಗುತ್ತಿಗೆದಾರರಾದ ಇಬ್ರಾಹಿಂ ಪರ್ಲಿಯಾ, ಹೈದರ್, ಜವಾನ್ ಫ್ರೆಂಡ್ಸ್ ಸತ್ತಾರ್ ನಂದರಬೆಟ್ಟು, ಅಟೋ ಚಾಲಕ ಹೈದರ್ ಕಡ್ಪಿಕೆರೆ, ಶಾಲಾ ಮುಖ್ಯೋಪಾದ್ಯಾಯರಾದ ಸುನಿತಾ, ಅದ್ಯಾಪಕರಾದ ರೀಟಾ ಹಾಗೂ ಎಸ್.ಡಿ.ಎಂ.ಸಿ.  ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group