ಸಾಮಾಜಿಕ ತಾಣ

ವಂದೇ ಮಾತರಂ ಹಾಡಲು ಬಾರದ ‘ಪೋಸ್ಟ್ ಕಾರ್ಡ್’ನ ಮಹೇಶ್ ಹೆಗ್ಡೆಯನ್ನು ‘ರೋಸ್ಟ್’ ಮಾಡಿದ ಸಾಮಾಜಿಕ ಕಾರ್ಯಕರ್ತರು !

  • ವಂದೇ ಮಾತರಂನ್ನು ದೇಶಭಕ್ತಿಯ ಮಾನದಂಡವಾಗಿಸಿದವರ ನಿಜ ಬಣ್ಣ ಬಯಲು !

ವರದಿಗಾರ ಜ 31 : ವಂದೇ ಮಾತರಂ ಹಾಡನ್ನು ಹಾಡದವರು ಇಲ್ಲಿ ಜೀವಿಸಲು ಅರ್ಹರಲ್ಲ, ಭಾರತದಲ್ಲಿರಬೇಕಾದರೆ ವಂದೇ ಮಾತರಂ ಕಡ್ಡಾಯ ಎಂದೆಲ್ಲಾ ‘ಅಪ್ಪಣೆ’ ಹೊರಡಿಸುತ್ತಿದ್ದವರ ಹೀರೋ ಹಾಗೂ ಸುಳ್ಳು ಸುದ್ದಿಗಳಿಗೆ ಕುಖ್ಯಾತಿ ಪಡೆದಿರುವ ‘ಪೋಸ್ಟ್ ಕಾರ್ಡ್’ ಅಂತರ್ಜಾಲ ಸುದ್ದಿ ತಾಣದ ಮುಖ್ಯಸ್ಥ ಮಹೇಶ್ ವಿಕ್ರಂ ಹೆಗ್ಡೆಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಾಮಾಜಿಕ ಕಾರ್ಯಕರ್ತರಾದ ನಝ್ಮಾ ನಝೀರ್, ಕವಿತಾ ರೆಡ್ಡಿ ಹಾಗೂ ಅಮೂಲ್ಯ ಇವರುಗಳು ವಂದೇ ಮಾತರಂ ಹಾಡುವಂತೆ ಕೇಳಿಕೊಂಡಾಗ ಹಾಡಲು ಬಾರದ ಮಹೇಶ್ ಹೆಗ್ಡೆಗೆ ಮೌನವೇ ಆಸರೆಯಾಗಿತ್ತು. ಈ ಕುರಿತಾಗಿನ ವೀಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ. ಈ ಮೂಲಕ ವಂದೇ ಮಾತರಂ ಹಾಡಿನ ಪೇಟೆಂಟ್ ಪಡೆದವರಂತೆ ವರ್ತಿಸುತ್ತಿದ್ದವರ ಬಣ್ಣ ಬಯಲಾಗಿದೆ.

Like us on Facebook

ಸುಳ್ಳು ಸುದ್ದಿಗಳ ಆಗರವೆಂದೇ ಕುಖ್ಯಾತಿ ಪಡೆದಿರುವ ‘ಪೋಸ್ಟ್ ಕಾರ್ಡ್’ ಸುದ್ದಿ ತಾಣದ ಮುಖ್ಯಸ್ಥ ಮಹೇಶ್ ಹಾಗೂ ಈ ಮೂವರು ಕಾರ್ಯಕರ್ತರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಭೇಟಿಯಾಗಿದ್ದರು. ಈ ವೇಳೆ ಮಹೇಶನ ಬಳಿ ತೆರಳಿ ವಂದೇ ಮಾತರಂ ಹಾಡಲು ಇತರರನ್ನು ಬಲವಂತಪಡಿಸುವ ತಾವುಗಳು ಒಮ್ಮೆ ಅದನ್ನು ಹಾಡಿ ತೋರಿಸಿ ಎಂದು ಸವಾಲು ಹಾಕಿದಾಗ, ಹಾಡಲು ಬಾರದ ಮಹೇಶ್ ವಿಕ್ರಂ ಹೆಗ್ಡೆ ನಗುತ್ತಲೇ ತನ್ನ ಅಸಹಾಯಕತೆಯನ್ನು ತೋರ್ಪಡಿಸುವ ದೃಶ್ಯ ವೈರಲ್ ಆಗಿರುವ ವೀಡೀಯೋದಲ್ಲಿ ದಾಖಲಾಗಿದೆ. ಹಲವು ಬಾರಿ ವಂದೇ ಮಾತರಂ ಹಾಡುವಂತೆ ಕೇಳಿದಾಗಲೂ ಮಹೇಶ್ ಮಾತ್ರ ಮೌನ ವಹಿಸಿ ಬಚಾವಾಗುವ ಪ್ರಯತ್ನ ಪಟ್ಟಿದ್ದ. ಆದರೆ ಛಲ ಬಿಡದ ಮೂವರು ಯುವತಿಯರು, ವಂದೇ ಮಾತರಂ ಹಾಡಲು ತಮಗೆ ಬರಲ್ಲ ಎಂದಾದರೆ ಕನಿಷ್ಟ ನಮ್ಮ ನಾಡ ಗೀತೆಯನ್ನಾದರೂ ಹಾಡಿ ಎಂದು ಮತ್ತೊಂದು ಸವಾಲು ಹಾಕಿದಾಗಲೂ ಮಹೇಶನಿಗೆ ಮೌನವಲ್ಲದೆ ಬೇರೆ ದಾರಿ ಇರಲಿಲ್ಲ.

ಒಟ್ಟಿನಲ್ಲಿ ವಂದೇ ಮಾತರಂ ಹಾಡನ್ನು ದೇಶಭಕ್ತಿಯ ಮಾನದಂಡವನ್ನು ಅಳೆಯುವ ಹಾಡನ್ನಾಗಿಸಿದವರ ನಿಜಬಣ್ಣವನ್ನು ಅದೇ ಹಾಡಿನ ಮೂಲಕ ಬಯಲಾಗಿಸಿದ ಕೀರ್ತಿ ಈ ಮೂವರು ಯುವತಿಯರಿಗೆ ಸಲ್ಲಬೇಕಾಗಿದೆ. ಇತರರನ್ನು ವಂದೇ ಮಾತರಂ ಹಾಡಲು ಬಲವಂತಪಡಿಸುವ ಶಕ್ತಿಗಳು ತಮಗೆ ಹಾಡಲು ಬಾರದೆ ಮುಖಭಂಗಕ್ಕೀಡಾಗಿರುವುದು ಇದು ಮೊದಲ ಬಾರಿಯೇನಲ್ಲ. ಹಲವಾರು ಟಿವಿ ಡಿಬೇಟ್ ಗಳಲ್ಲಿ, ಬಹಿರಂಗ ಚರ್ಚಾ ವೇದಿಕೆಗಳಲ್ಲಿ, ಹೆಚ್ಚೇಕೆ ತೀರಾ ಇತ್ತೀಚೆಗೆ ಜಾರ್ಖಂಡ್ ರಾಜ್ಯ ಬಿಜೆಪಿ ಹಮ್ಮಿಕೊಂಡಿದ್ದ ಸಿಎಎ ಪರ ಸಭೆಯ ಪ್ರಾರಂಭದಲ್ಲಿ ವಂದೇ ಮಾತರಂ ಹಾಡನ್ನು ಆರಂಭಿಸಿದ್ದವರು ಅದನ್ನು ಮುಂದುವರಿಸಲಾಗದೆ ಹಳಿ ತಪ್ಪಿದ ವಂದೇ ಮಾತರಂ ಹಾಡನ್ನು ಹಾಡಿ ನಗೆಪಾಟಲಿಗೀಡಾಗಿದ್ದರು. ಆ ಪಟ್ಟಿಗೆ ಈಗ ಮಹೇಶ್ ಹೆಗ್ಡೆ ಕೂಡಾ ಸೇರಿಕೊಂಡಿದ್ದಾನೆ.

ವೈರಲ್ ಆಗಿರುವ ವೀಡಿಯೋ

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group