ಸಾಮಾಜಿಕ ತಾಣ

ಪೌರತ್ವದ ಸಂಸ್ಕೃತಿಯ ಪಾಠ ಕೇಳಿ ಕಾಲ್ಕಿತ್ತ ಬಿಜೆಪಿಗರು!

ಸಿಎಎ ಪರ ಜಾಗೃತಿ ಮೂಡಿಸಲು ಬಂದ ಬಿಜೆಪಿಗರಿಗೆ ಮಾನವೀಯತೆಯ ಪಾಠ ಮಾಡಿದ ಮಹಿಳೆ!

ವರದಿಗಾರ, ಜ 30:  ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಬಿಜೆಪಿಯು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದು ಈ ಬಗ್ಗೆ ರಾಷ್ಟ್ರೀಯ ಅಭಿಯಾನವನ್ನೇ ಹಮ್ಮಿಕೊಂಡಿದೆ. ಆದರೆ ಹೋದಲ್ಲೆಲ್ಲಾ ಜನತೆ ಬಿಜೆಪಿಯನ್ನು ಸಾರಾಸಗಟವಾಗಿ ತಿರಸ್ಕರಿಸುತ್ತಿರುವುದು ಮಾತ್ರ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.

ಇತ್ತೀಚೆಗೆ  ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕರಪತ್ರವನ್ನು ಹಂಚಿತ್ತಿದ್ದರು. ನ್ಯಾಯವಾದಿ ಎಲಿಝಬೆತ್ ಶೇಷಾದ್ರಿಯವರ ಮನೆಗೆ ತೆರಳಿದ ಬಿಜೆಪಿ ಕಾರ್ಯಕರ್ತರಿಗೆ ಅವರು ಮಾನವೀಯತೆಯ ಪಾಠವನ್ನು ಮಾಡಿದ್ದಾರೆ.

ವೀಡಿಯೋ ವೀಕ್ಷಿಸಿ

https://twitter.com/lizsesh/status/1221303410651090944?s=20

ಈ ಬಗ್ಗೆ ನ್ಯಾಯವಾದಿ ಎಲಿಝಬೆತ್ ಶೇಷಾದ್ರಿ ರವರು ತನ್ನ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದು, ವೀಡಿಯೋದಲ್ಲಿ ‘ನೀವು ನನ್ನ ಮನೆಗೆ ಬಂದಿರುವುದನ್ನು ಸ್ವಾಗತಿಸುತ್ತೇನೆ. ಆದರೆ ಸಿಎಎ ಯನ್ನು ನಾನು ತಿರಸ್ಕರಿಸುತ್ತೇನೆ ಮತ್ತು ಅದನ್ನು ಬೆಂಬಲಿಸುವುದಿಲ್ಲ. ಭಾರತೀಯರಾದ ನಾವೆಲ್ಲರು ಒಂದೆ. ಹಿಂದೂ ಮುಸ್ಲಿಮ್ ಸಿಖ್ಖ್ ಇಸಾಯಿ ಎಲ್ಲರೂ ಒಂದೆ. ನಾವೆಲ್ಲರೂ ಸಹೋದರರು. ಹಾವ್ ಎ ಗುಡ್ ವೀಕೆಂಡ್’ ಎಂದು ಹೇಳುವ ಮೂಲಕ ಶುಭ ಹಾರೈಸಿದಲ್ಲದೆ, ಬಂದಂತಹ ಬಿಜೆಪಿ ಕಾರ್ಯಕರ್ತರು ಬರಿಗೈಯ್ಯಲ್ಲಿ ನಗು ಮುಖದಿಂದ ಹಿಂತಿರುಗಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಾದ್ಯಂತ ಭಾರೀ ವೈರಲ್ ಪಡೆದಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group