ರಾಷ್ಟ್ರೀಯ ಸುದ್ದಿ

ದೆಹಲಿ ಜಾಮಿಯಾದ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಕಾರರ ಮೇಲೆ ಭಯೋತ್ಪಾದಕನಿಂದ ಗುಂಡಿನ ದಾಳಿ !

  •  ಭಯೋತ್ಪಾದಕ ಗೋಡ್ಸೆ ಗಾಂಧಿಯನ್ನು ಕೊಂದ ದಿನವೇ ಉಗ್ರನ ಕೃತ್ಯ !
  • ಬಿಜೆಪಿಯ ಕೇಂದ್ರ ಮಂತ್ರಿ ಅನುರಾಗ್ ಠಾಕೂರನ  ‘ಗುಂಡಿಕ್ಕಿ’ ಹೇಳಿಕೆಯ ಬೆನ್ನಲ್ಲೇ ಉಗ್ರನಿಂದ ಕೃತ್ಯ !    
  • ಮೂಕ ಪ್ರೇಕ್ಷಕರಾದ ದೆಹಲಿ ಪೊಲೀಸರು !

ವರದಿಗಾರ ಜ 30 : ದೆಹಲಿಯ ಜಾಮಿಯಾ ವಿವಿ ಹೊರಭಾಗದಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಸಂವಿಧಾನ ವಿರೋಧಿ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ  ವಿದ್ಯಾರ್ಥಿಗಳ ಮೇಲೆ ಭಯೋತ್ಪಾದಕನೊಬ್ಬ ಗುಂಡಿನ ದಾಳಿ ನಡೆಸಲಾಗಿದ್ದು, ವಿದ್ಯಾರ್ಥಿಯೊಬ್ಬ ಗಾಯಗೊಂಡಿದ್ದಾನೆ. ಗುಂಡು ಹಾರಾಟ ನಡೆಸಿದ ಭಯೋತ್ಪಾದಕನನ್ನು ರಾಮ್ ಭಕ್ತ ಗೋಪಾಲ್ ಎಂದು ತನ್ನ ಹೆಸರನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾನೆ

ಪ್ರತಿಭಟನೆಕಾರರ ವಿರುದ್ಧ ಘೋಷಣೆ ಕೂಗುತ್ತಾ “ಆಝಾದಿ ಬೇಕಾ ನಿಮಗೆ  , ಜೈ ಶ್ರೀ ರಾಮ್ , ದೆಹಲಿ ಪೊಲೀಸ್ ಝಿಂದಾಬಾದ್” ಎನ್ನುತ್ತಾ ಭಯೋತ್ಪಾದಕನು ಪ್ರತಿಭಟನೆಕಾರರ ನೇರ ಗುಂಡಿನ ದಾಳಿ ನಡೆಸಿದ್ದಾನೆ. ಕೆಲವು ದಿನಗಳ ಹಿಂದಷ್ಟೇ ಬಿಜೆಪಿಯ ಕೇಂದ್ರ ಮಂತ್ರಿ ಹಾಗೂ ಸಂಸದ ಅನುರಾಗ್ ಠಾಕೂರ್ ದೆಹಲಿ ಚುನಾವಣಾ ರಾಲಿಯನ್ನುದ್ದೇಶಿಸಿ ಮಾತನಾಡುತ್ತಾ, ‘ಪುರತ್ವ ಪ್ರತಿಭಟನೆಕಾರರ ವಿರುದ್ಧ ಗುಂಡಿಕ್ಕಬೇಕೆಂದು ಕರೆ ಕೊಟ್ಟಿದ್ದ. ಇದರ ಬೆನ್ನಲ್ಲೇ ಈ ಗುಂಡಿನ ದಾಳಿ ನಡೆದಿರುವುದು ಹಲವಾರು ಸಂಶಯಗಳಿಗೆ ಕಾರಣವಾಗಿದೆ.

ಭಯೋತ್ಪಾದಕ ರಾಮ್ ಭಕ್ತ ಗೋಪಾಲ್ ಪ್ರತಿಭಟನೆಕಾರರತ್ತ  ಗುಂಡು ಹಾರಿಸುತ್ತಿರುವುದು

1948 ಜನವರಿ 30ರಂದು ಸ್ವತಂತ್ರ ಭಾರತದ ಮೊತ್ತ ಮೊದಲ ಭಯೋತ್ಪಾದಕ ಗೋಡ್ಸೆ,  ಗಾಂಧೀಜಿಯನ್ನು ಕೊಂದ ಅದೇ ದಿನ ಭಯೋತ್ಪಾದಕ ರಾಮ್ ಭಕ್ತ ಗೋಪಾಲ್ ಗೋಡ್ಸೆಯ ಅದೇ ಶೈಲಿಯಲ್ಲಿ ಗುಂಡು ಹಾರಾಟ ನಡೆಸಿದ್ದಾನೆ.

ವಿಪರ್ಯಾಸವೆಂಬಂತೆ ಪೌರತ್ವ ಕಾಯ್ದೆಯನ್ನು ಪ್ರತಿಭಟಿಸಿ ಪ್ರತಿಭಟನೆ ನಡೆಸುತಿದ್ದ ಪ್ರತಿಭಟನೆಕಾರರ ವಿರುದ್ಧ ಕ್ಯಾಂಪಸ್ ನೊಳಗೆ ನುಗ್ಗಿ ದಾಳಿ ನಡೆಸಿದ್ದ ದೆಹಲಿ ಪೊಲೀಸರ ಕಣ್ಣ ಮುಂದೆಯೇ ಉಗ್ರನು ಗುಂಡು ಹಾರಾಟ ನಡೆಸಿದ್ದಾನೆ. ಈ ವೇಳೆ ಪೊಲೀಸರು ಕೈ ಕಟ್ಟಿ ನೋಡುತ್ತಿರುವುದು ಫೋಟೋಗಳಲ್ಲಿ ಕಂಡು ಬಂದಿದೆ. ಗುಂಡು ಹಾರಾಟ ನಡೆಸಿದ ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ.ದೆಹಲಿ ಪೊಲೀಸ್ ಇಲಾಖೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ನೇರ ನಿಯಂತ್ರಣದಲ್ಲಿದೆ  ಎಂಬುವುದು ಇಲ್ಲಿ ಗಮನಾರ್ಹ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group