ಸಾಮಾಜಿಕ ತಾಣ

‘ಸರ್, ನಿಮ್ಮ ಭಾಷಣದಿಂದ ನಾನು ಆರೆಸ್ಸೆಸ್ ಬಿಟ್ಟೆ’; ಸಿಎಎ ವಿರುದ್ಧದ ಪ್ರತಿಭಟನೆಯ ಭಾಷಣ ಕೇಳಿ ಆರೆಸ್ಸೆಸ್ ತೊರೆದ ಯುವಕ

‘ಮುಸ್ಲಿಮರೇ, ದಯವಿಟ್ಟು ನನ್ನನ್ನು ಕ್ಷಮಿಸಿ’

ಸಿಎಎ ವಿರುದ್ಧದ ಪ್ರತಿಭಟನೆಯ ಭಾಷಣ ಕೇಳಿ ಆರೆಸ್ಸೆಸ್ ತೊರೆದ ಯುವಕ

ವರದಿಗಾರ (ಜ.25): ‘ಸರ್ ನಿಮ್ಮ ಭಾಷಣದಿಂದ ನಾನು ಆರೆಸ್ಸೆಸ್ ಬಿಟ್ಟೆ. ಮುಸ್ಲಿಮರೇ ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದು ಸಿಎಎ ವಿರುದ್ಧದ ಪ್ರತಿಭಟನೆಯ ಭಾಷಣವನ್ನು ಕೇಳಿ ಯುವಕನೊಬ್ಬ ಪ್ರತಿಕ್ರಿಯಿಸಿರುವುದು ಸದ್ಯ ಸಾಮಾಜಿಕ ಜಾಲತಾಣಗಳಾದ್ಯಂತ ಹಲವರ ಹೃದಯವನ್ನು ಗೆದ್ದುಕೊಂಡಿದೆ ಮಾತ್ರವಲ್ಲದೆ ಸಮಾಜದಲ್ಲಿ ಐತಿಹಾಸಿಕ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ ಎಂದು ವಿಮರ್ಶಕರು ಹೇಳಿಕೊಳ್ಳುತ್ತಿದ್ದಾರೆ.

ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶವ್ಯಾಪಿ ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿದೆ. ಕರ್ನಾಟಕ ರಾಜ್ಯದಲ್ಲೂ ವಿರೋಧದ ಪ್ರತಿಭಟನೆಗಳು ದೈನಂದಿನವಾಗಿ ನಡೆಯುತ್ತಿದೆ. ಬೆಂಗಳೂರು ನಗರದಲ್ಲಂತೂ ಪ್ರತಿಭಟನೆಗಳು ಇತಿಹಾಸವನ್ನೇ ಸೃಷ್ಟಿಸಿದೆ. ಇದುವರೆಗೆ ಬೆಂಗಳೂರಿನಲ್ಲಿ ಕೇವಲ ಒಂದು ತಿಂಗಳಿನಲ್ಲಿ ಇಷ್ಟೊಂದು ಪ್ರತಿಭಟನೆಗಳು ನಡೆದಿಲ್ಲವೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ್ದ ದಲಿತ ದಮನಿತ ಹೋರಾಟದ ಮುಖ್ಯಸ್ಥ, ಜನಪರ ಹೋರಾಟಗಾರ ಬಿ.ಆರ್. ಭಾಸ್ಕರ್ ಪ್ರಸಾದ್ ರವರ ಭಾಷಣವನ್ನು ಸಾಮಾಜಿಕ ತಾಣವಾದ ಯೂಟ್ಯೂಬ್ ನಲ್ಲಿ ‘4ಜಿ ಮೀಡಿಯಾ ಉಚ್ಚಿಲ’ ನೇರ ಪ್ರಸಾರವನ್ನು ನೀಡಿತ್ತು.

ನೇರ ಪ್ರಸಾರವನ್ನು ವೀಕ್ಷಿಸುತ್ತಿದ್ದ ಹಲವು ಜನರು ಭಾಷಣಕ್ಕೆ ತಕ್ಕಂತೆ ನೇರಪ್ರಸಾರದಲ್ಲಿ ತಮ್ಮದೇ ಆದ ಅಭಿಪ್ರಾಯದ ಮೂಲಕ ಪ್ರತಿಕ್ರಿಯಿಸುತ್ತಿದ್ದರು. ಆದರೆ ‘ವಿನಯ್ ರಾಜು’ ಎಂಬ ಹೆಸರಿನೊಬ್ಬನ ಪ್ರತಿಕ್ರಿಯೆ ‘ಸರ್ ನಿಮ್ಮ ಮಾತು ಕೇಳಿ ನಾ ಆರೆಸ್ಸೆಸ್ ಬಿಟ್ಟೆ. ಸರ್ ದಯವಿಟ್ಟು ನನ್ನ ಎಲ್ಲಾ ಮುಸಲ್ಮಾನರು ಕ್ಷಮಿಸಬೇಕು’ ಎಂದಾಗಿತ್ತು. ಇವರ ಈ ಪ್ರತಿಕ್ರಿಯೆಗೆ ಹಲವರು ಅದೇ ವೇದಿಕೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿ ಸ್ವಾಗತಿಸಿದ್ದಾರೆ.

ಸದ್ಯ ವೀಡಿಯೋ ತುಣುಕು ಲಕ್ಷಾಂತರ ಜನರಿಗೆ ತಲುಪಿದ್ದು ಹಲವೆಡೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಭಾಸ್ಕರ್ ಪ್ರಸಾದ್ ಕಮೆಂಟ್ ನ ಸ್ಕ್ರೀನ್ ಶಾಟ್ ಮೂಲಕ ತನ್ನ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದು, ‘ ಈ ಮೆಸೆಜ್ ಓದಿ ನಿಜಕ್ಕೂ ಕಣ್ಣೀರು ಬಂತು. ದುಃಖಕ್ಕಲ್ಲ. ಆನಂದಕ್ಕೆ. ನೂರು, ಸಾವಿರ ಜನ ಬೇಡ. ಕನಿಷ್ಟ ಒಬ್ಬರಾದರು ಹೀಗೆ ಪರಿವರ್ತನೆ ಆದರಲ್ಲ. ಅದಕ್ಕಿಂತ ಸಾರ್ಥಕತೆ ಮತ್ತೇನಿದೆ. ಒಬ್ಬ ಭಾಷಣಕಾರನಾಗಿ ನನಗೀಗ ನಿಜಕ್ಕೂ ಹೆಮ್ಮೆ ಅನ್ನಿಸುತ್ತಿದೆ’ ಎಂದು ಪ್ರತಿಕ್ರಿಯಿಸಿ ಹೃದಯದ ಭಾಷೆಯಿಂದ ಗೌರವ ಸಲ್ಲಿಸಿದ್ದಾರೆ.

‘ರಾಘು ಸಿ’ ಎಂಬ ಹೆಸರಿನ ಮತ್ತೊಂದು ಯುವಕನ ಕಮೆಂಟ್ ‘ನಾನು ಕೂಡಾ ಆರೆಸ್ಸೆಸ್ ನಿಂದ ಹೊರಬರುತ್ತಿದ್ದೇನೆ. ಯಾಕೆಂದರೆ ನಿಮ್ಮದೇ ಅನುಭವ ನನ್ನ ಜೀವನದಲ್ಲೂ ಆಗಿದೆ’ ಎಂದು ಹೇಳಿಕೊಂಡಿದ್ದಾರೆ.

‘ಶೋಭಾ ಪುತ್ತೂರು’ ಎಂಬ ಹೆಸರಿನ ಮತ್ತೊಂದು ಕಮೆಂಟ್, ‘ಹಿಂದೂಗಳಿಲ್ಲದೆ ಮುಸ್ಲಿಮರಿಲ್ಲ. ಹಾಗೇನೆ ಮುಸ್ಲಿಮರಿಲ್ಲದ ಹಿಂದುಗಳು ಇಲ್ಲ. ದೇಶದ ಉನ್ನತಿಗೆ ಇಬ್ಬರು ಬೇಕು. ಮೇರಾ ಭಾರತ್ ಮಹಾನ್’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ರಂಗನಾಥ ಜಿ’ ಎಂಬ ಹೆಸರಿನ ಯುವಕ ಪ್ರತಿಕ್ರಿಯಿಸಿದ್ದು ಹೀಗೆ ‘ಸರ್ ನೀವುಗಳು ಪ್ರತಿ ತಾಲೂಕಿಗೂ ಬಂದು ಈ ಪ್ರತಿಯೊಂದು ವೇದಿಕೆಯಲ್ಲಿ ಆರೆಸ್ಸಸ್ ಇಷ್ಟೊಂದು ಭಯಂಕರ ಸತ್ಯವನ್ನು ಬಿಚ್ಚಿಟ್ಟಿದ್ದೀರಿ ದಯಮಾಡಿ ತಾಲೂಕ್ ಡಿಸ್ಟ್ರಿಕ್ಟ್ ಪ್ರತಿಯೊಂದು ಹಳ್ಳಿ ಹಳ್ಳಿಗೆ ಹೋಗಿ ಭಾಷಣ ಮಾಡಿ ಸರ್’ ಎಂದು ಭಾಸ್ಕರ್ ಪ್ರಸಾದ್ ರನ್ನು ವಿನಂತಿಸಿಕೊಂಡಿದ್ದಾರೆ.

ಈ ಬಗ್ಗೆ ‘ವರದಿಗಾರ’ ತಂಡ ಭಾಸ್ಕರ್ ಪ್ರಸಾದ್ ರನ್ನು ಸಂಪರ್ಕಿಸಿದಾಗ ‘ಉಡುಪಿ ಹಾಗೂ ಇನ್ನಿತರ ಕಡೆಗಳಲ್ಲಿ ನನ್ನನ್ನು ಅತ್ಯಂತ ಕಠು ಶಬ್ದಗಳಲ್ಲಿ ವಿರೋಧಿಸುತ್ತಿದ್ದ ಯುವಕರು ಫೋನ್ ಮಾಡಿ ಪ್ರೀತಿಯಿಂದ ಮಾತನಾಡಿದ್ದಾರೆ. ದಯವಿಟ್ಟು ನಮ್ಮ ಮನೆಗೆ ಬನ್ನಿ ಎಂದು ಕರೆದಿದ್ದಾರೆ. ಊಟದೊಂದಿಗೆ ಜೊತೆಯಾಗಿ ಮಾತನಾಡೋಣ ಎಂದು ಸತ್ಕಾರದ ಮಾತುಗಳನ್ನು ಆಡಿದ್ದಾರೆ’ ಎಂದು ತನ್ನ ಅಂತರಾಳದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ವೀಡಿಯೋ ವೀಕ್ಷಿಸಿ:

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group