
ನಿರುದ್ಯೋಗದ ಕಾರಣ ಆತ್ಮಹತ್ಯೆ ಪ್ರಕರಣಗಳಲ್ಲಿ 21% ಹೆಚ್ಚಳ!!
‘ಗುಜರಾತ್ ಮಾದರಿ’ಯ ಪೊಳ್ಳು ಬಹಿರಂಗಪಡಿಸಿದ 2018ರ ಅಂಕಿ-ಅಂಶ!
ವರದಿಗಾರ(13-01-2020): 2018ರ ಸರಕಾರಿ ಅಂಕಿ-ಅಂಶಗಳು ಗುಜರಾತಿನ ಗಂಭೀರ ಆರ್ಥಿಕ ಬಿಕ್ಕಟ್ಟಿನ ಲಕ್ಷಣಗಳನ್ನು ಎತ್ತಿ ತೋರಿಸುತ್ತಿದೆ.
ಗುರುವಾರದಂದು ಬಿಡುಗಡೆಗೊಂಡ ‘ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ’ ವರದಿ ಪ್ರಕಾರ, 2018ರಲ್ಲಿ 294 ಜನರು ಬಡತನವನ್ನು ಕಾರಣವನ್ನಾಗಿಸಿ ಆತ್ಮಹತ್ಯೆ ಮಾಡಿದ್ದಾರೆ. 318 ಜನರು ನಿರುದ್ಯೋಗದವನ್ನು ಕಾರಣವನ್ನಾಗಿಸಿ ಆತ್ಮಹತ್ಯೆ ಮಾಡಿದ್ದಾರೆ. ಈ ಅಂಕಿ-ಅಂಶಗಳು 2017 ರಲ್ಲಿ ವರದಿಯಾದ ಪ್ರಕರಣಗಳಿಂದ ಕ್ರಮವಾಗಿ 160% ಹಾಗೂ 21% ಅಧಿಕ ಪ್ರಕರಣಗಳನ್ನು ತೋರಿಸುತ್ತಿದೆ.
2018ರಲ್ಲಿ ಆತ್ಮಹತ್ಯೆ ಮಾಡಿಕೊಂಡ 7,793 ವ್ಯಕ್ತಿಗಳಲ್ಲಿ, 70% ಜನರ ವಾರ್ಷಿಕ ಆದಾಯವು 1 ಲಕ್ಷ ರೂಪಾಯಿಗಳಿಗಿಂತ ಕಡಿಮೆಯಾಗಿತ್ತು.
ದೈನಂದಿನ ಕೂಲಿ ಸಂಪಾದಕರ ಆತ್ಮಹತ್ಯೆಯಲ್ಲಿ 18.3% ಹೆಚ್ಚಳ ವರದಿಯಾಗಿದೆ. 2018ರಲ್ಲಿ 2522 ದೈನಂದಿನ ಕೂಲಿ ಸಂಪಾದಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡವರಲ್ಲಿ 418 ಜನರು ನಿರುದ್ಯೋಗಿಗಳಾಗಿದ್ದರು, 318 ಜನರು ನಿರುದ್ಯೋಗವನ್ನೇ ಕಾರಣವನ್ನಾಗಿಸಿ ಆತ್ಮಹತ್ಯೆ ಮಾಡಿದ್ದರು.
