ರಾಜ್ಯ ಸುದ್ದಿ

ಹಿಂದೂ ರಾಷ್ಟ್ರೀಯತೆಯಂತೆ. ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಆರೆಸ್ಸೆಸ್ ಎಲ್ಲಾದರೂ ಜಾಗೃತಿ ಮೂಡಿಸಿರುವುದು ನೋಡಿದ್ದೀರಾ?: ಮಹೇಂದ್ರ ಕುಮಾರ್ ಪ್ರಶ್ನೆ

ಮಂಗಳೂರು ಪೊಲೀಸ್ ಗೋಲಿಬಾರ್ ವಿರುದ್ಧ ಬೆಂಗಳೂರಿನಲ್ಲಿ ಕರಾವಳಿಗರ ಐಕ್ಯಮತ್ಯ

‘ಆರೆಸ್ಸೆಸ್ ಹೇಳುವುದು ರಾಷ್ಟ್ರಭಕ್ತಿಯಲ್ಲ. ಅದಕ್ಕಾಗಿಯೇ ನಾನು ಅದರಿಂದ ಹೊರಬಂದೆ’

‘ಮುಸಲ್ಮಾನರನ್ನು ವಿರೋಧಿಸುವುದೇ ಬಿಜೆಪಿಯ ರಾಜಕೀಯ’

‘ಹಿಂದೂ ರಾಷ್ಟ್ರೀಯತೆಯಂತೆ. ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಆರೆಸ್ಸೆಸ್ ಎಲ್ಲಾದರೂ ಜಾಗೃತಿ ಮೂಡಿಸಿರುವುದು ನೋಡಿದ್ದೀರಾ?’

ವರದಿಗಾರ (ಜ.13): ಹಿಂದೂ ರಾಷ್ಟ್ರೀಯತೆಯಂದು ಹೇಳಿಕೊಳ್ಳುತ್ತಾ ತಿರುಗಾಡುತ್ತಿದ್ದಾರೆ. ಆದರೆ ಎಲ್ಲಾದರೂ ದಲಿತ ಮೇಲಿನ ಭೀಕರ ದೌರ್ಜನ್ಯದ ವಿರುದ್ಧ ಆರೆಸ್ಸೆಸ್ ಪ್ರತಿಭಟಿಸಿರುವುದು, ಜಾಗೃತಿ ಮೂಡಿಸಿರುವುದು ನೀವು ನೋಡಿದ್ದೀರಾ ಎಂದು ಮಾಜಿ ಬಜರಂದಳದ ಸಂಚಾಲಕ, ಪ್ರಗತಿಪರ ಚಿಂತಕರಾದ ಮಹೇಂದ್ರ ಕುಮಾರ್ ಪ್ರಶ್ನಿಸಿದ್ದಾರೆ.

ಅವರು ಬೆಂಗಳೂರಿನ ಟೌನ್ ಹಾಲ್ ಮುಂಭಾಗ ಸಿಎಎ, ಎನ್.ಆರ್.ಸಿ ಮತ್ತು ಎನ್‍ಪಿಆರ್ ಕಾಯ್ದೆಯನ್ನು ತಿರಸ್ಕರಿಸಿ, ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿ ಮತ್ತು ಮಂಗಳೂರು ಪೊಲೀಸ್ ಗೋಲಿಬಾರ್ ಘಟನೆಯನ್ನು ನ್ಯಾಯಾಂಗ ತನಿಖೆಗೊಳಪಡಿಸುವಂತೆ ಮತ್ತು ಮಂಗಳೂರಿಗರೊಂದಿಗೆ ಐಕ್ಯಮಕ್ಯವನ್ನು ತೋರ್ಪಡಿಸುದಕ್ಕಾಗಿ ‘ಕರಾವಳಿ ಒಕ್ಕೂಟ ಬೆಂಗಳೂರು’ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಮಹೇಂದ್ರ ಕುಮಾರ್ ಬಜರಂಗದಳದಲ್ಲಿದ್ದ ಸಂದರ್ಭ ತನ್ನ ಜೀವನದಲ್ಲಿ ನಡೆದ ಒಂದು ಘಟನೆಯನ್ನು ಮನಬಿಚ್ಚಿ ಹೇಳಿದ್ದು, ಆ ಸಂದರ್ಭದಲ್ಲೂ ತನ್ನೊಳಗೆ ಮಾನವೀಯತೆ ಎಂಬುವುದಿತ್ತು ಎಂದು ಹೇಳಿದ್ದಾರೆ.

ವೀಡಿಯೋ ವೀಕ್ಷಿಸಿ:

‘ಹಿಂದುತ್ವದ ಹೆಸರಿನಲ್ಲಿ ಹಿಂದೂ ಧರ್ಮಕ್ಕೆ ಅಪಮಾನ ಮಾಡಲಾಗುತ್ತಿದೆ. ಆರೆಸ್ಸೆಸ್ ಹೇಳುತ್ತಿರುವುದು ರಾಷ್ಟ್ರಭಕ್ತಿಯಲ್ಲ. ಅದಕ್ಕಾಗಿ ನಾನು ಅದರಿಂದ ಹೊರಬಂದೆ’ ಎಂದು ಅವರು ಹೇಳಿದ್ದಾರೆ.

‘ಪಾಕಿಸ್ತಾನದ ಉಗ್ರಗಾಮಿಗಳು ಭಾರತಕ್ಕೆ ಬಂದು ಅನಾಚಾರ ಮಾಡಿದ್ರೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅದರ ಹೊಣೆ ಹೊತ್ತುಕೊಳ್ಳುತ್ತಾರಾ?’ ಎಂದೂ ಈ ಸಂದರ್ಭದಲ್ಲಿ ಅವರು ಪ್ರಶ್ನಿಸಿದ್ದಾರೆ.

‘ಮುಸಲ್ಮಾರನ್ನು ವಿರೋಧಿಸುವುದೇ ಬಿಜೆಪಿ ರಾಜಕೀಯ’ ಎಂದು ಬಿಜೆಪಿಯ ವಿರುದ್ಘ ಮಹೇಂದ್ರ ಕುಮಾರ್ ವಾಗ್ದಾಳಿ ನಡೆಸಿದ್ದು, ‘ಎನ್‍ಆರ್‍ಸಿ ಯು ನಿಜವಾಗಿಯೂ ಹಿಂದೂ ಧರ್ಮದ ವಿರೋಧಿಯಾಗಿದೆ. ನಾವೆಲ್ಲರೂ ಒಂದಾಗಿ ಈ ಕಾಯ್ದೆಯ ವಿರುದ್ಧ ಧ್ವನಿಯಾಗಬೇಕೆಂದು’ ಅವರು ಕರೆ ನೀಡಿದ್ದಾರೆ.

ಪ್ರತಿಭಟನೆಯನ್ನುದ್ದೇಶಿಸಿ ಜಗದೀಶ್ ಕೆಎನ್ ಮಹಾದೇವ್, ಭವ್ಯ ನರಸಿಂಹಮೂರ್ತಿ, ಲುಬ್ನಾ ಸಿರಾಜ್, ಕೃಷ್ಣಯ್ಯ, ಸಂಪತ್ ಸುಬ್ಬಯ್ಯ, ದೀಪು ಗೌಡ, ಅನ್ವರ್ ಸಾದಾತ್ ಮಾತನಾಡಿದರು. ಕರಾವಳಿ ಒಕ್ಕೂಟದ ಅಧ್ಯಕ್ಷ ಅಬೂಬಕ್ಕರ್ ಸ್ವಾಗತಿಸಿ, ಜುನೈದ್ ವಂದಿಸಿದರು. ಉಪಾಧ್ಯಕ್ಷ ಸಲೀಮ್ ಕಾರ್ಯಕ್ರಮ ನಿರೂಪಿಸಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group