ರಾಷ್ಟ್ರೀಯ ಸುದ್ದಿ

ದಲಿತರನ್ನು ಭಾರತೀಯರಂತೆ ಪರಿಗಣಿಸಲಾಗಿಲ್ಲ, ನಮ್ಮನ್ನು ಗಡಿಪಾರು ಮಾಡಿ: ರಾಷ್ಟ್ರಪತಿಗೆ ಪತ್ರ ಬರೆದ ಉನಾ ಸಂತ್ರಸ್ತ

ವರದಿಗಾರ(13-01-2020): ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವಾಗಲೇ ಉನಾ ಪ್ರಕರಣ ಸಂತ್ರಸ್ತ ತಾನು ಹಾಗೂ ತನ್ನ ಸಹೋದರರನ್ನು, ತಾರತಮ್ಯವಿಲ್ಲದ ದೇಶವೊಂದಕ್ಕೆ ಗಡಿಪಾರು ಮಾಡುವಂತೆ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾನೆ.

2016ರಲ್ಲಿ ಗುಜರಾತಿನ ಉನಾದಲ್ಲಿ ದಲಿತ ಕುಟುಂಬವೊಂದರ 7 ಸದಸ್ಯರನ್ನು ಸ್ವಯಂಘೋಷಿತ ಗೋರಕ್ಷಕರು ಅರೆ ಬೆತ್ತಲಾಗಿಸಿ, ಥಳಿಸಿ ,ಬೀದಿಯಲ್ಲಿ ಮೆರವಣಿಗೆ ನಡೆಸಿದ್ದರು. ಸಂತ್ರಸ್ತ ವಶ್ರಮ್ ಸರ್ವಯ್ಯಾ ಅಂತರ್ಜಾಲ ಸುದ್ದಿಮಾಧ್ಯಮ ‘ದಿ ಕ್ವಿಂಟ್’ ಜೊತೆ ಮಾತನಾಡುತ್ತಾ, “ನಾನು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತೇನೆ. ಆದರೆ, ಅವರು ಅದನ್ನು ಜಾರಿಗೆ ತರಲು ಬಯಸುತ್ತಿದ್ದಲ್ಲಿ, ದಲಿತರು ಸಮಾನ ನಾಗರಿಕರೆಂದು ಪರಿಗಣಿಸುವ ದೇಶಕ್ಕೆ ನಮ್ಮನ್ನು ಗಡಿಪಾರು ಮಾಡಬೇಕು” ಎಂದು ಹೇಳಿದ್ದಾರೆ.

“2016 ರಲ್ಲಿ ನಮ್ಮನ್ನು ಥಳಿಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ದುಷ್ಕರ್ಮಿಗಳು ಜಾಮೀನಿನಲ್ಲಿ ಹೊರಗಿದ್ದಾರೆ. ನಮಗೆ ಕೃಷಿ ಭೂಮಿ, ಪ್ಲಾಟ್‌ಗಳ ಭರವಸೆ ನೀಡಲಾಯಿತು ಆದರೆ ಅವುಗಳಲ್ಲಿ ಯಾವುದನ್ನೂ ಇರಿಸಲಾಗಿಲ್ಲ.””ಆಗ ಗುಜರಾತ್ ಸಿಎಂ ಆಗಿದ್ದ ಮತ್ತು ಈಗ ಉತ್ತರ ಪ್ರದೇಶ ರಾಜ್ಯಪಾಲರಾಗಿರುವ ಆನಂದಿಬೆನ್ ಪಟೇಲ್ ಅವರು 2016 ರಲ್ಲಿ ನಮ್ಮನ್ನು ಭೇಟಿ ಮಾಡಿ ಉದ್ಯೋಗದ ಭರವಸೆ ನೀಡಿದ್ದರು. ಒಂದು ತಿಂಗಳಲ್ಲಿ ನಮ್ಮನ್ನು ಮತ್ತೆ ಭೇಟಿ ಮಾಡುವುದಾಗಿ ಅವರು ಹೇಳಿದ್ದರು. ಆದರೆ ಅವರು ಬರಲೂ ಇಲ್ಲ, ಭರವಸೆಯನ್ನೂ ಈಡೇರಿಸಿಲ್ಲ” ಎಂದು ಅವರು ಹೇಳಿದ್ದಾರೆ.

ಸತ್ತ ಹಸುವಿನ ಚರ್ಮ ಸುಲಿದ ಕಾರಣಕ್ಕಾಗಿ ಸರ್ವಯ್ಯಾ ಕುಟುಂಬದ ಏಳು ಸದಸ್ಯರನ್ನು ಅರೆನಗ್ನರಾಗಿಸಿ ಬೀದಿಯಲ್ಲಿ ಥಳಿಸುತ್ತುರುವ ವಿಡಿಯೋ ದೇಶದಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು.

ತನ್ನ ಸಹೋದರರ ಪರವಾಗಿ ರಾಷ್ಟ್ರಪತಿಗೆ ಬರೆದ ಪತ್ರವನ್ನು ಗುಜರಾತಿನ ಗಿರ್ ಸೋಮನಾಥ್ ಜಿಲ್ಲೆಯ ಉನಾ ಪ್ರಾಂತ್ ಕಚೇರಿಯಲ್ಲಿ ಜನವರಿ 7ರಂದು ಸಲ್ಲಿಸಲಾಯಿತು.

ವಶ್ರಾಮ್ ಈ ಹಿಂದೆ 2018ರಲ್ಲಿ ದಯಾಮರಣವನ್ನು ಕೋರಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದರು.

ಈ ಬಾರಿಯೂ ತಮ್ಮ ಮನವಿಯನ್ನು ಪರಿಗಣಿಸದಿದ್ದಲ್ಲಿ , ತನ್ನ ಸಹೋದರರ ಜೊತೆ ರಾಷ್ಟ್ರಪತಿ ಕಚೇರಿಯ ಮುಂದೆ ಆತ್ಮಾಹುತಿ ನಡೆಸುವುದಾಗಿ ವಶ್ರಾಮ್ ತಿಳಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group