ರಾಜ್ಯ ಸುದ್ದಿ

ಫ್ಯಾಶಿಸಂ ನಿಂದ ಮೊದಲು ಸಂಕಷ್ಟವನ್ನು ಎದುರಿಸುವವರು ಮಹಿಳೆಯರು: ಭವ್ಯ ನರಸಿಂಹಮೂರ್ತಿ

‘ಇಂದು ಸಮಾಜದಲ್ಲಿ ಮಹಿಳೆಯು ಸುರಕ್ಷಿತವಾಗಿಲ್ಲ ಎಂದ ಮೇಲೆ ಬಂಧನ ಕೇಂದ್ರದಲ್ಲಿ ಕೂಡಿ ಹಾಕಿದಾಗ ಸುರಕ್ಷಿತವಾಗಿರುತ್ತಾರೆ ಎಂದು ಭಾವಿಸಿದ್ದೀರಾ?’

ವರದಿಗಾರ(ಜ.5,20): ಫ್ಯಾಶಿಸಂ ನಿಂದ ಮೊದಲು ಸಂಕಷ್ಟವನ್ನು ಎದುರಿಸುವವರು ಮಹಿಳೆಯರು ಎಂದು ಮಹಿಳಾ ಹೋರಾಟಗಾರ್ತಿ ಭವ್ಯ ನರಸಿಂಹಮೂರ್ತಿ ಹೇಳಿದ್ದಾರೆ.

ಅವರು ಇಂದು ಸಂಜೆ ಬೆಂಗಳೂರಿನ ಟೌನ್ ಹಾಲ್ ಮುಂಭಾಗ ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಮತ್ತು ಸಾವಿತ್ರ ಬಾಯಿ ಪುಲೆ ಯವರ ಜಯಂತಿ ಪ್ರಯುಕ್ತ ಮಹಿಳೆಯರು ‘ಬುರ್ಖಾ ಮತ್ತು ಬಿಂದಿ’ ಹೆಸರಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯ ಸಂದರ್ಭ ಸುದ್ದಿಗಾಗರರೊಂದಿಗೆ ಮಾತನಾಡುತ್ತಿದ್ದರು.

ವೀಡಿಯೋ ವೀಕ್ಷಿಸಿ: 

‘ಫ್ಯಾಶಿಸಂ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮೊದಲು ಸಂಕಷ್ಟವನ್ನು ಎದುರಿಸುವವರು ಮಹಿಳೆಯರು ಮತ್ತು ಮಕ್ಕಳು. ಇಂದು ಸಮಾಜದಲ್ಲಿ ಮಹಿಳೆಯು ಸುರಕ್ಷಿತವಾಗಿಲ್ಲ ಎಂದ ಮೇಲೆ ಬಂಧನ ಕೇಂದ್ರದಲ್ಲಿ ಕೂಡಿ ಹಾಕಿದಾಗ ಸುರಕ್ಷಿತವಾಗಿರುತ್ತಾರೆ ಎಂದು ಭಾವಿಸಿದ್ದೀರಾ?’ ಎಂದು ಸರಕಾರವನ್ನು ಭವ್ಯ ಪ್ರಶ್ನಿಸಿದ್ದಾರೆ.

‘ಮಹಿಳಾ ವಿಮೋಚನೆಗಾಗಿ ಪ್ರಯತ್ನಿಸಿದ ಸಾವಿತ್ರಿ ಬಾಯಿ ಪುಲೆ ಇಂದು ಬದುಕಿರುತ್ತಿದ್ದರೆ ತುಂಬಾನೇ ನೊಂದು ಕೊಳ್ಳುತ್ತಿದ್ದರು. ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಮತ್ತು ಜನಾಂದೋಲನದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ನೇತೃತ್ವ ನೀಡುವುದನ್ನು  ನೋಡಿ ಖುಷಿ ಪಡುತ್ತಿದ್ದರು’ ಎಂದು ಹೇಳಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group