
- ಸಂಸ್ಕಾರದ ಬಗ್ಗೆ ಉದ್ದುದ್ದ ಭಾಷಣ ಮಾಡುವವರಿಂದ ಚೀಪ್ ಗಿಮಿಕ್ !
- ಬಿಜೆಪಿ ಐಟಿ ಸೆಲ್ ಗೆ Netflix ನಿಂದ ಕಪಾಳ ಮೋಕ್ಷ!
ವರದಿ ಗಾರ ಜ 05 : ಹಿಂದೊಮ್ಮೆ ಭಾರತೀಯ ಜನತಾ ಪಾರ್ಟಿ 10 ಅಂಕೆಗಳ ನಂಬರ್ ಒಂದನ್ನು ನೀಡಿ, ನಮ ಪಕ್ಷದ ಸದಸ್ಯರಾಗಬೇಕೆಂದರೆ ಅದಕ್ಕೆ ಮಿಸ್ ಕಾಲ್ ನೀಡಬೇಕೆಂದು ಕರೆ ಕೊಟ್ಟಿತ್ತು. ಇದೀಗ ಅಂತಹದ್ದೇ ಶೈಲಿಯ ನಂಬರ್ ಮತ್ತೊಮ್ಮೆ ಚಾಲ್ತಿಗೆ ಬಂದಿದೆ, ಈ ಬಾರಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ಎಂಬ ಕರೆಯೊಂದಿಗೆ ಈ ಅಭಿಯಾನ ನಡೆಸಲ್ಪಡುತ್ತಿದೆ. ಆದರೆ ಬಿಜೆಪಿ ಹಾಗೂ ಅದರ ಐಟಿ ಸೆಲ್ ತಂಡ ಈ ಬಾರಿ ಜನಾಭಿಪ್ರಾಯ ಕ್ರೋಢೀಕರಿಸಲು ಅನೈತಿಕತೆಯ ಹಾದಿ ತುಳಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ಮಾನ ಮೂರಾಬಟ್ಟೆಯಾಗಿಬಿಟ್ಟಿದೆ.
ಜಾಲತಾಣದಲ್ಲಿ ನಡೆದಿದ್ದೇನು ?
ಬಿಜೆಪಿ ತಾವು ಜಾರಿಗೆ ತಂದಿರುವ ಕಾಯ್ದೆಗೆ ರಾಷ್ಟ್ರದಾದ್ಯಂತ ಜನಬೆಂಬಲ ಕ್ರೋಢೀಕರಿಸಲು 88662 88662 ಎಂಬ 10 ಅಂಕೆಯ ನಂಬರ್ ಒಂದನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿತ್ತು. ತದ ನಂತರ ಇದಕ್ಕೆ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಲವಾರು ನಾಯಕರು ಬೆಂಬಲ ಸೂಚಿಸಿ ಟ್ವೀಟ್, ಪೋಸ್ಟ್ ಗಳನ್ನು ಹಾಕಿದ್ದರು. ಆದರೆ ಬಿಜೆಪಿ ಸರಕಾರ ಜಾರಿಗೆ ತಂದಿರುವ ಈ ಸಂವಿಧಾನ ವಿರೋದಿ ಕಾಯ್ದೆಗೆ ದೇಶದಾದ್ಯಂತ ಎದ್ದಿರುವ ಪ್ರಬಲ ವಿರೋಧವನ್ನು ಮನಗಂಡಿರುವ ಬಿಜೆಪಿ, ನೇರ ಹಾದಿಯಲ್ಲಿ ಜನಬೆಂಬಲ ಗಳಿಸಿ ದೇಶದ ಮುಂದೆ ತೋರಿಸಲು ಸಾಧ್ಯವಿಲ್ಲ ಎಂಬುವುದನ್ನು ಅರಿತು ದೇಶದ ಜನರ ಮುಂದೆ “ನಕಲಿ ಜನಾಭಿಪ್ರಾಯ” ವನ್ನು ತೋರಿಸುವ ಸಲುವಾಗಿ ಅನೈತಿಕತೆಯ ಹಾದಿ ಹಿಡಿಯಿತು.
ಅದಕ್ಕಾಗಿ ಬಿಜೆಪಿಯ ಆ 10 ಅಂಕೆಗಳ ಟಾಲ್ ಫ್ರೀ ನಂಬರನ್ನು ಸಾಮಾಜಿಕ ತಾಣಗಳಲ್ಲಿ ಯದ್ವಾ ತದ್ವಾ ಹರಿಯಬಿಟ್ಟು “ನಿಮಗೆ ಸೆಕ್ಸ್ ಬೇಕೇ, ಈ ನಂಬರಿಗೆ ಮಿಸ್ ಕಾಲ್ ಕೊಡಿ”, “ನಾನು ಏಕಾಂತದಲ್ಲಿ ಇದ್ದೀನಿ ನಿನ್ನ ಕರೆಗಾಗಿ ಕಾಯುತ್ತಿದ್ದೀನಿ”, “ನನ್ನ ಫೋನ್ ಕಳೆದುಹೋಗಿದೆ, ದಯವಿಟ್ಟು ಯಾರಾದರೂ ನನ್ನ ಈ ನಂಬರಿಗೆ ಕರೆ ಮಾಡಿ”, “ತುಂಬ ಬೋರ್ ಆಗುತ್ತಿದೆ, ನನ್ನ ಫಾಲೋವರ್ಸ್ ಗಳಿಗೆ ನನ್ನ ನಂಬರ್ ಶೇರ್ ಮಾಡಲು ಬಯಸಿದ್ದೀನಿ”, “ಉದ್ಯೋಗ ಬೇಕೇ ?, 2ಜಿಬಿ ಡಾಟಾ ಬೇಕೇ ?, 6 ತಿಂಗಳು ನೆಟ್ ಫ್ಲಿಕ್ಸ್ ಉಚಿತವಾಗಿ ಬೇಕೇ ?, ಅಪರಿಚಿತ ಯುವತಿಯರೊಂದಿಗೆ ಮಾತನಾಡಿ ಸಮಯ ಕಳೆಯಬೇಕಾ? ರಾಫೆಲ್ ಹಗರಣದ ಮಾಹಿತಿ ಬೇಕೇ ? ಆಲಿಯಾ ಭಟ್ ಅವರ ಮೊಬೈಲ್ ನಂಬರ್ ಬೇಕಾ? ನನ್ನ ಗೆಳತಿಯ ಮೊಬೈಲ್ ನಂಬರ್ ಬೇಕೇ? ನೀವು ಎಷ್ಟು ಸಮಯ ಏಕಾಂಗಿಯಾಗಿ ಇರ್ತೀರಾ ?ಈ ನಂಬರಿಗೆ ಕರೆ ಮಾಡಿ, ಬಾಡಿ ಮಸಾಜ್ ಗೆ ಬೇಕಾಗಿ ಕರೆ ಮಾಡಬೇಕಾದ ನಂಬರ್, ಸನ್ನಿ ಲಿಯೋನ್ ಜೊತೆ ಚಾಟ್ ಮಾಡುವ ನಂಬರ್, ಕರೆವೆಣ್ಣುಗಳ ಮೊಬೈಲ್ ನಂಬರ್ ಸಂಖ್ಯೆ ಇದು ಎಂದೆಲ್ಲಾ ಜನರಿಗೆ ಹಲವು ರೀತಿಯ ಅನೈತಿಕ ಆಮಿಷಗಳನ್ನು ಒಡ್ಡಿ ಯಾವುದೇ ಮಟ್ಟಕ್ಕೆ ಇಳಿದಾದರೂ ಜನಬೆಂಬಲ ಪಡೆಯಲು ರಂಗಕ್ಕೆ ಇಳಿದಿದೆ.
ಈ ಅನೈತಿಕ ಅಭಿಯಾನ ಒಂದು ಹಂತದಲ್ಲಿ ಯಾವ ಮಟ್ಟಕ್ಕಿಳಿಯಿತು ಅಂದರೆ ಉಚಿತ ನೆಟ್ ಫ್ಲಿಕ್ಸ್ ಎಂಬ ಸುಳ್ಳು ಪ್ರಚಾರಕ್ಕೆ ಖುದ್ದು ನೆಟ್ ಫ್ಲಿಕ್ಸ್ ಆ ಕುರಿತು ಸ್ಪಷ್ಟೀಕರಣ ಕೊಟ್ಟು ಬಿಜೆಪಿಯ ಅನೈತಿಕತೆಗೆ ಚಾಟಿಯೇಟು ನೀಡುವಲ್ಲಿಗೆ ಬಂದು ತಲುಪಿತ್ತು.
ಹೀಗೆ ಬಿಜೆಪಿ ಜನರು ನಮ್ಮ ಪರವಾಗಿದ್ದಾರೆ ಎಂದು ದೇಶದೆದುರು ತೋರಿಸಿಕೊಳ್ಳಲು ಹೋಗಿ ನಗೆಪಾಟಲಿಗೀಡಾದದ್ದು ಮಾತ್ರ ಸುಳ್ಳಲ್ಲ. ಈ ಹಿಂದೆಯೂ ನಡೆಸಿದ ಹಲವಾರು ಅಭಿಯಾನಗಳಲೂ ಬಿಜೆಪಿ ಇದೇ ಅನೈತಿಕತೆಯ ತಂತ್ರ ಅನುಸರಿಸಿತ್ತೇ ಎನ್ನುವುದು ಈಗ ದೇಶ ಜನರಿಗಿರುವ ಸಂಶಯ, ಅದನ್ನು ಬಿಜೆಪಿಯೇ ಪರಿಹರಿಸಬೇಕಷ್ಟೇ.
ಬಿಜೆಪಿಯ ಐಟಿ ಸೆಲ್ ಹರಿಯಬಿಟ್ಟ ಆಮಿಷವೊಡ್ಡಿದ ಹಲವು ಸಂದೇಶಗಳ ಸ್ಕ್ರೀನ್ ಶಾಟ್ ಗಳು
