ಸಾಮಾಜಿಕ ತಾಣ

ಮಂಗಳೂರು ಪೊಲೀಸರನ್ನು ವಿಮರ್ಶಿಸಿದವರ ವಿರುದ್ಧ ದೇಶದ್ರೋಹ ಪ್ರಕರಣ: ಸಿಡಿದೆದ್ದ ನೆಟ್ಟಿಗರು!

ವರದಿಗಾರ (ಜ.04,20):ಮಂಗಳೂರು ಪೊಲೀಸರ ಗೋಲಿಬಾರ್ – ದೌರ್ಜನ್ಯಗಳ ವೀಡಿಯೋ ಹಾಗೂ ಬರಹಗಳನ್ನು ಪೋಸ್ಟ್ ಮಾಡಿ ವಿಮರ್ಶಿಸಿದ ಹಲವರ ವಿರುದ್ಧ ದೇಶದ್ರೋಹಗಳ ಕಲಮನ್ನು ಸೇರಿಸಿ ಪ್ರಕರಣ ದಾಖಲಿಸಿರುವ ಪೊಲೀಸರ ಏಕಪಕ್ಷೀಯ ನಡೆಯ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೇವಲ ಒಂದು ಸಮುದಾಯವನ್ನು ಮಾತ್ರ ಗುರಿಯಾಗಿಸಿ ಈ ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡುವ ಪೊಲೀಸರ ನಡೆಯನ್ನು ನೆಟ್ಟಿಗರು ಟೀಕಿಸಿದ್ದಾರೆ ಮಾತ್ರವಲ್ಲ ಪ್ರಕರಣ ದಾಖಲಾದವರ ಪರ ಕಾನೂನು ನೆರವು ಬೇಕಿದ್ದರೆ ನೀಡುವುದಾಗಿ ಘೋಷಿಸಿದ್ದಾರೆ. ಪೊಲೀಸರು ಕೋಮು ಪ್ರಚೋದನೆಯ ಪೋಸ್ಟ್ ಹಾಕುವ ಪ್ರತಿಯೊಬ್ಬರ ವಿರುದ್ಧವೂ ಪ್ರಕರಣ ದಾಖಲಿಸಲಿ, ಆದರೆ ತಮ್ಮನ್ನು ವಿಮರ್ಶಿಸಿ ಪೋಸ್ಟ್ ಹಾಕಿದವರ ವಿರುದ್ಧ ಕೇಸು ಹಾಕಿ ನೋಟೀಸು ಜಾರಿಮಾಡಿರುವ ಪೊಲೀಸರ ನಡೆ ಖಂಡಿತಾ ಸಮರ್ಥನೀಯವಲ್ಲವೆಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ಪೊಲೀಸರು ತಮ್ಮ ಗೋಲೀಬಾರ್ ಹಾಗೂ ದೌರ್ಜನ್ಯವನ್ನು ಟೀಕಿಸಿ, ವಿಮರ್ಶಿಸಿ ಪೋಸ್ಟ್ ಹಾಕಿದವರ ವಿರುದ್ಧ 23 ಪ್ರಕರಣಗಳನ್ನು ದಾಖಲಿಸಿ ನೋಟಿಸು ಜಾರಿಗೊಳಿಸಿದ್ದು, ಅಚ್ಚರಿಯೆಂಬಂತೆ ಅವುಗಳಲ್ಲಿ 17 ಪ್ರಕರಣಗಳಲ್ಲಿ ದೇಶದ್ರೋಹದ ಆರೋಪ ಹೊರಿಸಲಾಗಿದೆ. ಸಾಮಾಜಿಕ ತಾಣಗಳಲ್ಲಿ ಇದರ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಜಾಲತಾಣಿಗರು, ಪೊಲೀಸರ ದೌರ್ಜನ್ಯಗಳ ವೀಡಿಯೋಗಳನ್ನು ಪೋಸ್ಟ್ ಮಾಡಿ ಜನರಿಗೆ ವಾಸ್ತವ ಪರಿಸ್ಥಿತಿಗಳನ್ನು ತಿಳಿಸುವ ಪೋಸ್ಟ್ ಗಳನ್ನು ಹಾಕಿದವರನ್ನು ಗುರಿಯಾಗಿಸಿ ಈ ಕೇಸುಗಳನ್ನು ಹಾಕಲಾಗಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group