ಸಾಮಾಜಿಕ ತಾಣ

ಮಂಗಳೂರು ಪೊಲೀಸರ ಗೋಲಿಬಾರನ್ನು ವಿಮರ್ಶಿಸಿದವರ ಮೇಲೆ ದೇಶದ್ರೋಹದ ಕೇಸು ದಾಖಲು!!

ವರದಿಗಾರ (ಜ.03,20): ಕೇಂದ್ರ ಸರಕಾರದ ಸಂವಿಧಾನ ವಿರೋಧಿ ಪೌರತ್ವ ಕಾಯ್ದೆಯನ್ನು ಪ್ರತಿಭಟಿಸಿ ಮಂಗಳೂರಿನಲ್ಲಿ ನಡೆದಿದ್ದ ಪ್ರತಿಭಟನೆಯ ವೇಳೆ ಪೊಲೀಸರ ಗೋಲಿಬಾರಿಗೆ ಎರಡು ಅಮಾಯಕರು ಪ್ರಾಣ ತೆತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಹಲವು ಅಮಾಯಕರ ಮೇಲೆ, ಕಾಲೇಜು ಬಿಟ್ಟು ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳ ಮೇಲೆ, ಬೀದಿ ಅಂಗಡಿ ಮಾಲಕರ ಮೇಲೆ ಲಾಠಿ ಬೀಸಿ ದೌರ್ಜನ್ಯ ಮೆರೆದಿದ್ದರು. ನೆಲ್ಲಿಕಾಯಿ ರಸ್ತೆಯಲ್ಲಿರುವ ಮಸೀದಿಯೊಂದರ ಆವರಣದ ಒಳಗೆ, ಅಶ್ರುವಾಯು ಸಿಡಿಸಿದ್ದರು, ಹೈಲಾಂಡ್ ಆಸ್ಪತ್ರೆಗೆ ನುಗ್ಗಿ ಅಶ್ರುವಾಯು ಸಿಡಿಸಿದ್ದೂ ಅಲ್ಲದೆ ಐಸಿಯುಗೆ ದಾಳಿ ಮಾಡಿದ್ದರು. ಈ ಎಲ್ಲಾ ಪೊಲೀಸ್ ಕೃತ್ಯಗಳನ್ನು ತಮ್ಮಸಾಮಾಜಿಕ ತಾಣಗಳಲ್ಲಿ ವಿಮರ್ಶಿಸಿದ್ದ ಹಲವರ ಮೇಲೆ ಪೊಲೀಸರು ದೇಶದ್ರೋಹದ ಕಲಮನ್ನು ಹಾಕಿ ನೋಟೀಸು ಜಾರಿಗೊಳಿಸಿದ್ದಾರೆ.

‘ಸೈಬರ್ ಕ್ರೈಮ್ ಪೊಲೀಸ್ ಠಾಣೆ ಮಂಗಳೂರು’ ಎನ್ನುವ ಟ್ವಿಟರ್ ಖಾತೆ ಡಿಸಂಬರ್ 29, 30 ಹಾಗೂ 31 ರಂದು ಪೋಸ್ಟ್ ಮಾಡಿರುವ ಟ್ವೀಟ್ ಗಳಲ್ಲಿ ಕೇಸಿನ ನೋಟಿಸ್ ಪ್ರತಿಗಳನ್ನು ಹಾಕಲಾಗಿದ್ದು, ಆ ಎಲ್ಲಾ ಟ್ವೀಟ್ ಗಳನ್ನು ಜಿಲ್ಲಾ ಪೊಲೀಸ್ ಕಮಿಷನರ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮರು ಟ್ವೀಟ್ ಮಾಡಿದ್ದಾರೆ. ಡಿಸಂಬರ್ 29ರಂದು 6 ಕೇಸುಗಳನ್ನು ದಾಖಲು ಮಾಡಲಾಗಿದ್ದು, ಅವುಗಳಲ್ಲಿ ಮೂರು ದೇಶದ್ರೋಹದ ಕಲಮನ್ನು ಹಾಕಲಾಗಿದೆ. ಡಿಸಂಬರ್ 7 ಕೇಸುಗಳನ್ನು ದಾಖಲು ಮಾಡಲಾಗಿದ್ದು ಅವುಗಳಲ್ಲಿ ನಾಲ್ಕು ದೇಶದ್ರೋಹದ ಕಲಮನ್ನು ಹಾಕಿದ್ದರೆ, ಡಿಸಂಬರ್ 31 ರಂದು ದಾಖಲಿಸಿರುವ ಎಲ್ಲಾ 10 ಪ್ರಕರಣಗಳಲ್ಲಿ ದೇಶದ್ರೋಹದ ಕಲಂ 124ಎ ಸೆಕ್ಷನನ್ನು ಹಾಕಲಾಗಿದೆ. ಹೀಗೆ ಮೂರು ದಿನಗಳಲ್ಲಿ ಒಟ್ಟು 23 ಪ್ರಕರಣಗಳನ್ನು ದಾಖಲಿಸಿದ್ದು, ಅವುಗಳಲ್ಲಿ ಬರೋಬ್ಬರಿ 17 ದೇಶದ್ರೋಹದ ಕಲಮನ್ನು ಹಾಕಲಾಗಿದೆ.

ಪೊಲೀಸರು ಎಸ್ಡಿಪಿಐ ದ ಕ ಜಿಲ್ಲಾ ಫೇಸ್ಬುಕ್ ಪೇಜ್ ಮೇಲೆ, ‘ಇದು ನಮ್ಮ ಧ್ವನಿ’ಎನ್ನುವ ಮತ್ತೊಂದು ಫೇಸ್ಬುಕ್ ಪೇಜಿನ ಮೇಲೆ ಕೂಡಾ ಪ್ರಕರಣಗಳನ್ನು ದಾಖಲಿಸಿದ್ದು, ಇವುಗಳಲ್ಲಿ ಇದು ನಮ್ಮ ಧ್ವನಿ ಪೇಜಿನಲ್ಲಿ ಕೆಲವೊಂದು ಪ್ರಚೋದನಕಾರಿ ಸಂದೇಶಗಳಿವೆಯಾದರೂ, ಎಸ್ಡಿಪಿಐ ದ ಕ ಜಿಲ್ಲಾ ಪೇಜಿನ ಯಾವ ಪೋಸ್ಟಿಗಾಗಿ ದೇಶದ್ರೋಹ ಕಲಂ ಹಾಕಲಾಗಿದೆ ಎಂದು ಪೊಲೀಸರೇ ಉತ್ತರಿಸಬೇಕಾಗಿದೆ. ಇದೇ ವೇಳೆ ದೇಶದ್ರೋಹ ಪ್ರಕರಣಗಳಲ್ಲಿ ಎರಡು ಟ್ವಿಟ್ಟರ್ ಖಾತೆಗಳೂ ಸೇರಿದ್ದು, ಇವುಗಳಲ್ಲಿ ಅನೀಸ್ ಅಹ್ಮದ್ ಹಾಗೂ ಆಸಿಫ್ ಖಾನ್ ಎಂಬ ಉತ್ತರ ಪ್ರದೇಶದ ಸಾಮಾಜಿಕ ಕಾರ್ಯಕರ್ತನ ಖಾತೆಗಳನ್ನು ಪರಿಶೀಲಿಸಿದಾಗ, ಪೊಲೀಸರ ದೌರ್ಜನ್ಯಗಳನ್ನು ಪ್ರಶ್ನಿಸಿ ವಿಮರ್ಶಿಸುವುದೇ ದೇಶದ್ರೋಹದಂತಹಾ ಅಪರಾಧವೇ ಎಂಬ ಸಂಶಯ ಮೂಡುತ್ತದೆ. ಅವೆರಡೂ ಖಾತೆಗಳಲ್ಲಿ ಆ ರೀತಿಯ ಯಾವುದೇ ಸಂದೇಶಗಳು ಕಂಡು ಬರಲಿಲ್ಲವೆನ್ನುವುದು ಇಲ್ಲಿ ಗಮನಾರ್ಹ ಅಂಶವಾಗಿದೆ. ಅದು ಮಾತ್ರವಲ್ಲದೆ ಈ ರೀತಿಯ ಪ್ರಚೋದನಕಾರಿ ಸಂದೇಶ ಪೋಸ್ಟ್ ಮಾಡಿರುವ ಕಾರಣಕ್ಕೆ ಕೇಸ್ ದಾಖಲಿಸಲ್ಪಟ್ಟವರು ಕೇವಲ ಒಂದು ಸಮುದಾಯಗಳಿಗೆ ಸೇರಿದವರು ಎನ್ನುವುದು ಮತ್ತೊಂದು ಆತಂಕಕಾರಿಯಾದ ಅಂಶವಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group