ರಾಷ್ಟ್ರೀಯ ಸುದ್ದಿ

‘ಮೋದಿ ಸರಕಾರ ದೇಶವನ್ನು ಅಸ್ಥಿರಗೊಳಿಸುವಂತಹ ಜನಾಂಗೀಯತೆ, ಧರ್ಮದ ಮೇಲೆಯೇ ಗಮನ ನೀಡುತ್ತಿದೆ’: ಅಮೆರಿಕ ಅರ್ಥಶಾಸ್ತ್ರಜ್ಞ

ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಮೋದಿ ಸರಕಾರ ವಿಫಲ: ಸ್ಟೀವ್ ಹಾಂಕ್

‘ವಿಶ್ವದ ಅತ್ಯಂತ ದೊಡ್ಡ ಪೊಲೀಸ್ ರಾಜ್ಯವಾಗಿ ಭಾರತ ಬದಲಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದ ಅರ್ಥಶಾಸ್ತ್ರಜ್ಞ

ದ್ವೇಷದಿಂದ ವಿಶ್ವದ ಮುಂದೆ  ಮಾನ ಕಳೆದುಕೊಂಡ ಭಾರತ ಸರಕಾರ

ವರದಿಗಾರ (ಜ.01,20): ಕಳೆದ ಕೆಲ ತ್ರೈಮಾಸಿಕಗಳಲ್ಲಿ ಉಂಟಾದ ಆರ್ಥಿಕ ನಿಧಾನಗತಿಯಿಂದಾಗಿ ಹೊಸ ವರ್ಷದಲ್ಲಿ ಭಾರತವು ಶೇ. 5ರಷ್ಟು ಜಿಡಿಪಿ ಪ್ರಗತಿ ದಾಖಲಿಸಲು ಹೆಣಗಾಡಬೇಕಾಗಿದೆ. ದೊಡ್ಡ ಮಟ್ಟದ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಮೋದಿ ಸರಕಾರ ವಿಫಲವಾಗಿದೆ ಎಂದು ಅಮೆರಿಕಾದ ಖ್ಯಾತ ಅರ್ಥಶಾಸ್ತ್ರಜ್ಞ ಸ್ಟೀವ್ ಹಾಂಕ್ ಹೇಳಿರುವುದು ಕೇಂದ್ರ ಸರಕಾರಕ್ಕೆ ತೀವ್ರ ಮುಖಭಂಗವಾಗಿದೆ.

‘ದೇಶಕ್ಕೆ ಅಗತ್ಯವಿರುವ ಕಠಿಣ ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸುವಲ್ಲಿ ಮೋದಿ ಸರಕಾರಕ್ಕೆ ಹೆಚ್ಚು ಆಸಕ್ತಿಯಿಲ್ಲ, ಬದಲಾಗಿ ದೇಶವನ್ನು ಅಸ್ಥಿರಗೊಳಿಸುವಂತಹ ಸ್ಫೋಟಕ ವಿಚಾರಗಳಾದ ಜನಾಂಗೀಯತೆ ಹಾಗೂ ಧರ್ಮದ ಮೇಲೆಯೇ ಸರಕಾರ ಗಮನ ನೀಡುತ್ತಿದೆ’ ಎಂದು ಅಮೆರಿಕಾದ ಜಾನ್ ಹಾಪ್ಕಿನ್ಸ್ ವಿವಿಯಲ್ಲಿ ಅನ್ವಯಿಕ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿರುವ ಸ್ಟೀವ್ ಹೇಳಿದ್ದಾರೆ.

ಒಂದು ಕಾಲದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಗದಷ್ಟು ಸಾಲ ನೀಡಿಕೆ ಹೆಚ್ಚಿದ್ದರೂ ಈಗ ಮುಖ್ಯವಾಗಿ ಸರಕಾರಿ ಒಡೆತನದ ಬ್ಯಾಂಕುಗಳ ಅನುತ್ಪಾದಕ ಸಾಲ ಅಥವಾ ಎನ್‍ಪಿಎಗಳಿಂದಾಗಿ ಭಾರೀ ಸಮಸ್ಯೆ ಎದುರಾಗಿದೆ ಎಂದು ಅವರು ಹೇಳಿದ್ದಾರೆ.

“ಇದು ಒಂದು ಡೆಡ್ಲಿ ಕಾಕ್‍ಟೈಲ್, ಮೋದಿ ಆಡಳಿತದಲ್ಲಿ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎಂದು ಎಣಿಸಿಕೊಳ್ಳುವ ಬದಲು ವಿಶ್ವದ ಅತ್ಯಂತ ದೊಡ್ಡ ಪೊಲೀಸ್ ರಾಜ್ಯವಾಗಿ ಭಾರತ ಬದಲಾಗುತ್ತಿದೆ,” ಎಂದು ಅಮೆರಿಕಾದ ಮಾಜಿ ಅಧ್ಯಕ್ಸ ರೊನಾಲ್ಡ್ ರೇಗನ್ ಅವರ ಆರ್ಥಿಕ ಸಲಹೆಗಾರರ ಮಂಡಳಿಯಲ್ಲಿದ್ದ ಸ್ಟೀವ್ ಹೇಳಿದ್ದು, ಈ ಬಗ್ಗೆ ಆತಂಕ ವ್ಯಕ್ತಪಡಿಸಿದರುವುದು ದೇಶದ ಸದ್ಯದ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ. ಅಮೆರಿಕಾದ ಖ್ಯಾತ ಅರ್ಥಶಾಸ್ತ್ರಜ್ಞ ಸ್ಟೀವ್ ಹಾಂಕ್ ಹೇಳಿಕೆಯು ಸದ್ಯ ವಿಶ್ವದ ಮುಂದೆ ದ್ವೇಷದ ಆಡಳಿತದಿಂದ ಸರಕಾರ ತನ್ನ ಮಾನವನ್ನು ಕಳೆದುಕೊಂಡಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

 

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group