ರಾಷ್ಟ್ರೀಯ ಸುದ್ದಿ

ತಾಜ್ ಮಹಲ್ ಶಿವಾಲಯವಲ್ಲ, ಸಮಾಧಿ: ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ

ವರದಿಗಾರ-ಆಗ್ರಾ: ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಯು ನ್ಯ‌ಾಯಾಲಯಕ್ಕೆ ತಿಳಿಸಿದ ವರದಿಯಲ್ಲಿ ವಿಶ್ವದ ಪ್ರಸಿದ್ಧ  7 ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಸಮಾಧಿ ಹೊರತು, ಅದು ದೇವಾಲಯವಲ್ಲ ಎಂದು ಹೇಳಿದೆ.

ತೇಜೋಮಹಲ್ ದೇವಸ್ಥಾನವೆಂದು ತಾಜ್ ಮಹಲ್ ನ್ನು ಬಿಂಬಿಸಿದ ಬಗ್ಗೆ 6 ನ್ಯಾಯವಾದಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಯು ಲಿಖಿತ ಹೇಳಿಕೆ ನೀಡಿದೆ. ಲಿಖಿತ ಹೇಳಿಕೆಯಲ್ಲಿ ಶಿವನ ದೇವಸ್ಥಾನ ದ್ವಂಸಗೊಳಿಸಿ ಅದೇ ಜಾಗದಲ್ಲಿ ತಾಜ್ ಮಹಲ್ ನಿರ್ಮಿಸಲಾಗಿದೆ ಎಂಬ ವಾದವನ್ನು ನಿರಾಕರಿಸಿದೆ.
ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಸೆಪ್ಟೆಂಬರ್ 11ಕ್ಕೆ ಮುಂದೂಡಿದೆ.

ತಾಜ್ ಮಹಲನ್ನು ತೇಜೋ ಮಹಾಲಯವೆಂಬ ಶಿವಾಲಯ ಎಂದು ವಾದಿಸಿದ 6 ನ್ಯಾಯವಾದಿಗಳು, ತಾಜ್ ಮಹಲಿನಲ್ಲಿ ಹಿಂದೂ ಭಕ್ತರಿಗೆ ದರ್ಶನ ಹಾಗೂ ಆರತಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು.

ಪ್ರಸ್ತುತ ತಾಜ್ ಮಹಲಿನಲ್ಲಿ ಪ್ರಾರ್ಥನೆ ಸಲ್ಲಿಸಲು ಮುಸ್ಲಿಮರಿಗೆ ಮಾತ್ರ ಅವಕಾಶವಿದೆ. ಶುಕ್ರವಾರ ಹತ್ತಿರದ ಮಸೀದಿಯಲ್ಲಿ ನಮಾಝ್ ನಿರ್ವಹಿಸಲಾಗುತ್ತಿದೆ.

ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಯ ಪರವಾಗಿ ವಾದಿಸಿದ ವಕೀಲರು, ತಾಜ್ ಮಹಲ್ ಇಸ್ಲಾಮಿಕ್ ಸ್ಮಾರಕವಾಗಿರುವ ಕಾರಣ ಅರ್ಜಿದಾರರಿಗೆ(ಮುಸ್ಲಿಮೇತರರಿಗೆ) ಪ್ರಾರ್ಥನೆ ಸಲ್ಲಿಸುವ ಹಕ್ಕು ಇಲ್ಲವೆಂದರು.

ತಾಜ್ ಮಹಲನ್ನು ತೇಜೋ ಮಹಾಲಯ ಎನ್ನುವ ಮೊಂಡು ವಾದವು ಕೆಲವು ವರ್ಷಗಳಿಂದ ಚಾಲ್ತಿಯಲ್ಲಿದೆ. ದೇಶ-ವಿದೇಶಗಳಿಂದ ಪ್ರವಾಸಿಗಳನ್ನು ತನ್ನತ್ತ ಸೆಳೆಯುವ ರಾಷ್ಟ್ರೀಯ ಸ್ಮಾರಕವೊಂದಕ್ಕೆ ಕೋಮು ಬಣ್ಣವನ್ನು ನೀಡಿ ಸ್ಮಾರಕದ ಮಹತ್ವವನ್ನೂ, ರಾಷ್ಟ್ರೀಯ ಐಕ್ಯತೆಯನ್ನೂ ಕೆಡಿಸಲುದ್ದೇಶಿಸಿದವರ ಕನಸು ಇದರೊಂದಿಗೆ ನುಚ್ಚುನೂರಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group