ರಾಜ್ಯ ಸುದ್ದಿ

ನಾವೂ ಮಂಗಳೂರಿಗೆ ಬರುತ್ತೇವೆ, ತಾಕತ್ತಿದ್ದರೆ ನಮಗೂ ಗುಂಡು ಹೊಡೆದು ಸಾಯಿಸಿ: ಮಂಗಳೂರು ಪೊಲೀಸರಿಗೆ ಮಹಿಳೆಯ ಸವಾಲು

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಬೆಂಗಳೂರಿನಲ್ಲಿ ಮಹಿಳೆಯರ ಪ್ರತಿಭಟನೆ

ವರದಿಗಾರ (ಡಿ.26,2019): ನಾವೂ ಮಂಗಳೂರಿಗೆ ಬರುತ್ತೇವೆ, ತಾಕತ್ತಿದ್ದರೆ ನಮಗೂ ಗುಂಡು ಹೊಡೆದು ಸಾಯಿಸಿ ಎಂದು ಸಾನಿಯಾ ಬಾನು ಮಂಗಳೂರು ಪೊಲೀಸರಿಗೆ ಸವಾಲು ಹಾಕಿದ್ದಾರೆ.

ಅವರು ಬೆಂಗಳೂರಿನ ಟೌನ್ ಹಾಲ್ ಮುಂಭಾಗ ವಿಮೆನ್ ಇಂಡಿಯಾ ಮೂವ್ ಮೆಂಟ್-ವಿಮ್ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ವೀಡಿಯೋ ವೀಕ್ಷಿಸಿ:

‘ನಾವು ಈ ದೇಶದ ನಾಗರಿಕರು, ಹುಟ್ಟಿರುವುದು ಇಲ್ಲಿ ಮತ್ತು ನಾವು ಸಾಯುವುದೂ ಇಲ್ಲಿ. ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಮುಂದಾದ ಯುವಕರ ಮೇಲೆ ಪೊಲೀಸರು ಹಿಗ್ಗಾಮುಗ್ಗಾ ಲಾಠಿ ಚಾರ್ಜ್ ನಡೆಸಿದ್ದಲ್ಲದೆ ಎರಡು ಅಮಾಯಕ ಜೀವಗಳನ್ನು ಗೋಲಿಬಾರ್ ಮೂಲಕ ಹತ್ಯೆ ಮಾಡಿದ್ದಾರೆ. ಇಂತಹ ಪೊಲೀಸ್ ಅಧಿಕಾರಿಗಳು ನಮಗೆ ಬೇಕೇ ಎಂದು ಪ್ರತಿಭಟನಾಕಾರನ್ನು ಪ್ರಶ್ನಿಸಿದ ಸಾನಿಯಾ, ಒಂದು ವೇಳೆ ಕಾರಣಕರ್ತರಾದ ಪೊಲೀಸರನ್ನು ವಜಾ ಮಾಡದಿದ್ದರೆ ಕರ್ನಾಟಕದ ಮಹಿಳೆಯರು ಮಂಗಳೂರಿನಲ್ಲಿ ಸೇರುತ್ತೇವೆ. ಅಲ್ಲಿ ನೀವು ನಮಗೆ ಗುಂಡು ಹೊಡೆದು, ಲಾಠಿ ಚಾರ್ಜ್ ಮಾಡಿ ತೋರಿಸಿ. ಆದರೆ ನಮ್ಮ ಪ್ರಾಣವನ್ನು ಬೇಕಾದರೂ ಕೊಡುತ್ತೇವೆ ಆದರೆ ಗೋಲಿಬಾರ್ ನಡೆಸಿದ ಪೊಲೀಸರನ್ನು ವಜಾ ಮಾಡದಿದ್ದರೆ ನಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group