
ಪೌರತ್ವ ತಿದ್ದುಪಡಿ ವಿರುದ್ಧ ಬೆಂಗಳೂರಿನಲ್ಲಿ ಮಹಿಳೆಯರ ಬೃಹತ್ ಪ್ರತಿಭಟನೆ
ವರದಿಗಾರ (ಡಿ.26,2019): ಇದುವರೆಗೆ ಸುಳ್ಳಿನ ಮೂಲಕ ಜನರನ್ನು ವಂಚಿಸಲಾಗಿತ್ತು, ಇನ್ನು ಮುಂದೆ ಸುಳ್ಳಿನ ವ್ಯಾಪಾರ ನಡೆಯುವುದಿಲ್ಲ ಎಂದು ನ್ಯಾಷನಲ್ ವಿಮೆನ್ಸ್ ಫ್ರಂಟ್ ರಾಷ್ಟ್ರೀಯ ಉಪಾಧ್ಯಕ್ಷೆ ಲುಬ್ನಾ ಸಿರಾಜ್ ಹೇಳಿದ್ದಾರೆ.
ಅವರು ಬೆಂಗಳೂರಿನ ಟೌನ್ ಹಾಲ್ ಮುಂಭಾಗ ವಿಮೆನ್ಸ್ ಇಂಡಿಯಾ ಮೂವ್ ಮೆಂಟ್ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯ ಬಳಿಕ ‘ವರದಿಗಾರ’ದೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ವೀಡಿಯೋ ವೀಕ್ಷಿಸಿ:
‘ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ನಾವು ತಿರಸ್ಕರಿಸುತ್ತೇವೆ ಮತ್ತು ಯಾವುದೇ ರೀತಿಯ ದಾಖಲೆಯನ್ನು ಸಲ್ಲಿಸುವುದಿಲ್ಲ. ನಮ್ಮ ಪೌರತ್ವವನ್ನು ಸರಕಾರಕ್ಕೆ ಸಾಬೀತುಪಡಿಸುವ ಅಗತ್ಯವಿಲ್ಲ. ಸಂವಿಧಾನವು ಅಪಾಯದಲ್ಲಿದೆ ಹಾಗಾಗಿ ನಾವೆಲ್ಲರೂ ಇಂದು ಸಂವಿಧಾನವನ್ನು ಉಳಿಸಲು ಒಂದು ಸೇರಿದ್ದೇವೆ’.
‘ಇದೀಗ ಜನರಿಗೆ ತಿಳಿಯಿತು ನಿಮ್ಮ ಸುಳ್ಳಿನ ವ್ಯಾಪಾರವು ನಡೆಯುದಿಲ್ಲವೆಂದು. ಇಂದು ಸಂವಿಧಾನ ಉಳಿವಿಗಾಗಿ ನಡೆಯುತ್ತಿರುವಂತಹ ಹೋರಾಟವಾಗಿದೆ’ ಎಂದು ಅವರು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ವಿವಿಧ ಮಹಿಳಾ ಸಂಘಟನೆಗಳ ನಾಯಕಿಯರು, ಸಾಮಾಜಿಕ ಚಿಂತಕರು, ಪತ್ರಕರ್ತರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
