ರಾಜ್ಯ ಸುದ್ದಿ

ಮಂಗಳೂರು ಗೋಲಿಬಾರ್; ಪೊಲೀಸರು ಬಿಡುಗಡೆ ಮಾಡಿರುವ ವೀಡಿಯೋಗಳ ಬಗ್ಗೆ ಸಂಶಯವಿದೆ: ಹೆಚ್.ಡಿ. ಕುಮಾರಸ್ವಾಮಿ

ವರದಿಗಾರ (ಡಿ.24, 2019): ಮಂಗಳೂರು ಪೊಲೀಸ್ ಗೋಲಿಬಾರ್ ನಡೆದು ಐದು ದಿನಗಳ ನಂತರ ಪೊಲೀಸರು ಬಿಡುಗಡೆಗೊಳಿಸಿರುವ ವೀಡಿಯೋಗಳ ಕುರಿತಂತೆ ಬಲವಾದ ಸಂಶಯವಿದೆ ಎಂದು ಮಾಜಿ ಮುಖ್ಯಮಂತ್ರಿ  ಹೆಚ್ ಡಿ ಕುಮಾರಸ್ವಾಮಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೇಳಿದ್ದಾರೆ.

ಗೊಲೀಬಾರ್ ನಡೆದ ಐದು ದಿನಗಳ ಬಳಿಕ ಬಿಡುಗಡೆ ಮಾಡಿರುವ ವೀಡಿಯೋಗಳು ಸಂಶಯಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದ ಕುಮಾರಸ್ವಾಮಿ,  ಆ ಟೆಂಪೋದಲ್ಲಿ ಕಲ್ಲು ತುಂಬಿಸಿಕೊಂಡು ಬಂದಿದ್ದಾರೆಂದು ಹೇಳಲಾದ ವೀಡಿಯೋ ಮಂಗಳೂರಿನದ್ದೇ ಅಥವಾ ಬೇರೆ ಪ್ರದೇಶದ್ದೇ ಎಂದು ಪೊಲೀಸರು ಸ್ಪಷ್ಟಪಡಿಸಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕುಮಾರಸ್ವಾಮಿ ಉಲ್ಲೇಖಿಸಿರುವ ಟೆಂಪೋ ವೀಡಿಯೋ ತಿರುಚಿದ ವೀಡಿಯೋ ಆಗಿದ್ದು,  ಕನ್ನಡದ ಕೆಲ ಸುದ್ದಿ ಮಾಧ್ಯಮಗಳು ಪ್ರಸಾರಿಸಿರುವ ಈ ವೀಡಿಯೋದಲ್ಲಿ ಮಧ್ಯದ 2 ನಿಮಿಷಗಳನ್ನು ಡಿಲೀಟ್ ಮಾಡಲಾಗಿದೆ. ಆದರೆ ಆ ವೀಡಿಯೋವನ್ನು ಎಡಿಟ್ ಮಾಡಿದವರು ಯಾರು ಮತ್ತು ಯಾಕಾಗಿ ಡಿಲೀಟ್ ಮಾಡಲಾಗಿದೆ ಎನ್ನುವುದರ ಕುರಿತು ಮಾಧ್ಯಮಗಳು ಮೌನ ವಹಿಸಿರುವುದು ಸಂಶಯಕ್ಕೆ ಕಾರಣವಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group