ರಾಜ್ಯ ಸುದ್ದಿ

ಮಂಗಳೂರು ಪೊಲೀಸರ ಕ್ರೌರ್ಯತೆಗೆ 2 ಅಮಾಯಕ ಜೀವಗಳು ಬಲಿ!

ಮಂಗಳೂರು ಗೋಲಿಬಾರ್ ಹತ್ಯೆಗೆ ಕಮಿಷನರ್ ಹರ್ಷ ನೇರ ಹೊಣೆ: ಎಸ್.ಡಿ.ಪಿ.ಐ

ವರದಿಗಾರ (ಡಿ.20): ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶವ್ಯಾಪಿ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ಇಂದು ಕರ್ನಾಟಕ ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಶಾಂತಿಯುತ ಮತ್ತು ಜನರ ಮೂಲಭೂತ ಹಕ್ಕಾಗಿರುವ ಪ್ರತಿಭಟನೆಗೆ ಅವಕಾಶವನ್ನು ಕಲ್ಪಿಸದೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ  ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿತ್ತು.

ಆದರೆ, ಶಾಂತ ರೀತಿಯಲ್ಲಿ ಪ್ರತಿಭಟನೆಗೆ ಮುಂದಾದ ಸಾರ್ವಜನಿಕರನ್ನು ಪೊಲೀಸರು ಹತ್ತಿಕ್ಕಲು ಪ್ರಯತ್ನಿಸಿದ್ದಾರೆ. ಹತ್ತಿಕ್ಕುವ ಪ್ರಯತ್ನ ರಾಜ್ಯದ ವಿವಿಧ ಜಿಲ್ಲೆಗಳಿಂದ ವರದಿಯಾಗಿದೆ. ಹಲವರ ಮೇಲೆ ಲಾಠಿ ಚಾರ್ಜ್ ಉಪಯೋಗಿಸಲಾಗಿದ್ದು, ಹಲವರನ್ನು ಬಂಧಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರ ಕ್ರೌರ್ಯತೆಯಂತೂ ವಿಭಿನ್ನವಾಗಿತ್ತು. ಗುರುವಾರ ಬೆಳಿಗ್ಗಿನಿಂದಲೇ ಸಾರ್ವಜನಿಕರ ಮೇಲೆ ಲಾಠಿ ಪ್ರಹಾರ ಪ್ರಾರಂಭವಾಗಿತ್ತು. ಅಂಗಡಿ ಮುಗ್ಗಂಟುಗಳ ಮೇಲೆ ಸ್ವಯಂ ಪ್ರೇರಿತ ದಾಳಿಗಳು ಪ್ರಾರಂಭವಾದವು. ಪೊಲೀಸ್ ಲಾಠಿಯಿಂದ ಹಲವರು ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.

ಪೊಲೀಸರು ತಮಗಿಷ್ಟ ಬಂದಂತೆ ಮಂಗಳೂರಿನಲ್ಲಿ ನಡೆದುಕೊಂಡಿರುವ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವ ವೀಡಿಯೋ ಗಳು ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ರಾರಾಜಿಸುತ್ತಿದ್ದು, ಪೊಲೀಸರೊಂದಿಗೆ ಪೊಲೀಸ್ ವಸ್ತ್ರಧಾರಣೆಯಲ್ಲಿರದ ಹಲವು ಯುವಕರು ದಾಳಿ ನಡೆಸುತ್ತಿರುವುದು ಕಂಡು ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಪೊಲೀಸರು ಗೋಲಿಬಾರ್ ನಡೆಸಿದ್ದು, ಗೋಲಿಬಾರ್ ಗೆ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಕೆಲವೊಂದು ಯುವಕರು ಜೀವನ್ಮರಣ ಹೋರಾಟವನ್ನು ನಡೆಸುತ್ತಿದ್ದಾರೆ.

ಘಟನೆಯನ್ನು ತೀವ್ರವಾಗಿ ಖಂಡಿಸಿ ಹೇಳಿಕೆ ಬಿಡುಗಡೆ ಮಾಡಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ- ಎಸ್ಡಿಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ,ಮಂಗಳೂರಿನಲ್ಲಿ ನಡೆದ ಪೊಲೀಸ್ ಗೋಲಿಬಾರ್ ಹತ್ಯೆ ಘಟನೆಗೆ ಕಮಿಷನರ್ ಹರ್ಷ ನೇರ ಹೊಣೆ ಎಂದು ಹೇಳಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಿದ್ದರೂ ಪೊಲೀಸ್ ಇಲಾಖೆ ಯಾಕಾಗಿ ಸೆಕ್ಷನ್ 144 ನ್ನು ಜಿಲ್ಲೆಯಲ್ಲಿ ಜಾರಿಗೆ ಮಾಡಲಾಗಿತ್ತು ಎಂದು ಇಲ್ಯಾಸ್ ಪ್ರಶ್ನಿಸಿದ್ದಾರೆ.

‘ಕಮಿಷನರ್ ಹರ್ಷ ಮಂಗಳೂರಿಗೆ ಬಂದಾಗಿನಿಂದ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಅವಕಾಶವನ್ನು ನಿರಾಕರಿಸುತ್ತಿದ್ದಾರೆ. ಅವರ ಆಜ್ಞೆಯಿಂದಲೇ ಈ ಗೋಲಿಬಾರ್ ನಡೆದಿದೆ ಎಂಬ ಸಂಶಯಗಳು ವ್ಯಕ್ತವಾಗುತ್ತಿದೆ’ ಎಂದು ಹೇಳಿದ್ದಾರೆ.

ಇಲ್ಯಾಸ್ ಮುಹಮ್ಮದ್ ತುಂಬೆರವರ ವೀಡಿಯೋ ವೀಕ್ಷಿಸಿ:

ಮಂಗಳೂರು ಗೋಲಿಬಾರ್ ಹತ್ಯೆಗೆ ಕಮಿಷನರ್ ಹರ್ಷ ನೇರ ಹೊಣೆ: ಎಸ್.ಡಿ.ಪಿ.ಐCommissioner Harsha is responsible for Mangalore Police Firing deaths: Elyas Muhammad Thumbe Watch Video of SDPI Karnataka State President Elyas Muhammad Thumbe#mangaloreprotest #MangaloreGolibar #Mangalore

Posted by SDPI Karnataka on Thursday, 19 December 2019

ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಮಂಗಳೂರು ಪೊಲೀಸರ ಗೂಂಡಾಗಿರಿ!

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group