ರಾಜ್ಯ ಸುದ್ದಿ

ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣ: ನ್ಯಾಯಾಂಗ ತನಿಖೆಗೆ ಪಾಪ್ಯುಲರ್ ಫ್ರಂಟ್ ಆಗ್ರಹ

ವರದಿಗಾರ (ನ.23): ಮೈಸೂರಿನ ಶಾಸಕ, ಮಾಜಿ ಸಚಿವರಾದ ತನ್ವೀರ್ ಸೇಠ್ ಮೇಲೆ ನಡೆದ ಹಲ್ಲೆ ಪ್ರಕರಣದ ವಿಚಾರಣೆ ಮತ್ತು ಪೊಲೀಸರ ತನಿಖಾ ಕ್ರಮವು ಸಂಶಯಾಸ್ಪದವಾಗಿದ್ದು, ಪ್ರಕರಣವನ್ನು ಸಂಪೂರ್ಣವಾಗಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಶಾಸಕರ ಮೇಲೆ ಹಲ್ಲೆ ನಡೆದ ದಿನದಿಂದ ಹಲವು ಊಹಾಪೋಹಗಳನ್ನು ಸೃಷ್ಠಿಸಲಾಗಿದ್ದರೂ ಪೊಲೀಸರ ಆರಂಭಿಕ ತನಿಖಾ ಹಂತದಲ್ಲಿ ಇದೊಂದು ವೈಯಕ್ತಿಕ ದ್ವೇಷದ ಹಲ್ಲೆ ಪ್ರಕರಣ ಎಂಬುದಾಗಿ ವರದಿಯಾಗಿತ್ತು. ಆದರೆ ಬಿಜೆಪಿಯು ಈ ಪ್ರಕರಣವನ್ನು ರಾಜಕೀಯ ದ್ವೇಷಕ್ಕಾಗಿ ಬಳಸಿಕೊಂಡಿದ್ದು ಬಿಜೆಪಿ ಮುಖಂಡರು ಎಸ್ ಡಿಪಿಐ ಮತ್ತು ಪಾಪ್ಯುಲರ್ ಫ್ರಂಟ್ ಸಂಘಟನೆಯ ಮೇಲೆ ಆರೋಪ ಹೊರಿಸಿ ಹೇಳಿಕೆ ನೀಡತೊಡಗಿದ್ದರು. ಬಿಜೆಪಿ ಸರಕಾರವು ಈ ಪ್ರಕರಣವನ್ನು ಸಂಪೂರ್ಣವಾಗಿ ರಾಜಕೀಯಗೊಳಿಸಿದ್ದು ಪೊಲೀಸ್ ತನಿಖೆಯ ದಿಕ್ಕನ್ನೇ ತಪ್ಪಿಸಿದೆ. ಬಿಜೆಪಿ ಆಡಳಿತದಡಿ ಪೊಲೀಸ್ ಇಲಾಖೆಯು ನಡೆಸುವ ತನಿಖೆಯು ನಿಷ್ಪಕ್ಷಪಾತವಾಗಿರುವುದಿಲ್ಲ ಎಂಬುದಕ್ಕೆ ದೇಶಾದ್ಯಂತ ಹಲವು ಪ್ರಕರಣಗಳು ಸಾಕ್ಷಿಯಾಗಿವೆ. ಆದ್ದರಿಂದ ತನ್ವೀರ್ ಸೇಠ್ ಅವರ ಮೇಲಿನ ಹಲ್ಲೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿದರೆ ಮಾತ್ರವೇ ಘಟನೆಯ ಸತ್ಯಾಂಶ ಹೊರಬೀಳಲಿದೆ.

ಹಲ್ಲೆ ಪ್ರಕರಣ ನ್ಯಾಯಾಂಗ ತನಿಖೆಗಾಗಿ ಆಗ್ರಹಿಸುವುದು ಜೊತೆಗೆ ರಾಜಕೀಯ ದ್ವೇಷಕ್ಕಾಗಿ ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸುತ್ತಿರುವ ಬಗ್ಗೆಯೂ ತನಿಖೆ ನಡೆಯಬೇಕು. ರಾಜಕೀಯ ದ್ವೇಷಕ್ಕಾಗಿ ನಡೆಯುವ ಇಂತಹ ಪ್ರಭುತ್ವ ದೌರ್ಜನ್ಯದ ವಿರುದ್ಧ ಪಾಪ್ಯುಲರ್ ಫ್ರಂಟ್ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಯನ್ನೂ ಸಂಘಟಿಸಿ ನ್ಯಾಯಕ್ಕಾಗಿ ತನ್ನ ಹೋರಾಟವನ್ನು ಮುಂದುವರಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group