ರಾಜ್ಯ ಸುದ್ದಿ

ಬಿಜೆಪಿ ಆಡಳಿತ ನಡೆಸುವ ಪ್ರತೀ ರಾಜ್ಯದಲ್ಲೂ ಜನರ ಹಕ್ಕನ್ನು ಕಸಿಯುತ್ತಿದೆ: ಅಮೀನ್ ಮಟ್ಟು

‘ಬಿಜೆಪಿಯು ಬ್ರೋಕರ್ ಗಳ ಗ್ಯಾಂಗ್’: ಪ್ರತಿಭಾ ನಾಯ್ಕ್

ಪರ್ತಕರ್ತ ದೊಡ್ಡಿಪಾಳ್ಯ ನರಸಿಂಹ ಮೂರ್ತಿಯವರ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ

ವರದಿಗಾರ (ಅ.28,2019): ‘ಭಾರತೀಯ ಜನತಾ ಪಾರ್ಟಿ-ಬಿಜೆಪಿಯು ಆಡಳಿತ ನಡೆಸುತ್ತಿರುವ ಪ್ರತಿಯೊಂದು ರಾಜ್ಯದಲ್ಲೂ ಜನರ ಮೂಲಭೂತ ಹಕ್ಕನ್ನು ಕಸಿಯುತ್ತಿದೆ’ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.

ಅವರು ಬೆಂಗಳೂರಿನ ಆನಂದರಾವ್ ವೃತ್ತದ ಬಳಿಯಿರುವ ಗಾಂಧಿ ಪ್ರತಿಮೆಯ ಮುಂಭಾಗ ಪತ್ರಕರ್ತ, ಹೋರಾಟಗಾರ ದೊಡ್ಡಿಪಾಳ್ಯ ನರಸಿಂಹಮೂರ್ತಿ ಯವರ ಬಂಧನ ವಿರುದ್ಧ ಹಾಗೂ ಬಿಡುಗಡೆಗೆ ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

‘ನರಸಿಂಹಮೂರ್ತಿಯವರ ಬಂಧನ ನಿರೀಕ್ಷಿತವಾಗಿದ್ದು, ಜನವಿರೋಧಿ ಸರಕಾರದ ವಿರುದ್ಧ, ಪ್ಯಾಸಿಸ್ಟರ ವಿರುದ್ಧ ಮಾತನಾಡುವ ಧ್ವನಿಯನ್ನು ಬಿಜೆಪಿಯು ತನ್ನೆಲ್ಲಾ ಅಧಿಕಾರಾವಧಿಯಲ್ಲಿ ದಮನಿಸುತ್ತಲೇ ಬಂದಿದೆ. ಈ ಬಂಧನದ ಹಿಂದೆ ಗೌರಿ ಲಂಕೇಶ್ ರವರು ಯಾವ ಕಾರಣಕ್ಕಾಗಿ ಹತ್ಯೆಯಾಗಿದ್ದಾರೆ ಅದರ ನೆರಳಿದೆ’ ಎಂದು ಹೇಳಿದ್ದಾರೆ.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಮಾತನಾಡಿ, ‘ನರಸಿಂಹ ಮೂರ್ತಿಯವರನ್ನು 25 ವರ್ಷ ಹಿಂದಿನ ಕೇಸಿನಲ್ಲಿ ಇಂದು ಬಂಧಿಸುವುದಾದರೆ,ಇದುವರೆಗೆ ಪೊಲೀಸ್ ಇಲಾಖೆ ಯಾಕೆ ಕೈ ಕಟ್ಟಿ ನಿಂತಿತ್ತು? ಆ ಸಂದರ್ಭದಲ್ಲೆಲ್ಲಾ ಅವರು ಏನು ಮಾಡುತ್ತಿದ್ದರು. ಅಧಿಕಾರಿಗಳ, ಜನಸಾಮಾನ್ಯರ, ಸಮಾಜದ ಮುಂದೆ ಓಡಾಡಿರುವ ಮೂರ್ತಿಯನ್ನು ಹಠಾತ್ತನೆ ಬಂಧಿಸುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿರುವ ದೊರೆಸ್ವಾಮಿ, ಇಷ್ಟೊಂದು ಕೆಳಮಟ್ಟಕ್ಕಿಳಿದು ಬಂಧಿಸಿರುವ ಸರಕಾರಕ್ಕೆ ನಾಚಿಕೆಯಾಗಬೇಕೆಂದು ಹೇಳಿದ್ದಾರೆ.

ದೊಡ್ಡಿಪಾಳ್ಯ ನರಸಿಂಹಮೂರ್ತಿ ಯವರ ಬಿಡುಗಡೆ ಆಗ್ರಹಿಸಿ ಪ್ರತಿಭಟನೆಯಲ್ಲಿ ದೊರೆಸ್ವಾಮಿ ಮಾತನಾಡುತ್ತಿರುವುದು

ಪ್ರತಿಭಾ ನಾಯ್ಕ್ ಮಾತನಾಡಿ, ’25 ವರ್ಷಗಳಿಂದ ತಲೆ ಮರೆಸಿಕೊಂಡಿದ್ದರು ಎಂಬುವುದೇ ಹಾಸ್ಯಾಸ್ಪದ. ಅತ್ಯಾಚಾರಿಗಳಿಂದ, ರೌಡಿಗಳಿಂದ ತುಂಬಿರುವ ಬಿಜೆಪಿಯು ಬ್ರೋಕರ್ ಗಳ ಗ್ಯಾಂಗ್ ಎಂದು ಅವರು ಹೇಳಿದ್ದಾರೆ. ಬಿಜೆಪಿಯು ತಮ್ಮ ವಿರುದ್ಧ ಮಾತನಾಡುವವವರನ್ನ ಸಹಿಸಿಕೊಳ್ಳುವುದಿಲ್ಲ. ಅದೇ ಕಾರಣದಿಂದ ನರಸಿಂಹಮೂರ್ತಿಯವರನ್ನು ಬಂಧಿಸಲಾಗಿದೆ. ಬಿಜೆಪಿಯು ಸತ್ಯವನ್ನು ಹೇಳುವ, ನೈಜತೆಯನ್ನು ಬಿತ್ತರಿಸುವ ಮಾಧ್ಯಮಗಳ ಮೇಲೆ ದಾಳಿ ಮಾಡುತ್ತಿದೆ’ ಎಂದು ಹೇಳಿದ್ದಾರೆ.

‘ದೇಶದಲ್ಲಿ ತುರ್ತು ಪರಿಸ್ಥಿತಿಗಿಂತಲೂ ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ಪ್ರಶ್ನಿಸುವವರನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸಲಾಗುತ್ತಿದೆ ಮತ್ತು ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ. ಪ್ಯಾಸಿಸ್ಟ್ ವರ್ಗ ಆಡಳಿತ ನಡೆಸುವಲ್ಲೆಲ್ಲಾ ಇದನ್ನೇ ಮಾಡುತ್ತಾ ಬರುತ್ತಿದೆ. ಅದು ಕನ್ನಯ್ಯ ಕುಮಾರ್ ನಿಂದ ಹಿಡಿದು ದೊಡ್ಡಿಪಾಳ್ಯದವರೆಗೆ, ಗೌರಿ ಲಂಕೇಶ್ ರಿಂದ ಹಿಡಿದು, ದಾಬೋಲ್ಕರ್, ಪನ್ಸಾರೆ ಯವರೆಗೆ. ಬಿಜೆಪಿಯು ದೇಶವನ್ನು ಅರಾಜಕತೆಯತ್ತ ತಳ್ಳುತ್ತಿದೆ’ ಎಂದು ರಾಜ್ಯ ಕೃಷಿ ಸಂಘದ ಅಧ್ಯಕ್ಷ ಆರೋಪಿಸಿದ್ದಾರೆ.

ಮಲ್ಲು ಕುಮಾರ್ ಮಾತನಾಡಿ, ‘ನರಸಿಂಹಮೂರ್ತಿಯವರ ಬಂಧನಕ್ಕೆ ಸಂಬಂಧಿಸಿ ಎಸ್ಪಿಯವರ ಹೇಳಿಕೆಯು ಹಾಸ್ಯಸ್ಪದವಾಗಿದೆ. ಅವರ ಈ ಹೇಳಿಕೆಯಿಂದ ಪೊಲೀಸ್ ಇಲಾಖೆಯಲ್ಲಿ ಅವರು ಇರಲು ಅರ್ಹರಲ್ಲ’ ಎಂದು ಹೇಳಿದ್ದಾರೆ.

ಗೌರಿ ಲಂಕೇಶ್ ಮೀಡಿಯಾ ಟ್ರಸ್ಟ್ ಇದರ ವಾಸು ಮಾತನಾಡಿ, ‘ ಮೂರ್ತಿಯವರು ಕಾರ್ಯಕ್ರಮದಿಂದ ಹಿಂತಿರುಗುವ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿರುವುದರಿಂದ ಮೂರ್ತಿಯವರ ಬಂಧನಕ್ಕೂ ಮಾಧ್ಯಮದ ಲಿಂಕ್ ಇದೆ ಎಂದು ಅವರು ಆರೋಪಿಸಿದ್ದಾರೆ.

ಪ್ರತಿಭಟನೆಯನ್ನುದ್ದೇಶಿಸಿ ವಿವಿಧ ಸಂಘಟನೆಗಳ, ಪಕ್ಷದ, ಪ್ರಗತಿಪರ ನಾಯಕರು ಮಾತನಾಡಿ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರನ್ನು ತಕ್ಷಣ ಸರಕಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕೇಳಿ ಬಂದ ಕ್ರಾಂತಿಕಾರಿ ಹಾಡು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group