ಅನಿವಾಸಿ ಕನ್ನಡಿಗರ ವಿಶೇಷ

ಬಹ್ರೈನ್ ಇಂಡಿಯನ್ ಸೋಶಿಯಲ್ ಫೋರಂ ವತಿಯಿಂದ ಸ್ಥೂಲಕಾಯದ ಕುರಿತಂತೆ ಆರೋಗ್ಯ ಜಾಗೃತಿ ಶಿಬಿರ

ವರದಿಗಾರ : ಇಂಡಿಯನ್ ಸೋಶಿಯಲ್ ಫೋರಂ ಬಹ್ರೈನ್ ಹಾಗೂ ರೆಡ್ ಕ್ರೆಸೆಂಟ್ ಸೊಸೈಟಿ ಜಂಟಿ ಸಹಯೋಗದಲ್ಲಿ ಸಾಲ್ಮೇನಿಯ ಗಾರ್ಡನ್ ವಠಾರದಲ್ಲಿ “ಸ್ಥೂಲಕಾಯದಿಂದ ಮುಕ್ತಿ ಹೊಂದಿ, ಆರೋಗ್ಯವಂತರಾಗಿರಿ” ಎಂಬ ವಿಷಯದಲ್ಲಿ ದೈಹಿಕ ಕ್ಷಮತೆಯ ಕುರಿತಂತೆ  ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಅನಿವಾಸಿಗಳು ಹಾಗೂ ಬಹ್ರೈನ್ ನಾಗರಿಕರನ್ನೊಳಗೊಂಡಂತೆ ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಸಭಿಕರಿಗೆ ಸ್ಥೂಲಕಾಯದ ದುಷ್ಪರಿಣಾಮಗಳು ಹಾಗೂ ಅದರಿಂದ ಮುಕ್ತಿ ಹೊಂದಲು ಇರುವ ಪರಿಹಾರ ಮಾರ್ಗೋಪಾಯಗಳನ್ನು ಪ್ರಾಯೋಗಿಕವಾಗಿ ತೋರಿಸಲಾಯಿತು.  ಈ ಕಾರ್ಯಕ್ರಮವು ಶಿಬಿರಾರ್ಥಿಗಳಿಗೆ ಒಂದು ಹೊಸ ಅನುಭವವನ್ನು ನೀಡಿತು. ರೆಡ್ ಕ್ರೆಸೆಂಟ್ ಸ್ವಯಂಸೇವಕರ ಸೇವೆಯು ಗಮನಾರ್ಹವಾಗಿತ್ತು. ಹೃದಯ ಮತ್ತು ಶ್ವಾಸಕೋಶ ಪ್ರಥಮ ಚಿಕಿತ್ಸಾ ತರಬೇತಿ, ಆರೋಗ್ಯ ತಪಾಸಣೆ, ಮಕ್ಕಳ ಹಾಗೂ ವಯಸ್ಕರ ಆರೋಗ್ಯ ಕಾರ್ಯಕ್ರಮಗಳು ಮಾಹಿತಿಯುಕ್ತವುಳ್ಳ ಫಲಪ್ರದವಾದ ಕಾರ್ಯಕ್ರಮಗಳಾಗಿತ್ತು.

ರೆಡ್ ಕ್ರೆಸೆಂಟ್ ನ ಆರೋಗ್ಯ ವಿಭಾಗದ ಮುಖ್ಯಸ್ಥ ಮುಯಾಝೆರ್ ಅವದುಲ್ಲಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಕಾರ್ಯಕ್ರಮದ ನಿರ್ಣಯಗಳ ಮಹತದ ಕುರಿತಂತೆ ಹೇಳುವಾಗ ಕಾರ್ಯಕ್ರಮದಲ್ಲಿ ಹಾಜರಿದ್ದ ಭಾರತೀಯರು ಗಾಂಧೀಜಿಯನ್ನು ಸ್ಮರಿಸಿಕೊಂಡು ಪುಳಕಿತಗೊಂಡರು. ಬಹ್ರೈನ್ ಸ್ಪೆಶಾಲಿಟಿ ಆಸ್ಪತ್ರೆಯ ಆರೋಗ್ಯ ತಪಾಸಣಾ ತಂಡವು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ನೀಡಿದವು, ರೆಡ್ ಕ್ರೆಸೆಂಟ್ ಸಂಸ್ಥೆಯ ಡಾ ಹಸನ್ ರಾದಿ ದಿಅವರು ಸ್ಥೂಲಕಾಯದ ಕುರಿತಂತೆ ತರಗತಿ ನಡೆಸಿಕೊಟ್ಟರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಹ್ರೈನ್ ಇಂಡಿಯನ್ ಸೋಶಿಯಲ್ ಫೋರಂ ಅಧ್ಯಕ್ಷ ಜವಾದ್ ಪಾಶಾ ಅವರು ವಹಿಸಿಕೊಂಡಿದ್ದರು. ಡಾ ಕೌಸರ್ ಅಲ್ ಈದ್ ಅವರು ಸ್ಥೂಲಕಾಯದ ಕುರಿತಂತೆ ಕೆಲವೊಂದು ವಿಷಯಗಳನ್ನು ಸಂಕ್ಷಿಪ್ತವಾಗಿ ಹಂಚಿಕೊಂಡರು.

ವಸ್ತುಪ್ರದರ್ಶನ ಹಾಗೂ ದೈಹಿಕ ಕ್ಷಮತೆಯನ್ನು ಕಾಪಾಡುವ ಪ್ರಾತ್ಯಕ್ಷಿಕೆಯನ್ನು ಮಾರ್ಶಿಯಲ್ ಆರ್ಟ್ಸ್ ಟ್ರೈನರ್ ಹಾಗೂ ಫಿಟ್ನೆಸ್ ಮಾಸ್ಟರ್ ನಹಾಸ್ ಅವರು ನಡೆಸಿಕೊಟ್ಟರು. ಇಂಡಿಯನ್ ಸೋಶಿಯಲ್ ಫೋರಂ ಹಾಗೂ ರೆಡ್ ಕ್ರೆಸೆಂಟ್ ಸಹಯೋಗದಲ್ಲಿ ನಡೆದ ಸ್ಥೂಲಕಾಯ ದಿನ ಕಾರ್ಯಕ್ರಮವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವೈಶಿಷ್ಟ್ಯತೆ ಮೆರೆಯಿತು. ರೆಡ್ ಕ್ರೆಸೆಂಟ್ ಹಾಗೂ ಬಹ್ರೈನ್ ಸ್ಪೆಶಾಲಿಟಿ ಆಸ್ಪತ್ರೆಯ ಸ್ವಯಂಸೇವಕರನ್ನೊಳಗೊಂಡಂತೆ ನೂರಾರು ಜನರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ, ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವ ಕುರಿತಾಗಿ ತರಬೇತಿ ಕಾರ್ಯಾಗಾರದ ಕೊನೆಯಲ್ಲಿ ಎಲ್ಲರಿಗೂ ಗ್ರೀನ್ ಆಪಲ್ ನ್ನು ಹಂಚಲಾಯಿತು.

ಗಾಂಧಿ ಜಯಂತಿಯ ಪ್ರಯುಕ್ತ ಇಂಡಿಯನ್ ಸೋಶಿಯಲ್ ಫೋರಂ ಬಹ್ರೈನಿನಲ್ಲಿ ನಡೆಸಲುದ್ದೇಶಿಸಿರುವ ಹಲವಾರು ವೈದ್ಯಕೀಯ ಶಿಬಿರಗಳ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು. ಬಹ್ರೈನ್ ಸ್ಪೆಶಾಲಿಟಿ ಆಸ್ಪತ್ರೆಯ ಮಾರ್ಕೆಟಿಂಗ್ ವ್ಯವಸ್ಥಾಪಕ ಮುಹಮ್ಮದ್ ಉಮ್ ಹಾಗೂ ಇಂಡಿಯನ್ ಸೋಶಿಯಲ್ ಫೋರಂನ ಪ್ರಧಾನ ಕಾರ್ಯದರ್ಶಿಕಾರ್ಯದರ್ಶಿಯೂಸು ಅಲಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಬಹ್ರೈನ್ ಸ್ಪೆಶಾಲಿಟಿ ಆಸ್ಪತ್ರೆಯ ಹಾಗೂ ರೆಡ್ ಕ್ರೆಸೆಂಟ್ ಸ್ವಯಂಸೇವಕರಿಗೆ ಮೆಚ್ಚುಗೆಯ ಪ್ರಮಾಣಪತ್ರವನ್ನು ನೀಡಲಾಯಿತು.

Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group