ರಾಜ್ಯ ಸುದ್ದಿ

ನೆರೆ ಪರಿಹಾರ ಬಿಡುಗಡೆ ಮಾಡಿ ಎಂದ ಬಿಜೆಪಿ ಶಾಸಕನಿಗೆ ಶೋಕಾಸು ನೋಟಿಸು ನೀಡಿದ ಬಿಜೆಪಿ

ಸಂಸದರಿಗೆ ಪ್ರಧಾನಿ ಭೇಟಿಗೆ ಸಮಯ ಕೇಳುವ ತಾಕತ್ತೇ ಇಲ್ಲ: ಶಾಸಕ ಯತ್ನಾಳ್

ವರದಿಗಾರ (ಅ.04): ನೆರೆ ಪರಿಹಾರ ಬಿಡುಗಡೆ ಮಾಡಿ ಎಂದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಗೆ ಭಾರತೀಯ ಜನತಾ ಪಾರ್ಟಿ  ಶೋಕಾಸು ನೋಟಿಸು ನೀಡಿರುವ ಬಗ್ಗೆ ವರದಿಯಾಗಿದೆ.

ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆ ಮಾಡಿಸಿಕೊಂಡು ಬರುವಲ್ಲಿ ರಾಜ್ಯದ 25 ಸಂಸದರು ಬೇಜವಾಬ್ದಾರಿ ಮೆರೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕಿದೆ ಎಂದು ನೆರೆ ಪರಿಹಾರ ವಿಚಾರವಾಗಿ ಸ್ವಪಕ್ಷೀಯರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಇದು ಪ್ರಜಾತಂತ್ರ ದೇಶ. ಇಲ್ಲಿ ಯಾರೂ ಯಾರಿಗೂ ಭಯಪಡಬಾರದು. ಪ್ರಧಾನಿ ಮೋದಿ ಯಾರನ್ನೂ ಹೆದರಿಸುವವರಲ್ಲ. ಗುಜರಾತ್ ಸಿಎಂ ಆಗಿ, ಈಗ ಪ್ರಧಾನಿಯಾಗಿದ್ದಾರೆ.   ಸಂಸದರು ಮೌನ ವಹಿಸುವುದು ಸರಿಯಲ್ಲ. ಒಬ್ಬರು ಹುಬ್ಬಳ್ಳಿ, ಮತ್ತೊಬ್ಬರು ಬೆಂಗಳೂರು. ಹೀಗೆ ಒಬ್ಬೊಬ್ಬರು ಒಂದೊಂದು ಕಡೆ ಇದ್ದೀರಿ. ಪ್ರಧಾನಿ ಮೋದಿ ಭೇಟಿಗೆ ಸಮಯ ನಿಗದಿಗೊಳಿಸಿ,” ಎಂದು ಆಗ್ರಹಿಸಿದರು.

ಇಂದು ಅನಂತಕುಮಾರ್ ಬದುಕಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ.  ಅನಂತಕುಮಾರ್​​​ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಧ್ಯೆ ಸೇತುವೆಯಾಗಿದ್ದರು. ಆದರೆ, ಹಾಲಿ ಬಿಜೆಪಿ ಸಂಸದರು ತಗ್ಗುಗಳಾಗಿದ್ದಾರೆ. ಸಂಸದರಿಗೆ ಪ್ರಧಾನಿ ಭೇಟಿಗೆ ಸಮಯ ಕೇಳುವ ತಾಕತ್ತಿಲ್ಲ. ಇನ್ನು ನಮ್ಮನ್ನು ಹೇಗೆ ಭೇಟಿ ಮಾಡಿಸುತ್ತಾರೆ? ಇಂದಿನ ಪರಿಸ್ಥಿತಿಯಲ್ಲಿ ಮೋದಿ ಅವರ ಕಟ್ಟಾ ಅಭಿಮಾನಿಗಳೂ ಕೂಡ ಕೇಂದ್ರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸದಾನಂದಗೌಡ ತಮ್ಮ ಸಾಮರ್ಥ್ಯ ತೋರಿಸಿ, ಪ್ರಧಾನಿಯವರ ಭೇಟಿಗೆ ಅವಕಾಶ ಕೊಡಿಸಲಿ. ಸಂಸದರು ತಮ್ಮ ತಾಕತ್ತು ಪ್ರದರ್ಶಿಸಲಿ. ಕೇಂದ್ರದಿಂದ ರೂ. 10000 ಕೋ. ಪರಿಹಾರ ತರಲಿ ಎಂದು ಅವರು ಆಗ್ರಹಿಸಿದ್ದಾರೆ.

ಯತ್ನಾಳ್ ಅವರ ಹೇಳಿಕೆಯು ಬಿಜೆಪಿಗೆ ತಲೆ ನೋವಾಗಿ ಪರಿಣಮಿಸಿದೆ. ತಮ್ಮೊಳಗಿನ ಶಾಸಕನೇ ಉಲ್ಟವಾಗಿ ಪರಿಣಮಿಸಿದೆ. ಈಗಾಗಲೇ ಪರಿಹಾರ ವಿಚಾರವಾಗಿ ರಾಜ್ಯದ ಜನರಲ್ಲಿ ಬಿಜೆಪಿ ಬಗ್ಗೆ ವ್ಯತಿರಿಕ್ತ ಭಾವನೆ ಉಂಟಾಗಿದೆ. ಈ ನಡುವೆ ಸ್ವಪಕ್ಷೀಯರೇ ಈ ರೀತಿಯಾಗಿ ಹೇಳಿಕೆ ನೀಡಿತ್ತು ಬಿಜೆಪಿ ನಾಯಕರಿಗೆ ತೀರಾ ನಾಚಿಕೆ ಉಂಟು ಮಾಡಿತ್ತು.ಯತ್ನಾಳ್ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಕ್ಷದ ಕೇಂದ್ರ ಶಿಸ್ತು ಸಮಿತಿ, ನಿಮ್ಮ ಹೇಳಿಕೆ ಪಕ್ಷ ವಿರೋಧಿಯಾಗಿ, ಪಕ್ಷ ವಿರೋಧಿ ಹೇಳಿಕೆ ನೀಡಿದ ನಿಮ್ಮನ್ನು ಯಾಕೆ ಪಕ್ಷ ಅಮಾನತು ಮಾಡಬಾರದು ಎಂಬುದಕ್ಕೆ ವಿವರಣೆ ಕೇಳಿ ಯತ್ನಾಳ್ ಅವರಿಗೆ ಶೋಕಾಸ್ ಜಾರಿ ಮಾಡಿದೆ.

ನೆರೆ ಪರಿಹಾರ ವಿಚಾರವಾಗಿ ವಾಸ್ತವ ಮಾತನಾಡಿದ ಯತ್ನಾಳ್ ಅವರಿಗೆ ಪಕ್ಷ ನೋಟಿಸ್ ಜಾರಿ ಮಾಡಿರುವುದರಿಂದ ಅವರ ಬೆಂಬಲಿಗರು ಮತ್ತು ನೆರೆ ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಾಸ್ತವ ಮಾತನಾಡುವುದೇ ತಪ್ಪೇ? ಹಾಗಾದ್ರೆ ರಾಜ್ಯದ ಜನರ ಪರ ಬಿಜೆಪಿ ನಾಯಕರು ಮಾತನಾಡಲೇಬಾರದಾ? ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group