ರಾಜ್ಯ ಸುದ್ದಿ

ಎನ್.ಆರ್.ಸಿ ಯನ್ನು ತಿರಸ್ಕರಿಸುವಂತೆ ಎಸ್.ಡಿ.ಪಿ.ಐ ಕರೆ

‘ನೆರೆ ಪರಿಹಾರದ ಬಗ್ಗೆ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಬಿಜೆಪಿಯ ಹುನ್ನಾರ’

‘ಎನ್.ಆರ್.ಸಿ ಬಿಡಿ- ನೆರೆ ಪರಿಹಾರ ಕೊಡಿ’ ಘೋಷಣೆಯಲ್ಲಿ ರಾಜ್ಯವ್ಯಾಪಿ ಪ್ರತಿಭಟನೆಗೆ ಸಿದ್ದತೆ

ವರದಿಗಾರ (ಅ.04,2019): ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ)ಯನ್ನು ತಿರಸ್ಕರಿಸುವಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್‍ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಕರೆ ನೀಡಿದ್ದಾರೆ.

” ಎನ್.ಆರ್.ಸಿ ಬಿಡಿ- ನೆರೆ ಪರಿಹಾರ ಕೊಡಿ” ಎಂಬ ಘೋಷಣೆಯೊಂದಿಗೆ ರಾಜ್ಯವ್ಯಾಪಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ಇಲ್ಯಾಸ್ ತಿಳಿಸಿದ್ದಾರೆ.

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ)ಯನ್ನು ಕರ್ನಾಟಕದಲ್ಲೂ ಜಾರಿಗೆ ತರಲಾಗುವುದೆಂದು ಹೇಳಿಕೆ ನೀಡಿರುವ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರದು ಕೇವಲ ಬೆದರಿಸುವ ವಿಫಲ ತಂತ್ರವಲ್ಲದೆ ಮತ್ತೇನೂ ಅಲ್ಲ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.

ಎನ್.ಆರ್.ಸಿ ಎಂಬ ಅಸ್ತ್ರವನ್ನು ಉಪಯೋಗಿಸಿಕೊಂಡು ಮುಸ್ಲಿಮ್ ಸಮುದಾಯವನ್ನು ದಮನಿಸಲು ಹೊರಟಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳು ಕೋಮುವಾದಿ ಹಾಗೂ ಜನಾಂಗೀಯವಾದಿ ನೀತಿಗೆ ಮೊರೆ ಹೋಗಿವೆ. ಭಾರತ ದೇಶದ ನಾಗರಿಕರ ಅಭಿವೃದ್ಧಿ, ವಿಕಾಸದ ಬಗ್ಗೆ ಚಿಂತಿಸುವುದರ ಬದಲಾಗಿ ದೇಶದ ಪ್ರಜೆಗಳನ್ನು ಹೊರದಬ್ಬುವುದು ಹೇಗೆ ಎಂಬ ಬಗ್ಗೆ ಯೋಚಿಸುವ ಇಂತಹ ಕುತ್ಸಿತ ಹಾಗೂ ವಿಭಜನಕಾರಿ ಮನಸ್ಸುಗಳು ದೇಶದ ಆಡಳಿತದ ಚುಕ್ಕಾಣಿಯಲ್ಲಿ ವಕ್ಕರಿಸಿರುವುದು ಭಾರತದ ಅತ್ಯಂತ ದುರದೃಷ್ಟವಾಗಿದೆ. ಆರೆಸ್ಸೆಸ್ಸಿನ ಜನಾಂಗೀಯವಾದಿ ಮತ್ತು ವಿಭಜನವಾದಿ ಸಿದ್ಧಾಂತಗಳನ್ನು ಕುತಂತ್ರಗಳ ಮೂಲಕ ಜಾರಿಗೆ ತರುತ್ತಿರುವ ಬಿಜೆಪಿ ಈ ದೇಶದ ಸಮಗ್ರತೆಗೆ, ಏಕತೆಗೆ ಹಾಗೂ ಭಾವೈಕ್ಯತೆಗೆ ಅತ್ಯಂತ ಮಾರಕವಾಗಿ ಪರಿಣಮಿಸುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್‍ಶಾ ಸಂವಿಧಾನ ವಿರೋಧಿ “ಪೌರತ್ವ ತಿದ್ದುಪಡಿ ಮಸೂದೆ”ಯನ್ನು ಮಂಡಿಸಿ ಜಾರಿಗೆ ತರಲಾಗುವುದೆಂದು ದೇಶದ ಮುಸ್ಲಿಮರನ್ನು ಬೆದರಿಸುವ ಹತಾಶ ಪ್ರಯತ್ನಕ್ಕೆ ಇಳಿದಿದ್ದಾರೆ. ಎಸ್‍ಡಿಪಿಐ ಹಾಗೂ ದೇಶದ ಎಲ್ಲಾ ಸಂವಿಧಾನಪ್ರಿಯ ಹಾಗೂ ಜಾತ್ಯಾತೀತ ಜನರೆಲ್ಲ ಒಂದಾಗಿ ಬಿಜೆಪಿ ಹಾಗೂ ಸಂಘಪರಿವಾರದ ಎಲ್ಲಾ ಷಡ್ಯಂತ್ರಗಳನ್ನು ವಿಫಲಗೊಳಿಸಲಾಗುವುದು ಎಂದು ಇಲ್ಯಾಸ್ ಮುಹಮ್ಮದ್ ಹೇಳಿದ್ದಾರೆ.

ವೀಡಿಯೋ ವೀಕ್ಷಿಸಿ:

ಮುಲಾಜಿಲ್ಲದೆ NRCಯನ್ನು ತಿರಸ್ಕರಿಸುವಂತೆ SDPI ರಾಜ್ಯಾಧ್ಯಕ್ಷರ ಕರೆ'NRC ಬಿಡಿ- ನೆರೆ ಪರಿಹಾರ ಕೊಡಿ' ಘೋಷಣೆಯೊಂದಿಗೆ ರಾಜ್ಯವ್ಯಾಪಿ ಪ್ರತಿಭಟನೆಗೆ SDPI ನಿರ್ಧಾರ.

Posted by SDPI Karnataka on Friday, 4 October 2019

ಎನ್.ಆರ್.ಸಿ ಎಂಬ ಬೆದರುಬೊಂಬೆಗೆ ಈ ದೇಶದ ಜನತೆ ಸೊಪ್ಪು ಹಾಕಲಾರರು. ಎಸ್‍ಡಿಪಿಐ ಅದನ್ನು ಸಾರಸಗಟವಾಗಿ ತಿರಸ್ಕರಿಸುತ್ತಿದೆ. ಯಾವುದೇ ಸಮುದಾಯಗಳ ಜನರು ಅದಕ್ಕೆ ಬೆದರಲಾರರು ಎಂದು ಇಲ್ಯಾಸ್ ಹೇಳಿದ್ದಾರೆ.

ರಾಜ್ಯದಲ್ಲಿ ಸಾವಿರಾರು ಜನರು ಪ್ರವಾಹ ಸಂತ್ರಸ್ತರಾಗಿ ಮನೆ ಮಾರುಗಳನ್ನು ಕಳೆದುಕೊಂಡು ಅನ್ನಕ್ಕಾಗಿ ಪರದಾಡುತ್ತಿರುವಾಗ ಅಂತಹವರ ಪುನರ್ವಸತಿ ಮತ್ತು ಪರಿಹಾರಕ್ಕಾಗಿ ಏನೇನೂ ಮಾಡದ ಕೇಂದ್ರ ಹಾಗೂ ರಾಜ್ಯ ಸರಕಾರ ಇಂತಹ ಹೇಳಿಕೆಗಳಿಂದ ಜನರ ದಿಕ್ಕು ತಪ್ಪಿಸುತ್ತಿದೆ. ದೇಶದಲ್ಲಿ ಮೋದಿ ಸರಕಾರದ ಅತೀ ಜನವಿರೋಧಿ ಆಡಳಿತದಿಂದ ಜನರು ತತ್ತರಿಸುತ್ತಿದ್ದು, ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರವಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿರುವ ಅಮಿತ್ ಶಾ ಹಾಗೂ ಬೊಮ್ಮಾಯಿ ಹೇಳಿಕೆಗಳು ಖಂಡನೀಯ ಎಂದು ಇಲ್ಯಾಸ್ ತಿಳಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group