ರಾಷ್ಟ್ರೀಯ ಸುದ್ದಿ

ಬಣ್ಣದ ಬಗ್ಗೆ ಖೇದ ವ್ಯಕ್ತಪಡಿಸಿ ಮನಬಿಚ್ಚಿ ಮಾತನಾಡಿದ ಭಾರತದ ಕ್ರಿಕೆಟಿಗ

ವರದಿಗಾರ: ಭಾರತದ ಕ್ರಿಕಟ್ ತಂಡದ ಆಟಗಾರ ಅಭಿನವ್ ಮುಕುಂದ್, ಸಾಮಾಜಿಕ ಜಾಲತಾಣದಲ್ಲಿ ತನ್ನೊಳಗಿದ್ದ ಬೇಸರ ಹಾಗೂ ತಾನು ಎದುರಿಸಿದ ಸವಾಲುಗಳನ್ನು ಪತ್ರದ ಮೂಲಕ ಮನಬಿಚ್ಚಿ ಹೇಳಿದ್ದಾರೆ.

ಅಭಿನವ್ ತನ್ನ ಅಭಿಮಾನಿಗಳಿಗೆ   ‘ಯೋಚನೆಯನ್ನು ಬದಲಾಯಿಸಿ’ ಎಂದು ಮನವಿ ಮಾಡಿ ಕೊಂಡಿದ್ದಾರೆ . ಜಾತಿ, ವರ್ಣ, ಬಣ್ಣ ನಾವು ಕೇಳಿ ಪಡೆಯುವುದಲ್ಲ ಬದಲಾಗಿ ದೇವರು ಕೊಟ್ಟಿರುವುದನ್ನು ನಾವು ಸ್ವೀಕರಿಸಕೆಂದು ಅವರು ತನ್ನ ಪತ್ರದಲ್ಲಿ ತಿಳಿಸಿದ್ದಾರೆ.  ಕಾಲು ಎಳೆಯುವರಿಗೆ ಏನು ಹೇಳಲು ಸಾಧ್ಯ? ಅವರಿಗೇನು ಗೊತ್ತು ಬಣ್ಣದ ಹಿಂದಿನ ಖದರ್​. ವಿಶ್ವದ ಮಹಾನ್ ವ್ಯಕ್ತಿಗಳೂ ಕಪ್ಪು ಬಣ್ಣದವರೇ ಆಗಿದ್ರು, ನಿಮಗೇಕೆ ನನ್ನ ಬಣ್ಣದ ಬಗ್ಗೆ ಚಿಂತೆ ಎಂದು ಪ್ರಶ್ನಿಸಿದ್ದಾರೆ. ಇದು ಭಾರತದ ಕ್ರಿಕಟ್ ತಂಡದ ಆಟಗಾರನ ಮನದಾಳದ ಮಾತುಗಳು.

ತನ್ನ ಹಿಂಬಾಲಕರಿಂದಲೇ ಜನಾಂಗೀಯ ನಿಂದನೆಗೊಳಪಟ್ಟಿರೋ ಅಭಿನವ್​, ಜನರ ವರ್ಣಭೇದ ಯೋಚನೆಯ ಕುರಿತು ಟ್ವಿಟ್ಟರ್​​ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ನಾನು 10 ವರ್ಷ ಇದ್ದಾಗಿಂದಲೇ  ಕ್ರಿಕೆಟ್ ಆಡುತ್ತಾ ಬೆಳೆದವನು. ಹಂತ ಹಂತವಾಗಿ ನಾನು ಈ ಹಂತಕ್ಕೆ ಬಂದಿದ್ದೇನೆ. ಸದ್ಯ ದೇಶವನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುವುದಕ್ಕೆ ಹೆಮ್ಮೆಯಾಗುತ್ತಿದೆ  ಎಂದು ತಿಳಿಸಿದ್ದಾರೆ.

ನಾನು ಈ ಪತ್ರವನ್ನ ಬರೆಯುತ್ತಿರುವುದು ಯಾರ ಗಮನವನ್ನ ಸೆಳೆಯುವುದಕ್ಕೊ,  ಕರುಣೆ ಗಿಟ್ಟಿಸುವುದಕ್ಕೊ ಅಲ್ಲ. ಈ ಮೂಲಕವಾದ್ರು ಜನರ ಯೋಚನೆಗಳು ಬದಲಾಗಲಿ ಎಂಬ ನಂಬಿಕೆಯಿಂದ ಬರೆಯುತ್ತಿದ್ದೇನೆ ಎಂದು ಅವರು ಉಲ್ಲೇಖಿಸಿದ್ದಾರೆ.
ನಾನು ಚಿಕ್ಕ ವಯಸ್ಸಿನಿದ್ದಾಗಿಂದಲೂ ಜನರು ನನ್ನ ಬಣ್ಣದ ಕುರಿತು ಗಮನ ಹರಿಸುತ್ತಿದ್ದುದ್ದು ನನಗೆ ನಿಜಕ್ಕೂ ಆಶ್ಚರ್ಯವನ್ನುಂಟು ಮಾಡುತ್ತಿತ್ತು. ನಿಜವಾದ ಕ್ರಿಕೆಟ್​​ ಅಭಿಮಾನಿಗಳಿಗಷ್ಟೇ ಯಾಕೆ ಹೀಗೆ ಎಂದು ತಿಳಿಯಲು ಸಾಧ್ಯ. ನಾನು ಹಗಲಿರುಳು ಕ್ರಿಕೆಟ್​​ ಅಭ್ಯಾಸಕ್ಕಾಗಿ ಹೆಚ್ಚಿನ ಸಮಯವನ್ನ ಮೀಸಲಿಡುತ್ತಿದ್ದೆ. ನಾನು ಬಿಸಿಲಿನಲ್ಲಿ ಆಡುವಾಗ ಬಿಸಿಲಿಗೆ ಕಪ್ಪು ಆಗಿ ಬಿಡುತ್ತೇನೆಂದು ಹಿಂಜರಿದವನಲ್ಲ. ನಾನು ಏನು ಮಾಡುತ್ತಿದ್ದೆನೋ, ಅದನ್ನ ಪ್ರೀತಿಸುತ್ತಿದ್ದೆ. ಕ್ರಿಕೆಟ್​ನ ಪ್ರೀತಿಗಾಗಿ ಮೈದಾನದಲ್ಲಿ ಸಾಕಷ್ಟು ಸಮಯ ಕಳೆದಿದ್ದೇನೆ. ಅಷ್ಟಲ್ಲದೆ ನಾನು ಚೆನ್ನೈನಿಂದ ಬಂದವನು. ದೇಶದ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ನಗರಗಳಲ್ಲೊಂದು. ಹೀಗಾಗಿ ನಾನು ಸಾಕಷ್ಟು ಸಮಯವನ್ನ ಕ್ರಿಕೆಟ್ ಮೈದಾನಗಳಲ್ಲಿ ಕಳೆದಿದ್ದೇನೆ.
ನಾನು ಸಾಕಷ್ಟು ಜನರಿಂದ ಸಾಕಷ್ಟು ಹೆಸರಿನಿಂದ ಕರೆಸಿಕೊಂಡಿದ್ದೇನೆ ಮತ್ತು ಅಪಹಾಸ್ಯಕೊಳಪಟ್ಟಿದ್ದೇನೆ. ಚಿಕ್ಕವನಿದ್ದಾಗಿಂದಲೂ ನನ್ನ ಮುಂದೆ ದೊಡ್ಡ ಗುರಿ ಇತ್ತು. ಯಾವುದೇ ಅಪಹಾಸ್ಯಕ್ಕೂ ತಲೆಕೆಡಿಸಿಕೊಳ್ಳದೆ ನನ್ನ ಗುರಿಯ ಕಡೆ ಗಮನ ಹರಿಸಿರುವುದುರ ಫಲವಾಗಿದೆ ನಾನಿಂದೂ ಈ ಎತ್ತರಕ್ಕೆ ಬೆಳೆಯಲು ಕಾರಣ. ಈ ಅಡೆತಡೆಗಳು ಎಂದೂ ನನ್ನನ್ನು ಹಿಂದೆ ಸರಿಸಲಿಲ್ಲ. ಈ ಹಿಂದೆ ಸಾಕಷ್ಟು ಬಾರಿ ಈ ರೀತಿಯ ಟೀಕೆಗಳಿಗೆ ಉತ್ತರಿಸದೆ ಸುಮ್ಮನಾಗಿದ್ದೆ. ಆದ್ರೆ ಇಂದು ಮಾತನಾಡುತ್ತಿದ್ದೇನೆ. ಯಾಕಂದ್ರೆ ನನಗಾದ ನೋವಿನಿಂದಷ್ಟೇ ಅಲ್ಲ, ದೇಶದಲ್ಲಿ ಸಾಕಷ್ಟು ಜನರು ಕೇವಲ ತನ್ನ ಚರ್ಮದ ಬಣ್ಣದಿಂದಾಗಿ ಅದೆಷ್ಟೋ ಜನರು ಅಪಹಾಸ್ಯಕ್ಕೆ, ನೋವಿಗೆ, ಟೀಕೆಗೆ ಒಕ್ಕೊಳಗಾಗುತ್ತಿದ್ದಾರೆ.
ಸೌಂದರ್ಯ ಎನ್ನುವುದು ಕೇವಲ ಸುಂದರವಾಗಿ ಕಾಣಿಸಿಕೊಳ್ಳುವುದಷ್ಟೇ ಅಲ್ಲ,ಅರ್ಥಮಾಡಿಕೊಳ್ಳಿ. ನಿಮ್ಮ ಚರ್ಮದಲ್ಲಿ ತೃಪ್ತಿಯಾಗಿ ಆರಾಮದಾಯಕರಾಗಿರಿ ಎಂದು ಅಭಿನವ್ ಮುಕುಂದ್ ತನ್ನ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಹೀಗೆ ಅಭಿನವ್​ರ ನೋವು ತುಂಬಿದ ಈ ಮಾತುಗಳನ್ನ ಬೆಂಬಲಿಸಿರೋ ಕ್ರಿಕೆಟಿಗ ಮನೋಜ್​ ತಿವಾರಿ ಹಾಗೂ ಆರ್​​. ಅಶ್ವಿನ್​​​ ಇದನ್ನ ಪ್ರಚಾರ ಮಾಡಬೇಡಿ, ಓದಿ ತಿಳಿದುಕೊಳ್ಳಿ, ಇದು ಚರ್ಚಾ ವಿಷಯವಲ್ಲ ಮತ್ತು ಇದು ಒಬ್ಬ ವ್ಯಕ್ತಿಯ ಭಾವನೆ ಎಂದು ಹೇಳಿದ್ದಾರೆ. ಅಭಿನವ್ ಮುಕುಂದು ಮನ ಬಿಚ್ಚಿ ಮಾತನಾಡಿರುವುದು ಸದ್ಯ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group