ರಾಜ್ಯ ಸುದ್ದಿ

ಸತ್ಯವನ್ನು ಹೇಳಲಾಗದ ಪತ್ರಕರ್ತರು ದನ  ಕಾಯಲು ಹೋಗಲಿ: ರಾ.ಚಿಂತನ್

ನೀವೇನಾ ಪತ್ರಕರ್ತರು? ಇದೇನಾ ನಿಮ್ಮ ಪತ್ರಿಕೋದ್ಯಮ? ಎಂದು ಪಶ್ನಿಸಿದ ಪತ್ರಕರ್ತ

‘ದೇಶದಲ್ಲಿ ಸತ್ಯ ಸತ್ತಿಲ್ಲ, ಸತ್ಯದ ಮೇಲೆ ಪ್ರಹಾರ ನಡೆಯುತ್ತಿದೆ’

‘ನಾನು ಮುಸಲ್ಮಾನರ ವಿರೋಧಿ ಎಂದು ಅಮಿತ್ ಶಾ ಬಹಿರಂಗವಾಗಿ ಹೇಳುತ್ತಿದ್ದರೂ ಅವರನ್ನು ಯಾವ ಪತ್ರಕರ್ತನು ಪ್ರಶ್ನಿಸುತ್ತಿಲ್ಲ’

ವರದಿಗಾರ (ಅ.03): ‘ಸತ್ಯವನ್ನು ಹೇಳಲಾಗದ ಪತ್ರಕರ್ತರು ದನ  ಕಾಯಲು ಹೋಗಲಿ’ ಎಂದು ಚಿಂತಕ, ಪತ್ರಕರ್ತ ರಾ.ಚಿಂತನ್ ಅಭಿಪ್ರಾಯಪಟ್ಟಿದ್ದಾರೆ.

ಅವರು ಇಂದು ಬಿಡುಗಡೆಗೊಳಿಸಿರುವ ತನ್ನ ವೀಡಿಯೋದಲ್ಲಿ ದೇಶದ ಪ್ರಸಕ್ತ ಸನ್ನಿವೇಶಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ, ಸಮಾಜವನ್ನು ತಿದ್ದಬೇಕಾದ ಪತ್ರಕರ್ತರು ಅಧಿಕಾರದಲ್ಲಿರುವವರ ಕೈಗೊಂಬೆಯಾಗಿ, ಪತ್ರಿಕೋದ್ಯಮಕ್ಕೆ ಬೆದರಿಕೆಯಾಗಿ ವೃತ್ತಿ ಜೀವನದಲ್ಲಿ ನೈಜತೆಯನ್ನು ಮರೆಮಾಚಿ ಸುಳ್ಳನ್ನು ಅಬ್ಬರಿಸುತ್ತಿರುವ ಪತ್ರಕರ್ತರ ಬಗ್ಗೆ ತೀಕ್ಷ ಮಾತುಗಳಿಂದ ಎಚ್ಚರಿಸಲು ಪ್ರಯತ್ನಿಸಿದ್ದಾರೆ.

‘ಪತ್ರಕರ್ತರೆಂದರೆ ಸಮಾಜದ ಅಂಕುಡೊಂಕುಗಳನ್ನು ತಿದ್ದಬೇಕಾಗಿರುವವರು, ಈ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಬೇಕಾದವರು. ಅದೆಲ್ಲದಕ್ಕಿಂತ ಹೆಚ್ಚಾಗಿ ಸತ್ಯವನ್ನು ಹೇಳಬೇಕಾಗಿರುವವರು. ಸತ್ಯವನ್ನು ಶೋಧಿಸಬೇಕಾದವರು.  ಆದರೆ ಸತ್ಯವನ್ನು ಮರೆಮಾಚಿ ಸುಳ್ಳಿನಡೆಗೆ ಮುಖಮಾಡಿದ್ದಾರೆ’ ಎಂದು ಪತ್ರಕರ್ತ ರಾ. ಚಿಂತನ್ ಹೇಳಿಕೊಂಡಿದ್ದಾರೆ.

ತನ್ನ ವೀಡಿಯೋದಲ್ಲಿ ‘ಚುನಾವಣೆಯ ಸಂದರ್ಭ ಟಿವಿಗಳನ್ನು ನೋಡುವುದು ನಿಲ್ಲಿಸಿ’ ಎಂದು ಕರೆ ನೀಡಿದ್ದ ಎನ್.ಡಿ.ಟಿ.ವಿ ಯ   ಪ್ರತಿಷ್ಠಿತ ರಾಮನ್‌ ಮ್ಯಾಗ್ಸಸ್ಸೆ ಪ್ರಶಸ್ತಿ ಪುರಸ್ಕೃತ ರವೀಶ್ ಕುಮಾರ್ ರವರ ಪತ್ರಿಕೋದ್ಯಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ‘ಇವತ್ತು ರವೀಶ್ ಕುಮಾರ್ ರಂತಹ ಪತ್ರಕರ್ತ ಸೆಲೆಬ್ರೆಟಿ ಆಗುತ್ತಾರೆ ಎಂದರೆ ಅದರಲ್ಲಿ ಸತ್ಯವಿದೆ. ಫಾಯೆ ಡಿಸೋಜ, ರಾಜ್ ದೀಪ್ ಸರ್ದೇಸಾಯಿ ಹೀಗೆ ಕೆಲವೊಂದಿಷ್ಟು ಜನ ನಮಗೆ ಸತ್ಯವನ್ನು ನೀಡುತ್ತಿದ್ದಾರೆ. ನಾವು  ಕರ್ನಾಟಕದಲ್ಲಿ ಲಂಕೇಶ್ ರವರನ್ನೇ ನೆನಪಿಸುತ್ತಿರುತ್ತೇವೆ. ಲಕ್ಷಾಂತರ ಪತ್ರಕರ್ತರಿದ್ದು ಕೆಲವೊಬ್ಬರು ಮಾತ್ರ ಯಾಕೆ ಸತ್ಯವನ್ನು ಮಾತನಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದ ರಾ.ಚಿಂತನ್, ‘ಈ ದೇಶದ ಆಡಳಿತ ಪ್ರಶ್ನಾರ್ಹವಾಗಿದೆ ಎಂದರೆ ಅದಕ್ಕೆ ನಾವು ಪತ್ರಕರ್ತರೇ ಮುಖ್ಯ ಕಾರಣ. ನಾವು ಸತ್ಯವನ್ನು ವಿಮರ್ಶಿಸುವ ಕೆಲಸ ಮಾಡಿಯೇ ಇಲ್ಲ. ಜನತೆಗೆ ನಾವು ವಿಚಾರವನ್ನು ಮುಟ್ಟಿಸುವವರು. ಆ ವಿಚಾರವನ್ನೇ ತಪ್ಪಾಗಿ ತಲುಪಿಸುತ್ತಾ ಹೋದರೆ? ಜನತೆ ಯಾವ ರೀತಿಯಲ್ಲಿ ಅದನ್ನು ಸ್ವೀಕರಿಸುತ್ತಾರೆ’ ಎಂದು ಪ್ರಶ್ನಿಸಿದ್ದಾರೆ.

ವೀಡಿಯೋ ವೀಕ್ಷಿಸಿ:

‘ನಾವು ಇಂದು ಕೊಡುತ್ತಿರುವ ಸುಳ್ಳು ಸುದ್ದಿಗಳಿಂದ ನಾಳೆ ನಮ್ಮ ಮಕ್ಕಳು ಸಂಕಷ್ಟ ಅನುಭವಿಸುತ್ತಾರೆ. ಇವತ್ತು ಈ ದೇಶದಲ್ಲಿ ಸತ್ಯ ಸತ್ತಿಲ್ಲ, ಬದಲಾಗಿ ಸತ್ಯದ ಮೇಲೆ ಪ್ರಹಾರ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

‘ನನ್ನ ನೈತಿಕತೆಯನ್ನು ಮಾರಿ ಪತ್ರಿಕೋದ್ಯಮದಲ್ಲಿರುವುದಕ್ಕಿಂತ ದನ ಮೇಯುಸುವುದೇ ಉತ್ತಮ. ಅದಕ್ಕೇನೇ ಲಾಯಕ್ಕು. ಹಾಗಂತ ದನ ಮೇಯುವುಸುವುದು ಕೆಟ್ಟ ಕೆಲಸವಲ್ಲ. ಅದರಿಂದಲೂ ಜೀವನ ಸಾಗಿಸುವ ಬಹಳಷ್ಟು ಜನರಿದ್ದಾರೆ. ಆದರೆ ಇಲ್ಲಿದ್ದು ಜನತೆಯ ಮಾರ್ಗ ತಪ್ಪಿಸುವುದಕ್ಕಿಂತ ಅದೇ ಉತ್ತಮ. ಸತ್ಯವನ್ನು ನನ್ನಿಂದ ಹೇಳಲು ಸಾಧ್ಯವಿಲ್ಲ, ನನ್ನ ನಾಲಗೆಗೆ ಕಡಿವಾಣ ಹಾಕಿದೆ ಎಂದರೆ ಆ ನಾಲಗೆಯನ್ನು ಕತ್ತರಿಸಿ ದನ ಮೇಯಿಸಲು ಹೋಗಲಿ’ ಎಂದು ಹೇಳಿದ್ದಾರೆ.

‘ಗ್ರಹ ಸಚಿವ ಅಮಿತ್ ಶಾ ನಾನು ಮುಸಲ್ಮಾನರ ವಿರೋಧಿ ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಅವರ ಹೇಳಿಕೆಯನ್ನು ಖಂಡಿಸಿ, ಆ ಬಗ್ಗೆ ಸತ್ಯವನ್ನು ಜನತೆಯ ಮುಂದೆ ಇಡಬೇಕಾಗಿದ್ದ ಪತ್ರಕರ್ತರು ಮಾತನಾಡುತ್ತಿಲ್ಲ. ಕೆಲವೊಂದು ಪತ್ರಕರ್ತರಿಗೆ ಮಾತ್ರ ಸತ್ಯವನ್ನು ಹೇಳಬೇಕಾಗಿರೋದಾ? ಉಳಿದವರೆಲ್ಲಾ ಸತ್ತು ಹೋಗಿದ್ದಾರ? ಎಂದು ಚಿಂತನ್ ತಮ್ಮ ನೈತಿಕತೆಯನ್ನು ಮಾರಿಕೊಂಡು ಪತ್ರಿಕೋದ್ಯಮದಲ್ಲಿರುವವರನ್ನು ಪ್ರಶ್ನಿಸುತ್ತಾ, ಈ ದೇಶದ ಭವಿಷ್ಯಕ್ಕಾಗಿ ಸತ್ಯವನ್ನು ಹೇಳೋಣ ಎಂದು ಹೇಳಿದ್ದಾರೆ.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group