ಸಾಮಾಜಿಕ ತಾಣ

‘ಸೂಲಿಬೆಲೆ ಚಿಂತಕ ಎಂದು ಬೆಟ್ಟಿಂಗ್ ಹಾಕಿದ್ದೇನೆ, ದಯವಿಟ್ಟು ಅದನ್ನು ಉಳಿಸಿಕೊಳ್ಳಿ’; ಸೂಲಿಬೆಲೆಗೆ ಯುವಕನೊಬ್ಬನ ಬಹಿರಂಗ ಮನವಿ

ವರದಿಗಾರ (ಅ.03): ‘ನಮಸ್ತೆ ಚಕ್ರವರ್ತಿ ಸೂಲಿಬೆಲೆ, ಕ್ಷಮಸಿ ದೇಶದ್ರೋಹಿ  ಸೂಲಿಬೆಲೆಗೆ. ಆದರೆ  ದೇಶದ್ರೋಹಿ ಇದು ನಾನು ಕೊಟ್ಟಿರುವುದಲ್ಲ, ಇವರ ಭಕ್ತರೇ ಕೊಟ್ಟಿರುವ ಕಾಣಿಕೆ’ ಎಂದು ಮಾತು ಪ್ರಾರಂಭಿಸುವ ಸಾಮಾಜಿಕ ಕಾರ್ಯಕರ್ತ, ಚಿಂತಕ ದೀಪು ಗೌಡ ಚಕ್ರವರ್ತಿ ಸೂಲಿಬೆಲೆಗೆ ಕೆಲವೊಂದು ಬಹಿರಂಗ ಸವಾಲುಗಳನ್ನು ಹಾಕಿದ್ದಾರೆ. ಈ ಸವಾಲುಗಳ ವೀಡಿಯೋ ಸಾಮಾಜಿಕ ಜಾಲತಾಣಗಳಾದ್ಯಂತ ವೈರಲ್ ಪಡೆಯುತ್ತಿದೆ.

ಚಿಂತಕ ದೀಪು ಗೌಡ ವೀಡಿಯೋ ವೀಕ್ಷಿಸಿ:

ಕರ್ನಾಟಕದ ಭೀಕರ ಪ್ರವಾಹ ಪರಿಹಾರಕ್ಕೆ ಸಂಬಂಧಿಸಿದಂತೆ ಚಕ್ರವರ್ತಿ ಸೂಲಿಬೆಲೆ ಕರ್ನಾಟಕದಿಂದ ಚುನಾಯಿತರಾದ ಸಂಸದರನ್ನು ಪ್ರಶ್ನಿಸಿರುವ ಏಕೈಕ ಕಾರಣದಿಂದ ತಿರುಗಿ ನಿಂತ ಇವರ ಹಿಂಬಾಲಕರಿಂದ ‘ದೇಶದ್ರೋಹಿ’ ಎಂಬ ಇದೀಗ ಅತ್ಯಂತ ಸುಲಭದಲ್ಲಿ ಮಾರುಕಟ್ಟೆಯಲ್ಲಿ ದೊರೆಯುವ ಪಟ್ಟವನ್ನು ನೀಡಿರುವುದು, ಮತ್ತು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಸೂಲಿಬೆಲೆಯನ್ನು ಟ್ವಿಟ್ಟರ್ ಖಾತೆಯಲ್ಲಿ ಬ್ಲಾಕ್ ಮಾಡಿರುವುದನ್ನು ಸ್ವತಃ ಸೂಲಿಬೆಲೆ ಹಂಚಿಕೊಂಡಿರುವ ವಿಷಯವು ಪ್ರಸ್ತುತ ಚರ್ಚೆಯಲ್ಲಿದೆ. ಇದರ ಭಾಗವಾಗಿ ಇದುವರೆಗೆ ಬಿಜೆಪಿಯನ್ನು, ಪ್ರಧಾನಿ ಮೋದಿಯನ್ನು, ಹಲವು ಹೆಸರಿನಲ್ಲಿ ಸಂಸ್ಥೆಗಳನ್ನು ಹುಟ್ಟುಹಾಕಿ ಅದರಿಂದ ಇವರನ್ನೆಲ್ಲಾ ಹೊಗಲಿ ಅಟ್ಟಕ್ಕೇರಿಸಿದ್ದ ಸೂಲಿಬೆಲೆಯು ಇಂದು ಕೇವಲ ಒಂದೇ ಪ್ರಶ್ನೆ ಕೇಳಿರುವುದಕ್ಕೆ ‘ದೇಶದ್ರೋಹಿ’ ಎಂಬ ಪಟ್ಟಗಳೊಂದಿಗೆ ಟ್ರೋಲ್ ಗೆ ಗುರಿಯಾಗಿದ್ದಾರೆ. ಅದರಂತೆ ದೀಪು ಗೌಡ ಸೂಲಿಬೆಯನ್ನು ತನ್ನ ಎಂದಿನ ಮಾತುಗಳಲ್ಲಿ ಪ್ರಶ್ನಿಸಿ, ಸವಾಲನ್ನೆಸೆದಿದ್ದಾರೆ.

‘ಇದೀಗ ತಮಗೆ ಜ್ಞಾನೋದಯವಾಗಿದೆ ಎಂದು ಅಂದುಕೊಳ್ಳುತ್ತೇನೆ. ತಮ್ಮ ಜ್ಞಾನೋದಯವನ್ನು ಸ್ವಾಗತಿಸುತ್ತೇನೆ ಎಂದಿರುವ ದೀಪು, ಕಳೆದ ಕೆಲವು ವರ್ಷಗಳಿಂದ ಬೇಕಾಬಿಟ್ಟಿ ಹಣವನ್ನು ಖರ್ಚು ಮಾಡಿ, ಸುಮಾರು ಜನರನ್ನು ಸೇರಿಸಿ ಸಮಾವೇಶವನ್ನು ಹಮ್ಮಿಕೊಂಡು ಮೋದಿ ಬಾಲ್ಯದ, ಟೀ ಮಾರಿದ, ಮೊಸಲೆ ಸಾಕಿದ ಕಥೆ ಹಾಗೂ ದೇಶದ ಸೈನಿಕರನ್ನು ಮುಂದಿಟ್ಟು ತಮ್ಮ ಪ್ರಚಾರಕ್ಕೆ ಉಪಯೋಗಿಸಿ, ಮೋದಿಗೆ ಮತ ಹಾಕಿ ಎಂದು ಅಮಾಯಕ ಶೂದ್ರ, ದಲಿತ ಯುವಕರ ಮೇಲೆ ಹಿಂದುತ್ವದ ಹುಚ್ಚು ಹಿಡಿಸಿ ಇಡೀ ಕರ್ನಾಟಕದಲ್ಲಿ ಸಂಚಲನ ಮಾಡಿ ಉಪಯೋಗಕ್ಕಿಲ್ಲದ 25 ಸಂಸದರಿಗೆ ಮತಗಳನ್ನು ಹಾಕಿಸಿದ್ದೀರಾ. ಜನತೆ ಈ ಸಂಸದರ ಮುಖ ನೋಡಿ ಮತ ಹಾಕಿಲ್ಲ, ಮೋದಿ ನೋಡಿ ಹಾಕಿದ್ರು. ಇವತು ಆ ಮೋದಿ ನೆರೆ ಸಂತ್ರಸ್ತರಿಗೆ ಯಾವ ರೀತಿಯಲ್ಲೂ ಸಹಾಯ ಮಾಡಿಲ್ಲ. ಇವಾಗ ತಮಗೆ ಪುಷ್ಪಾವತಿ ನದಿಯಲ್ಲಿ ಮುಳುಗಿ ಎದ್ದ ಮೇಲೆ ಜ್ಞಾನೋದಯವಾಯಿತು’ ಎಂದು ದೀಪು ಗೌಡ ಸೂಲಿಬೆಲೆಗೆ ತಮ್ಮ ಹಿಂದಿನದ್ದನ್ನು ನೆನಪಿಸಿದ್ದಾರೆ.

‘ಚಿಂತಕ ಸೂಲಿಬೆಲೆ ಎಂದು ಕೆಲವೊಂದು ಮಾಧ್ಯಮಗಳಲ್ಲಿ ಬಿತ್ತರಿಸಲಾಗುತ್ತಿದೆ. ಆದರೆ ತಾವು ಯಾವ ರೀತಿಯ ಚಿಂತಕ? ಎಂದು ನನಗಿದುವರೆಗೂ ಅರ್ಥವಾಗಿಲ್ಲ. ಚಿನ್ನದ ರಸ್ತೆ ಬರುತ್ತೆ ಎಂದ ಭಾಷಣಗಾರ ತಾವು. ಇವತ್ತು ನೀವೇ ಗೆಲ್ಲಿಸಿಕೊಟ್ಟ ಬಿಜೆಪಿ ಸಂಸದರು ತಮ್ಮನ್ನು ದೇಶದ್ರೋಹಿ ಎಂದು ಕರೆದಾಯಿತು. ನಿಮ್ಮಂತೆ ಬಜರಂಗದಳ ಕಟ್ಟಿದಂತಹ ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲ ಇಂದು ಸೌಹಾರ್ದತೆಯ ಬಗ್ಗೆ ಮಾತನಾಡುತ್ತಿದ್ದಾರೆ. ತಾವು ಬದಲಾದರೆ ತುಂಬಾ ಒಳ್ಳೆಯದು. ಆದರೆ ಅಷ್ಟೊಂದು ತಳಮಟ್ಟದಲ್ಲಿ ಕೆಲಸ ಮಾಡಿದ ಸೂಲಿಬೆಲೆ ಇವತ್ತು ನೀವು ಏಕಾಏಕಿ ತಿರುಗಿ ಬಿದ್ದಿದ್ದೀರಾ ಎಂದರೆ, ನನ್ನ ಸ್ನೇಹಿತರು ಹೇಳ್ತಿದ್ದರು ಅವರಿಗೆ ಪೇಮೆಂಟ್ ಬಂದಿರ್ಲಿಕ್ಕಿಲ್ಲ ಅದಕ್ಕಾಗಿ ತಡವಾಗಿ ಎಚ್ಚರಿಕೆಯ ಟ್ವೀಟ್ ಮಾಡುತ್ತಿದ್ದಾರೆ ಎಂದು. ಪೇಮೆಂಟ್ ಬಂದ ತಕ್ಷಣ ಜೈ ಮೋದಿ ಎಂದು ಹೇಳುತ್ತಾರೆ ನೋಡಿ  ಎಂದು. ಆದರೆ ಸ್ನೇಹಿತನ ಮಾತುಗಳನ್ನೆಲ್ಲ ನಾನು ತಿರಸ್ಕರಿಸಿ, ಕಾದು ನೋಡುವ ಎಂದು ಹೇಳಿದ್ದೇನೆ. ದಯವಿಟ್ಟು ಅದನ್ನಾದರು ಉಳಿಸಿಕೊಳ್ಳಿ. ದಯವಿಟ್ಟು ಸ್ನೇಹಿತನ ಜೊತೆ ನನಗೆ ಗೆಲುವಾಗುವಂತೆ ನೋಡ್ಕೊಳ್ಳಿ. ಯಾಕೆಂದರೆ ನೀವು ಚಿಂತಕ ಎಂದು ಬೆಟ್ಟಿಂಗ್ ಹಾಕಿದ್ದೇನೆ’ ಎಂದು ವ್ಯಂಗ್ಯವಾಗಿ ಸೂಲಿಬೆಲೆಗೆ ಮನವಿ ಮಾಡುವ ಮೂಲಕ ಜಾಡಿಸಿದ್ದಾರೆ.

‘ಬಿಜೆಪಿಗರು ಎಷ್ಟು ನಾಟಕವಾಡುತ್ತಿದ್ದಾರೆ ಎಂದರೆ, ದೇಶದ ಆರ್ಥಿಕತೆಯ ಬಗ್ಗೆ ಪ್ರಶ್ನೆ ಮಾಡಿದರೆ 370 ಎಕ್ಟ್ ತೋರಿಸುತ್ತಾರೆ. ನೆರೆ ಸಂತ್ರಸ್ತರ ಬಗ್ಗೆ ಮಾತನಾಡಿದರೆ ಬೆಂಗಳೂರು ಹೈಅಲರ್ಟ್ ಎಂದು ಹೇಳುತ್ತಾರೆ. ಬಡ ಜನತೆಯ ಕಷ್ಟ, ಆರ್ಥಿಕತೆಯಿಂದ ಎಲ್ಲ ಮುಳುಗಿ ಹೋಗುತ್ತಿದೆ ಎಂದರೆ ಪಾಕಿಸ್ತಾನವನ್ನು ತೋರಿಸುತ್ತಾರೆ. ನನಗನಿಸುತ್ತೆ ಎನೋ ದೊಡ್ಡ ಪ್ಲಾನ್ ನ್ನು ಮರೆಮಾಚಲು ಅಥವಾ ಬೈ ಎಲೆಕ್ಷನ್ ನಲ್ಲಿ ಎನೋ ಸ್ಟಾಟರ್ಜಿ ಮಾಡುವುದಕ್ಕೆ ಈ ತರಹ ಮಾಡುತ್ತಿದ್ದಾರೆ ಎಂದು ನನಗನಿಸುತ್ತಿದೆ. ಯಾಕೆಂದರೆ ಎಲ್ಲದಕ್ಕೂ ಹುಚ್ಚು ಹುಚ್ಚಾಗಿ ಮೋದಿಯನ್ನು ಎಳೆದು ತಂದವರು ನೀವು ಏಕಾಏಕಿ ತಿರುಗಿ ಮಾತನಾಡುತ್ತಿದ್ದೀರಿ ಎಂದರೆ ನನಗ್ಯಾಕೊ ಅನುಮಾನ’.

ನದಿಯೊಂದರ ಬಗ್ಗೆ ಮಾತನಾಡುತ್ತಾ ಸೂಲಿಬೆಲೆಯ ಗಮನಕ್ಕೆ ತಂದ ದೀಪು ಗೌಡ, ಚುನಾವಣೆ ಮುಗಿದು ಹೋಯ್ತಲ್ವಾ, ಹಣ ಬರ್ತಿಲ್ಲ. ಪಾಪ ಹೊಸದಾಗಿ ಏನಾದ್ರು ಮಾಡಬೇಕು. ನಿನ್ನಂತವರನ್ನು ನಂಬಿಕೊಂಡು ಕೆಲವೊಂದು ಸೆಲೆಬ್ರೆಟಿ, ಸಾಹಿತಿಗಳು ಮತ್ತು ಬಿಜೆಪಿ ಭಕ್ತರು. ಅವರೆಲ್ಲರೊಂದಿಗೆ ತಮ್ಮನ್ನು ಪ್ರೊಮೋಟ್ ಮಾಡಿಕೊಂಡು, ರಸ್ತೆಗಿಳಿದು, 100 ರೂ. ಟೀಶರ್ಟ್ ಮಾರಿಕೊಂಡು, ನೀನು ಮ್ಯಾರಥಾನ್ ಮಾಡಿಕೊಂಡು ಕೆಂಗೇರಿ ಮೋರಿ ಪಕ್ಕದಲ್ಲಿ ಓಡಿದ ತಕ್ಷಣ ಕೆಂಗೇರಿ ಮೋರಿ ಕ್ಲೀನ್ ಆಗುವುದಿಲ್ಲ. ಅದಕ್ಕೆ ಒಂದಷ್ಟು ಜನರನ್ನು ಇಳಿಸಿಕೊಳ್ಳಬೇಕಿತ್ತು. ಈ ನಿಮ್ಮ ಮುಟ್ಟಳತಣದ ಐಡಿಯಾಗೆ, ನಿಮ್ಮ ಪ್ರಚಾರದ ಗಿಮಿಕ್ ಗೆ ಬಲಿಯಾಗುವ ಅಮಾಯಕ ಜನರನ್ನು ನೆನೆಸುವಾಗ ನನಗೆ ಅಯ್ಯೋ ಪಾಪ ಎಂದು ಅನಿಸುತ್ತೆ. ನಿನಗೆ ಇನ್ನೂ ಆಗಬೇಕು. ನಿನ್ನಂತ ಸುಳ್ಳು ಬಾಷಣಗಾರನಿಗೆ ಜನ ಖಂಡಿತ ಬುದ್ದಿ ಕಳುಹಿಸುತ್ತಾರೆ ಮತ್ತು ಕಾಲವೇ ಉತ್ತರ ಕೊಡುತ್ತೆ’ ಎಂದು ಭವಿಷ್ಯ ನುಡಿದಿದ್ದಾರೆ.

‘ನಿಮ್ಮಲ್ಲಿ ಒಳ್ಳೆಯ ಶಕ್ತಿಯಿದೆ. ಅಷ್ಟೇ ದೇಶದ ಜನತೆ ಮುಗ್ದರಿದ್ದಾರೆ. ಇವತ್ತು ಯಾರು ಬಿಜೆಪಿಯವರು ನಿನ್ನನ್ನು ದೇಶದ್ರೋಹಿ ಎಂದು ಹೇಳಿದ್ದಾರೆ. ಅವರದು ತಪ್ಪಲ್ಲ. ಸಾಮಾನ್ಯ ಜನರಿಗೂ ನೀವು ದೇಶದ್ರೋಹಿನೇ. ಇವತ್ತು ಉ.ಕ. ನೆರೆ ಸಂತ್ರಸ್ತರು ಕಣ್ಣೀರು ಹಾಕುತ್ತಿದ್ದಾರೆ ಎಂದರೆ, ಅವರೆಲ್ಲರ ಕಣ್ಣೀರಿನ ಹಿಂದಿನ ಪಾಪದ ಕೊಡ ತುಂಬುತ್ತೆ. ನೀವು ಇದನ್ನು ಅನುಭವಿಸುತ್ತೀರಿ ಸೂಲಿಬೆಲೆಯವರೆ. ಯಾಕೆಂದರೆ ನೀವು ಸುಳ್ಳು ಹೇಳಿಕೊಂಡು, ಜನರ ಮನಸ್ಸನ್ನು ಬೇರೆಡೆಗೆ ದಿಕ್ಕು ತಪ್ಪಿಸಿದಕ್ಕೆ ನೀವು ಅನುಭವಿಸಲೇಬೇಕು. ನೀವು ಮಾತನಾಡುತ್ತಿರುವುದೆಲ್ಲ ನಾಟಕ ಅನ್ನುವುದು ಖಂಡಿತಾ ಗೊತ್ತು. ಆಕಸ್ಮಾತ್ ದೇವರು ಒಳ್ಳೆ ಬುದ್ದಿ ಕೊಟ್ಟು ಮಾತನಾಡಿದ್ದರೆ ನಾನು ತುಂಬಾನೇ ಖುಷಿ ಪಡುತ್ತೇನೆ. ಆದರೆ ಕಾಲ ಮೀರಿ ಹೋಗಿದೆ. ಇನ್ನು ನಾಲ್ಕು ವರ್ಷ ಜನ ಅನುಭವಿಸಲೇಬೇಕು. ನಿನ್ನಂತಹ ಮೂರ್ಖ ಭಾಷಣಗಾರರಿಂದ ಜನರ ತಲೆ ಕೆಡಿಸಿ ಏನ್ಮಾದ್ದೀಯ ಎನ್ನುವುದು ನಿನಗೇ ಗೊತ್ತು. ಒಳ್ಳೆಯದಾಗಲಿ. ಇನ್ನಾದರೂ ದೇಶಕ್ಕೆ ಒಳ್ಳೆಯದು ಮಾಡು. ಸತ್ಯವನ್ನು ಮಾತನಾಡಿದರೆ ನಾವು ಕೂಡಾ ನಿಮ್ಮೊಂದಿಗೆ ಸೇರಿಕೊಳ್ಳುತ್ತೇವೆ’ ಎಂದು ದೀಪು ಗೌಡ ನೈತಿಕ ಬೆಂಬಲವನ್ನೂ ಘೋಷಿಸಿಕೊಂಡಿದ್ದಾರೆ.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group