ರಾಷ್ಟ್ರೀಯ ಸುದ್ದಿ

ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಹುತಾತ್ಮರಾದ ಎಂಟು ಭಾರತೀಯ ಯೋಧರು

ಪುಲ್ವಾಮಾ:ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದು, 4 ಸಿ ಆರ್ ಪಿ ಎಫ್ ಸಿಬ್ಬಂದಿ ಸೇರಿದಂತೆ 8 ಭದ್ರತಾ ಪಡೆಯ ಜವಾನರನ್ನು ಹತ್ಯೆ ಮಾಡಿದ್ದಾರೆ.

ಸತತ 12 ಘಂಟೆಗಳಷ್ಟು ಕಾಲ ನಡೆದ ದಾಳಿ ಪ್ರತಿದಾಳಿಗೆ ಇಬ್ಬರು ಉಗ್ರರನ್ನು ಹಿಮ್ಮೆಟ್ಟಿಸಲಾಗಿದ್ದು, ಉಳಿದಿಬ್ಬರು ಇನ್ನೂ ಪಟ್ಟಣದಲ್ಲೇ ಸಿಕ್ಕಿ ಹಾಕಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಪಾಕ್ ಮೂಲದ ಜೈಶ್-ಎ-ಮುಹಮ್ಮದ್ ಇದರ ಹೊಣೆಯನ್ನು ಹೊತ್ತು ಕೊಂಡಿದೆಯೆನ್ನಲಾಗಿದೆ.

ಮುಂಜಾನೆ ಉನ್ನತ ಮಟ್ಟದ ಭದ್ರತೆಯನ್ನು ಹೊಂದಿರುವ ಪೊಲೀಸ್ ವಸತಿ ಸಮುಚ್ಚಯವನ್ನು ಪ್ರವೇಶಿಸಿದ ಉಗ್ರರು, ಭದ್ರತಾ ಪಡೆಗಳಿಂದ ತೀವ್ರ ಮಟ್ಟದ ಪ್ರತಿರೋಧ ಕಂಡಾಗ ಹಲವು ಮನೆಗಳಿಂದಾವೃತವಾಗಿರುವ ಪ್ರದೇಶವನ್ನೇ ಗುರಾಣಿಯನ್ನಾಗಿಸಿ ಇಡೀ ದಿನ ದಾಳಿ ನಡೆಸುತ್ತಿದ್ದರು. ಈ ಪ್ರದೇಶ ಶ್ರೀನಗರದಿಂದ ಕೇವಲ 25 ಕಿ. ಮೀ ದೂರದಲ್ಲಿದೆ.

ಉಗ್ರರು ಅವಿತುಕೊಂಡಿದ್ದ ಸಮುಚ್ಚಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ಮತ್ತು ಕುಟುಂಬಿಕರು ಸ್ವಲ್ಪದರಲ್ಲೇ ಉಗ್ರರ ದಾಳಿಯಿಂದ ಪಾರಾಗಿದ್ದು, ನಂತರ ಎಲ್ಲರನ್ನೂ ಅಲ್ಲಿಂದ ತೆರವುಗೊಳಿಸಲು ಹರಸಾಹಸ ಪಡಬೇಕಾಯಿತು. ಕಾಶ್ಮೀರದ ಐ ಜಿ ಪಿ ಮುನೀರ್ ಖಾನ್ ಅಭಿಪ್ರಾಯಿಸುವಂತೆ, ಫಿದಾಯೀನ್’ಗಳ ಗುಂಪೊಂದು ಮುಂಜಾನೆಯ ಕತ್ತಲ ಲಾಭ ಪಡೆದು ಪೊಲೀಸ್ ವಸತಿ ಸಮುಚ್ಚಯದ ಸೆಂಟ್ರಿಯ ಮೇಲೆ ದಾಳಿ ಮಾಡಿ, ನಂತರ ಅವ್ಯಾಹತವಾಗಿ ಗುಂಡಿನ ಮಳೆಗರೆಯುತ್ತಾ ಸಮುಚ್ಚಯದೊಳಗೆ ನುಗ್ಗಿ ಭದ್ರತಾಪಡೆಗಳ ಮೇಲೆ ದಾಳಿ ಮಾಡಿದ್ದರು.

ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮುಖ್ಯಸ್ಥ ಎಸ್ ಪಿ ವೇದ್ ಪ್ರಕಾರ, ಸಮುಚ್ಚಯದಲ್ಲಿದ್ದ ಕುಟುಂಬಗಳನ್ನು ರಕ್ಷಿಸುವಾಗ ಹೆಚ್ಚಿನ ಸಾವು ನೋವುಗಳು ಸಂಭವಿಸಿವೆ. ಆದರೆ ಯಾರನ್ನೂ ಒತ್ತೆಯಾಳಾಗಿಟ್ಟಿಲ್ಲವೆಂದು ಅವರು ಇದೇ ವೇಳೆ ತಿಳಿಸಿದ್ದಾರೆ.

ಹತರಾದವರಲ್ಲಿ ನಾಲ್ವರು ಸಿ ಆರ್ ಪಿ ಎಫ್ ಸಿಬ್ಬಂದಿಗಳಾದರೆ, ಓರ್ವ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಪೇದೆ ಮತ್ತು ಉಳಿದ ಮೂವರು ರಾಜ್ಯ ಪೊಲೀಸರೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದ ವಿಶೇಷ ಪಡೆಯ ಸಿಬ್ಬಂದಿಗಳಾಗಿದ್ದಾರೆ. ಇಬ್ಬರು ಸಿ ಆರ್ ಪಿ ಎಫ್ ಸಿಬ್ಬಂದಿಗಳು ಉಗ್ರರು ಇಟ್ಟಿದ್ದ ಸುಧಾರಿತ ಸ್ಪೋಟಕವನ್ನು ನಿಷ್ಕ್ರಿಯಗೊಳಿಸುತ್ತಿದ್ದಾಗ ಅದು ಸ್ಪೋಟಗೊಂಡು ಸಾವನ್ನಪ್ಪಿದರೆಂದು ತಿಳಿದು ಬಂದಿದೆ.

ಇಬ್ಬರು ಉಗ್ರರನ್ನು ಧರೆಗುರುಳಿಸಲಾಗಿದ್ದರೂ, ಕನಿಷ್ಟ ಇಬ್ಬರು ಇನ್ನೂ ಸಮುಚ್ಚಯದೊಳಗೆ ಅವಿತುಕೊಂಡಿದ್ದಾರೆಂದು ಶಂಕಿಸಲಾಗಿದೆ. ಗನ್ ದಾಳಿಯ ವೇಳೆ ಕಟ್ಟಡವೊಂದು ಬಾಗಶಃ ಹಾನಿಗೊಳಗಾಗಿದ್ದು, ಇನ್ನೂ ಹೊಗೆಯಾವೃತವಾಗಿದೆ. ಈ ದಾಳಿಯು ಕಳೆದ ವರ್ಷದ ಉರಿ ದಾಳಿಯ ನಂತರದ ಅತಿ ದೊಡ್ಡ ದಾಳಿಯೆಂದೇ ಪರಿಗಣಿಸಲಾಗಿದೆ. ಉರಿ ದಾಳಿಯಲ್ಲಿ 19 ಸೇನಾ ಜವಾನರು ಉಗ್ರರ ದಾಳಿಗೆ ಬಲಿಯಾಗಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group