ರಾಜ್ಯ ಸುದ್ದಿ

“ದೇಶದ್ರೋಹ” ಬಿಜೆಪಿಯ ಉದಾರ ಕೊಡುಗೆ: ಎಸ್‍ಡಿಪಿಐ

‘ಸಂಜೀವ ಮಠಂದೂರು ಮತ್ತು ಸಂಸದ ಅನಂತ ಕುಮಾರ್ ಹೆಗಡೆ ಮುಂತಾದ ಬಿಜೆಪಿ ನಾಯಕರು ಮನೋ ವಿಕೃತಿಯಿಂದ ಬಳಲುತ್ತಿದ್ದಾರೆ’

ಬೆಂಗಳೂರು, 10 ಸಪ್ಟೆಂಬರ್ 2019: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ನಿಷ್ಠಾವಂತ, ದಕ್ಷ ಹಾಗೂ ಮಾನವೀಯ ಕಳಕಳಿಯ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್‍ರ ಬಗ್ಗೆ ಕೀಳು ಮಟ್ಟದ ಮಾತುಗಳನ್ನು ಆಡಿದ ಬಿಜೆಪಿ ಶಾಸಕ ಸಂಜೀವ ಮಠಂದೂರು ಮತ್ತು ಸಂಸದ ಅನಂತ ಕುಮಾರ್ ಹೆಗಡೆ ಮುಂತಾದ ಬಿಜೆಪಿ ನಾಯಕರು ಮನೋ ವಿಕೃತಿಯಿಂದ ಬಳಲುತ್ತಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್‍ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.

ದೇಶದಲ್ಲಿ ನಡೆಯುತ್ತಿರುವ ಅವ್ಯಾಹತ ಹಿಂಸೆ, ಮಾನವ ಹ್ಕುಗಳ ಉಲ್ಲಂಘನೆ, ಸರಕಾರವನ್ನು ಟೀಕಿಸುವವರ ಮೇಲೆ ದೌರ್ಜನ್ಯ, ಸಂವಿಧಾನದ ಕಡೆಗಣನೆ, ಸರಕಾರಿ ಸ್ವಾಯತ್ತ ಸಂಸ್ಥೆಗಳ ಮೇಲೆ ದಬ್ಬಾಳಿಕೆ, ನೆಲಕಚ್ಚಿದ ಆರ್ಥಿಕತೆ, ವಾಕ್‍ಸ್ವಾತಂತ್ರ್ಯ ಹರಣ, ಅಘೋಷಿತ ತುರ್ತು ಪರಿಸ್ಥಿತಿಗಳನ್ನೆಲ್ಲಾ ಪ್ರತ್ಯಕ್ಷ ಕಂಡು ರೋಸಿ ಹೋದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ತನ್ನ ಹುದ್ದೆಯನ್ನು ತ್ಯಜಿಸಿ ಪ್ರತಿಭಟನಾತ್ಮಕ ರಾಜೀನಾಮೆ ನೀಡಿದ್ದಾರೆ. ದೇಶದ ಪ್ರಜಾಪ್ರಭುತ್ವ ಅತ್ಯಂತ ಗಂಭೀರ ಅಪಾಯದಲ್ಲಿದೆ ಎಂಬುವುದಕ್ಕೆ ಸೆಂಥಿಲ್‍ರವರ ಸಾಲಿನಲ್ಲಿ ರಾಜೀನಾಮೆ ನೀಡಿದ ಇನ್ನೊಬ್ಬ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್, ಇನ್ನಿತರರೂ ಸೇರಿದ್ದಾರೆ.

ಫ್ಯಾಸಿಸ್ಟ್ ಮತ್ತು ಮನುವಾದ ಸಿದ್ಧಾಂತದ ಹಾದಿಯಲ್ಲಿ ದೇಶವನ್ನು ಬಿಭಜಿಸುತ್ತಾ ಉಗ್ರವಾದ ರಾಷ್ಟ್ರೀಯವಾದವೆಂಬ ವಿಕಲ್ಪವನ್ನು ಬಿತ್ತುತ್ತಿರುವ ಬಿಜೆಪಿ ಮತ್ತು ಸಂಘಪರಿವಾರಿಗಳಿಗೆ ಸೆಂಥಿಲ್‍ರ ನಡೆ ಖಂಡಿತ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕರಾವಳಿಯ ಶಾಸಕರನ್ನೊಳಗೊಂಡಂತೆ ಮೋದಿ ಮತ್ತು ಶಾ ಭಕ್ತರು “ದೇಶದ್ರೋಹಿ” ಪಟ್ಟವನ್ನು ಬೇಕಾಬಿಟ್ಟಿ ಹಂಚುತ್ತಾ ತಾವೇ “ದೇಶಭಕ್ತ”ರೆಂದು ಹಪಹಪಿಸುತ್ತಿರುವುದು ಎಷ್ಟೊಂದು ಅಧಪತನಗೊಂಡಿದ್ದಾರೆ ಎನ್ನುವುದನ್ನು ಬಿಂಬಿಸುತ್ತದೆ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group