ರಾಜ್ಯ ಸುದ್ದಿ

ನಾಳೆ ಬೆಂಗಳೂರಿನಲ್ಲಿ ಗೌರಿ ‘ನೆನಪು’, ಎಕೆ ಸುಬ್ಬಯ್ಯರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಕನ್ನಯ್ಯಾ ಕುಮಾರ್, ಕವಿತಾ ಲಂಕೇಶ್

ವರದಿಗಾರ (ಸೆ.04): ಸಾಮಾಜಿಕ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ, ಖ್ಯಾತ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ರವರ ವೈಚಾರಿಕವನ್ನು ವೈಚಾರಿಕತೆಯಲ್ಲಿ ಎದುರಿಸಲಾಗದ ಹೇಡಿಗಳ ಗುಂಡೇಟಿಗೆ ಬಲಿಯಾಗಿ ಸೆಪ್ಟೆಂಬರ್ 05ಕ್ಕೆ 2 ವರ್ಷವಾಗುತ್ತಿದ್ದು ಈ ಸಂದರ್ಭ ಅವರನ್ನು ನೆನಪಿಸುವ ಮತ್ತು ಅವರ ಕನಸುಗಳನ್ನು ಬಿತ್ತುವ ‘ನೆನಪು’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಾಗೂ ಇತ್ತೀಚೆಗೆ ನಮ್ಮನ್ನಗಲಿದ ಸಾಮಾಜಿಕ ಹೋರಾಟಗಾರ, ಹಿರಿಯ ಸಮಾಜವಾದಿ ‌ಚಿಂತಕರು, ಮಾನವ ಹಕ್ಕುಗಳ ಮುಂಚೂಣಿ ಹೋರಾಟಗಾರ ಹಾಗೂ ರಾಜಕೀಯ ಮುತ್ಸದ್ದಿ ಎ ಕೆ ಸುಬ್ಬಯ್ಯ ರವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವನ್ನು 2019ರ ಸೆಪ್ಟೆಂಬರ್ 05ರಂದು (ನಾಳೆ) ಸಂಜೆ 4:00ಕ್ಕೆ ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿಯಲ್ಲಿರುವ ಸೈಂಟ್ ಜೋಸೆಫ್ ಕಾಲೇಜು ಇದರ ಕ್ಸೇವಿಯರ್ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಯುವ ಮನಸ್ಸುಗಳ ನೆಚ್ಚಿನ ನಾಯಕ, ಅದ್ಭುತ ಮಾತುಗಾರ, ಜೆಎನ್ ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ನಯ್ಯಾ ಕುಮಾರ್ ಭಾಗವಹಿಸಲಿದ್ದಾರೆ,

ಕಾರ್ಯಕ್ರಮದಲ್ಲಿ ‘ಗೌರಿ ಲಂಕೇಶ್ ರ ಸಂಪಾದಕೀಯ ಬರಹಗಳ ಸಂಗ್ರಹ; ಕಂಡಹಾಗೆ-4’ ಹಾಗೂ ‘ಹೆಚ್,ಎಸ್.ದೊರೆಸ್ವಾಮಿ ಯವರ ನೂರರ ನೋಟ’ ಎಂಬ ಎರಡು ಪುಸ್ತಕಗಳು ಲೋಕಾರ್ಪಣೆಗೊಳ್ಳಲಿದೆ. ಪುಸ್ತಕವನ್ನು ಕವಿತಾ ಲಂಕೇಶ್ ಹಾಗೂ ಕನ್ನಯ್ಯಾ ಕುಮಾರ್ ಬಿಡುಗಡೆಗೊಳಿಸಲಿದ್ದಾರೆ. ಎ.ಕೆ. ಸುಬ್ಬಯ್ಯರವರ ಕುರಿತು ಎ.ಎಸ್. ಪೊನ್ನಣ್ಣ ಹಾಗೂ ಕೆ.ಎಲ್. ಅಶೋಕ್ ಮಾತನಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ವಿವಿಧ ಪ್ರಗತಿಪರ ಚಿಂತಕರು, ಹಿರಿಯ ಪರ್ತಕರ್ತರು, ಸಾಮಾಜಿಕ ಹೋರಾಟಗಾರರು ಹಾಗೂ ಇನ್ನಿತರ ಸಮಾಜಮುಖಿ ಮನಸ್ಸುಗಳು ಭಾಗವಹಿಸಲಿದ್ದು, ತಮ್ಮ ಬದುಕನ್ನು ಸಮಾಜಕ್ಕೆ ಮೀಸಲಿಟ್ಟ ಇಬ್ಬರು ಹಿರಿಯ ಸಂಗಾತಿಗಳನ್ನು ನೆನೆಯೋಣ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tribute to Gauri Lankesh – A brave soul

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group