ವರದಿಗಾರ (22-08-2019): ಉತ್ತರ ಪ್ರದೇಶದ ಮಿರ್ಝಾಪುರ್ ಜಿಲ್ಲೆಯ ಸರಕಾರಿ ಶಾಲೆಯೊಂದರಲ್ಲಿ ಮಕ್ಕಳಿಗೆ ಮಧ್ಯಾಹ್ನದ ಆಹಾರವಾಗಿ ಚಪಾತಿ ಹಾಗೂ ಉಪ್ಪು ನೀಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಮಿರ್ಝಾಪುರ್ ಜಿಲ್ಲೆಯ ಸಿಯೂರ್ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಚಪಾತಿಗೆ ಉಪ್ಪು ಸೇರಿಸಿ ತಿನ್ನುತ್ತಿರುವುದನ್ನು ತೋರಿಸುತ್ತಿರುವ ಮನ ಕಲುಕುವ ವೀಡಿಯೋ ಇದೀಗ ಕೆಲ ಪತ್ರಕರ್ತರ ಪ್ರಯತ್ನದಿಂದಾಗಿ ಬೆಳಕಿಗೆ ಬಂದಿದೆ.
ವೀಡಿಯೋ ವೀಕ್ಷಿಸಿ:
Primary school students in Mirzapur's Siyuer village in UP being served chapattis and salt as a part of their free mid-day meal offered at govt run schools across the state.
Video credit: @Brijendramzp pic.twitter.com/KFOo50eKzd
— Piyush Rai (@Benarasiyaa) August 22, 2019
ಪತ್ರಕರ್ತರ ಪ್ರಕಾರ ಉತ್ತರ ಪ್ರದೇಶದ ಬಹುತೇಕ ಗ್ರಾಮಗಳ ಸರಕಾರಿ ಶಾಲೆಗಳು ಇದೇ ಪರಿಸ್ಥಿತಿಯಲ್ಲಿವೆ.
ಉತ್ತರ ಪ್ರದೇಶ ಹಾಗೂ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನು ಇತರ ರಾಜ್ಯಗಳಿಗೆ ಹಾಗೂ ಅಲ್ಲಿನ ಮುಖ್ಯಮಂತ್ರಿಗಳಿಗೆ ಮಾದರಿಯೆನ್ನುವವರಿಗೆ ಕನ್ನಡಿಯಾಗಿದೆ ಈ ಬಡ ಮಕ್ಕಳ ದಯನೀಯ ವೀಡಿಯೋ.
