
ವರದಿಗಾರ (ಆ.21): ರಾಯಚೂರು ನಗರದ ಶ್ರೀ ಸ್ವಾಮಿ ವೀವೇಕಾನಂದ ವಿದ್ಯಾ ಶಾಲೆಯಲ್ಲಿ ಜಿ.ಕೆ ಗ್ರೂಪ್ಸ್ ವತಿಯಿಂದ ಆರೋಗ್ಯ ಮಾಹಿತಿ ಕಾರ್ಯಾಗಾರ ಹಾಗೂ ಉಚಿತ ರಕ್ತ ಪರೀಕ್ಷೆ ಮತ್ತು ರಕ್ತ ಗುಂಪಿನ ವರ್ಗೀಕರಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ವಿದ್ಯಾರ್ಥಿಗಳಿಗೆ ರಕ್ತದ ಪ್ರಾಮುಖ್ಯತೆ ಮತ್ತು ದೇಹದಲ್ಲಿ ರಕ್ತ ಹೀನತೆಯಿಂದಾಗುವ ಪರಿಣಾಮಗಳು, ಕಡಿಮೆಯಾಗದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳುವ ವಿಧಾನಗಳು ಮತ್ತು ಸಮತೋಲನ ಆಹಾರ ಸೇವನೆ ಆರೋಗ್ಯ ರಕ್ಷಣೆ ಹೇಗೆ ಮಾಡಿಕೊಳ್ಳಬೇಕೆಂದು ಜಿ.ಕೆ. ಗ್ರೂಪ್ ನ ವ್ಯವಸ್ಥಾಪಕರಾದ ಹಾಗೂ ಜಿ.ಕೆ. ಲ್ಯಾಬೋರೆಟರಿಯ ಮಾಲೀಕರಾದ ಎಂ.ಎ.ಅಜೀಜ್ ಮುಜಾಹಿದ್ ರವರು ಉದ್ಘಾಟನಾ ಭಾಷಣದಲ್ಲಿ ಹೇಳಿದರು. ಇದು ನಮ್ಮ ಮೊದಲ ಹೆಜ್ಜೇ ನಮ್ಮ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಾಂತ ಎಲ್ಲಾ ಶಾಲಾ-ಕಾಲೇಜುಗಳ ವಿಧ್ಯಾರ್ಥಿಗಳಿಗೆ ಆರೋಗ್ಯದ ಅರಿವು ಮೂಡಿಸುವ ಪ್ರಯತ್ನದ ನಿಟ್ಟಿನಲ್ಲಿ ಉಚಿತ ಆರೋಗ್ಯ ಮತ್ತು ರಕ್ತ ಗುಂಪಿನ ಶಿಬಿರಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ ಎಂದರು.
ಈ ಶಿಬಿರದಲ್ಲಿ ಒಟ್ಟು 46ವಿಧ್ಯಾರ್ಥಿಗಳು ಮತ್ತು 18ಶಿಕ್ಷಕರ ರಕ್ತ ಪರೀಕ್ಷೆ, ರಕ್ತ ಗುಂಪಿನ ಪರೀಕ್ಷೆಯನ್ನು ಮಾಡಲಾಯಿತು.
ಶಿಬಿರದಲ್ಲಿ ಜಿ.ಕೆ.ಲ್ಯಾಬ್ ನ ಟೆಕ್ನಾಲೋಜಿಸ್ಟ್ ಸೈಯ್ಯದ್ ಶೇರೂ ಹಾಗೂ ಶಾಲಾ ವ್ಯವಸ್ಥಾಪಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು .
