ನಿಮ್ಮ ಬರಹ

ಅಲ್ಪಸಂಖ್ಯಾತರನ್ನು ಜೀವಂತ ಹಿಂಡುವ “ಮಾಧ್ಯಮ ಭಯೋತ್ಪಾದನೆ”ಗೆ ಕೊನೆ ಎಂದು?

-ಉಮರ್ ಅಮ್ಜದಿ ಕುಕ್ಕಿಲ

ವರದಿಗಾರ (ಆ.21): ಆಯಿಷಾ ಎಂಬ ಮಹಿಳೆಯನ್ನು ಭಯೋತ್ಪಾದಕಿಯಾಗಿ ಚಿತ್ರೀಕರಿಸಿದ ಘಟನೆ ಜನರ ಮನಸ್ಸಿನಿಂದ ಮಾಯುವ ಮುನ್ನವೇ ರವೂಫ್ ಎಂಬ ಅಮಾಯಕ ಗುರುಗಳ ಚಾರಿತ್ರ್ಯ ಹರಣ ನಡೆದೇ ಬಿಟ್ಟಿತು. ಕೆಲ ಸಮೂಹ ಮಾಧ್ಯಮಗಳು ಅಲ್ಪಸಂಖ್ಯಾತರನ್ನು ಬಹುಮುಖ್ಯವಾಗಿ ಮುಸ್ಲಿಮರನ್ನು ಭಯೋತ್ಪಾದಕರನ್ನಾಗಿ ಚಿತ್ರೀಕರಿಸುವ ತಮ್ಮ ಎಂದಿನ ಚಾಳಿಗೆ ಪುನಹ ಕೈ ಹಾಕಿದಂತಿದೆ. ದೇಶದೆಲ್ಲೆಡೆ ಮುಸಲ್ಮಾನರು ಆತಂಕದ ಸನ್ನಿವೇಶ ಎದುರಿಸುವಾಗ, ಅಸ್ಸಾಮಿನಲ್ಲಿ ನಾಗರಿಕತೆಯನ್ನು ಸಾಬೀತುಪಡಿಸುವ ಸಲುವಾಗಿ ನಡೆಸಲಾಗುತ್ತಿರುವ ಷಡ್ಯಂತರದ ಬಗ್ಗೆ ಗೊಂದಲಕ್ಕೊಳಗಾಗಿರುವಾಗ, ಜೈ ಶ್ರೀ ರಾಮ್ ಎಂಬುವುದನ್ನು ಬಲಾತ್ಕಾರವಾಗಿ ಹೇಳಿಸಿ, ಕಲ್ಲು ಇಟ್ಟಿಗೆ, ಬಡಿಗೆಗಳಿಂದ ಹೊಡೆದು ಸಾಯಿಸುತ್ತಿರುವಾಗ, ಪೆಟ್ರೋಲ್ ಸುರಿದು ಜೀವಂತ ಸುಡುತ್ತಿರುವಾಗ, ಅತ್ಯಂತ ಯಾತನಾಮಯ ಹಾಗೂ ಅಘಾತಕಾರಿ ಸನ್ನಿವೇಶ ಎದುರಿಸುವ ಈ ವಿಷಮ ಸ್ಥಿತಿಯಲ್ಲಿ, ಮಾಧ್ಯಮಗಳು ಅಮಾಯಕರನ್ನು ಭಯೋತ್ಪಾದಕರಂತೆ ಚಿತ್ರೀಕರಿಸಿ ಸ್ವತಹ ಭಯೋತ್ಪಾದಕರ ರೀತಿ ವರ್ತಿಸುವುದು ಸಮಾಜಕ್ಕೆ ಶೋಭೆಯಲ್ಲ.

ದೇಶದ ಇತಿಹಾಸದಲ್ಲಿ ಮುಸ್ಲಿಮರ ಕರಾಳ ಅಧ್ಯಾಯ ಆರಂಭವಾಗುತ್ತಿದೆ ಎಂದೆನಿಸುತ್ತದೆ. ಮುಸ್ಲಿಮರ ದೇಶಪ್ರೇಮ, ರಾಷ್ಟ್ರಭಕ್ತಿ ಪ್ರಶ್ನಿಸಲ್ಪಡುತ್ತಿದೆ. ಅಪನಂಬಿಕೆಯ ಗೋಡೆ ವಿಸ್ತಾರಗೊಳ್ಳುತ್ತಿದೆ, ಅಸಹಾಯಕರನ್ನು ಮತ್ತಷ್ಟು ಅಸಹಾಕರನ್ನಾಗಿಸುವ ಪ್ರಯತ್ನ ಮುಂದುವರಿಯುತ್ತಿದೆ. ಗುಪ್ತ ಅಜೆಂಡಾಗಳು ಒಂದೊಂದಾಗಿಯೇ ಅನಾವರಣಗೊಳ್ಳುತ್ತಿದೆ. ಮೊದಲು ದೂರದಿಂದ ಭಯೋತ್ಪಾದನೆಯ ಆರೋಪ ಕೇಳಿಬರುತ್ತಿದ್ದರೆ, ಈಗ ನೆರೆಮನೆಯ ಮುಗ್ದನನ್ನೇ ಭಯೋತ್ಪಾದಕನಂತೆ ಚಿತ್ರೀಕರಿಸಲಾಗುತ್ತಿದೆ.

ಆರ್ಥಿಕ ಕುಸಿತ, ಅಭದ್ರತೆ, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿರುವಾಗ ಸಮಾಜದ ನಿಜವಾದ ಸಮಸ್ಯೆಯನ್ನು ಮರೆಮಾಚುವ ಸಲುವಾಗಿ ತಮ್ಮನ್ನು ಮಾರಿಕೊಂಡ ಕೆಲ ಮಾಧ್ಯಮಗಳು ಆಡಳಿತವರ್ಗದ ಅಣತಿಯಂತೆ ಇವೆಲ್ಲವನ್ನು ಮಾಡುತ್ತಿದೆ ಎನ್ನುವ ಅರಿವು ನಮಗೆ ತಿಳಿದಿರಲಿ. ಒಂದು ಕ್ಷಣ ನಿರಾಧಾರ ಆರೋಪಗಳನ್ನು ಅಲ್ಪಸಂಖ್ಯಾತರ ಮೇಲೆ ಹೊರಿಸಿ ಮಾನಸಿಕವಾಗಿ ಜರ್ಜರಿತರನ್ನಾಗಿಸುವ ವಿಫಲ ಯತ್ನ ನಡೆಯುತ್ತಿದೆ. ಸಮುದಾಯವನ್ನು ಕುಗ್ಗಿಸುವ ಷಡ್ಯಂತ್ರದ ವಿರುದ್ಧ ಎಲ್ಲಾ ಸಂಘಟನೆಗಳು ಶಕ್ತಿಮೀರಿ ಹೋರಾಟ ನಡೆಸಬೇಕಾಗಿದೆ. ನಿರ್ದಿಷ್ಟ paid ಮಾಧ್ಯಮಗಳ ವಿರುದ್ಧ ಧ್ವನಿ ಎತ್ತಬೇಕಿದೆ. ಅಪಪ್ರಚಾರ ನಡೆಸುವ ದುಷ್ಟಶಕ್ತಿಗಳ ವಿರುದ್ಧ ಕಾನೂನು ಹೋರಾಟ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಬೇಕಿದೆ. ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸರಕಾರದ ಗಮನ ಸೆಳೆಯುವ ಗಂಭೀರ ಪ್ರಯತ್ನ ನಡೆಯಬೇಕು. ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಲಿಖಿತ ದೂರು ಸಲ್ಲಿಸಿ, ತನಿಖೆಗೆ ಆಗ್ರಹಿಸಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರಾಜ್ಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪ್ರತ್ಯೇಕ ದೂರು ಸಲ್ಲಿಸಬೇಕು. ಸ್ಪಂದನೆ ಸಿಗದೇ ಹೋದಲ್ಲಿ ನ್ಯಾಯಾಲಯದಲ್ಲಿ ಪ್ರತ್ಯೇಕ ದಾವೆ ಹೂಡಬೇಕು.

ಒಟ್ಟಿನಲ್ಲಿ ತಪ್ಪುಮಾಡಿದ ಮಾಧ್ಯಮಗಳು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕಿದೆ. ನಿರಂತರವಾದ ಅಪಪ್ರಚಾರದಿಂದ ಸಮುದಾಯವು ಎಚ್ಚೆತ್ತು, ನಮ್ಮ ವಿರುದ್ಧ ನಡೆಯುವ ಷಡ್ಯಂತರವನ್ನು, ಜಾತ್ಯತೀತ ಮನೋಭಾವದ ಎಲ್ಲ ಜನರು, ಮಾಧ್ಯಮಗಳು,ಇದನ್ನು ಖಂಡಿಸಬೇಕು. ಅಮಾಯಕ ರವೂಫ್ ರಿಗೆ ನ್ಯಾಯ ಸಿಗುವವರೆಗೂ ವಿರಮಿಸದಿರೋಣ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group