ಜಿಲ್ಲಾ ಸುದ್ದಿ

ಮೌಲ್ವಿಗೆ ಉಗ್ರ ಪಟ್ಟ ಕಟ್ಟಲು ಷಡ್ಯಂತ್ರ ರೂಪಿಸಿದ ಮಾಧ್ಯಮಗಳು : ಎಸ್ ಡಿ ಪಿ ಐ ಖಂಡನೆ

ಮಂಗಳೂರು: ಮಂಜನಾಡಿಯ  ಸಂಸ್ಥೆಯೊಂದರಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದ ಬೆಳ್ತಂಗಡಿ ತಾಲೂಕಿನ ಗೋವಿಂದೂರು ಗ್ರಾಮದ ರವೂಫ್ ಎಂಬ ಮೌಲ್ವಿಯೊಬ್ಬರ ಬಗ್ಗೆ ಆದಾರ ರಹಿತವಾಗಿ ಉಗ್ರ ಪಟ್ಟ ಕಟ್ಟಿದ ಕೆಲವು ಮಾದ್ಯಮಗಳ ನೀಚ ವರ್ತನೆಯನ್ನು ಎಸ್ ಡಿ ಪಿ ಐ ದ.ಕ ಜಿಲ್ಲಾ ಸಮಿತಿ ಖಂಡಿಸಿದೆ.

ಬೆಳ್ತಂಗಡಿ ತಾಲೂಕಿನ ಗೋವಿಂದೂರು ಗ್ರಾಮದಿಂದ ಪಾಕಿಸ್ತನಕ್ಕೆ ಸ್ಯಾಟ್ಲೈಟ್ ಮೂಲಕ ಫೋನ್ ಕರೆ ಹೋಗಿದ್ದವು ಎಂಬ ಸುಳ್ಳು ವದಂತಿಯನ್ನು ಹಬ್ಬಿಸಿ ಕೋಮು ಮನಸ್ಥಿತಿಯುಳ್ಳ ಹೆಚ್ಚಿನ ಟಿವಿ ಮತ್ತು ಪತ್ರಿಕಾ ಮಾದ್ಯಮಗಳು ಸತ್ಯಾಸತ್ಯತೆ ಅರಿಯದೆ ತನ್ನ ಟಿಆರ್ ಪಿ ಹೆಚ್ಚಿಸುವ ಆಸೆಯಿಂದ ಒಬ್ಬ ಅಮಾಯಕ ಮೌಲ್ವಿ ಮತ್ತು ಅವರ ಕುಟುಂಬ ಸದಸ್ಯರು ಸಮಾಜದಲ್ಲಿ ತಲೆ ಎತ್ತಿ ನಡೆಯದಂತಹ ಪರಿಸ್ಥಿತಿಯನ್ನು ಉಂಟು ಮಾಡಿರುವ ಘೋರ ಕೃತ್ಯ ನಡೆಸಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.

ಸಮಾಜದ ಸ್ವಾಸ್ಥ್ಯ ವನ್ನು ಉಳಿಸಬೇಕಾದ ಮಹತ್ತರ ಕೆಲಸ ಮಾಧ್ಯಮಗಳ ಮೇಲಿದೆ. ಆದರೆ ಕೆಲವು ಇಂತಹ ಸುಳ್ಳು ಪ್ರಚಾರ ಮಾಡಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿ ಮುಸ್ಲಿಂ ಸಮುದಾಯವನ್ನು ಅಪನಂಬಿಕೆಯಯಲ್ಲಿ ನೋಡುವಂತೆ ಮಾಡಿರುತ್ತದೆ. ಅದಲ್ಲದೆ ಬೆಳ್ತಂಗಡಿ ತಾಲೂಕಿನ ಗೋವಿಂದೂರು ಗ್ರಾಮದ ಜನರು ಕೂಡಾ ರವೂಫ್ ಮತ್ತು ಆತನ ಕುಟುಂಬವನ್ನು ಸಂಶಯಾಸ್ಪದ ದೃಷ್ಟಿಯಲ್ಲಿ ನೋಡುವಂತಹ ಸನ್ನಿವೇಶವನ್ನು  ಕರ್ನಾಟಕದ ಮಾಧ್ಯಮಗಳು ಮಾಡಿರುತ್ತದೆ ಇದು ಘೋರ ಅನ್ಯಾಯವಾಗಿದೆ.

ದ ಕ ಎಸ್ಪಿ ಯವರು ಸ್ಯಾಟ್ಲೈಟ್ ಮೂಲಕ ಪಾಕಿಸ್ತಾನಕ್ಕೆ ಕರೆ ಮಾಡಿದ ಘಟನೆ ಸುಳ್ಳು ಇಂತಹ ಯಾವುದೇ ವಿಚಾರ ನಡೆದಿಲ್ಲ ಎಂದು ಅದೇ ಮಾಧ್ಯಮಗಳಲ್ಲಿ ಸ್ಪಷ್ಟೀಕರಣ ನೀಡಿದರು ಸಹ ಅದರ ನಂತರವು ಕೂಡ ವರ್ಣರಂಜಿತವಾಗಿ ವರದಿ ಪ್ರಕಟ ಮಾಡಿ ಮೌಲ್ವಿ ರವೂಫ್ ನನ್ನು ಉಗ್ರನೆಂದು ಚಿತ್ರೀಕರಿಸಲು ಹರಸಾಹಸ ಪಡುತ್ತಿದ್ದಾರೆ. ಕೆಲವು ಮಾದ್ಯಮಗಳು ಮುಸ್ಲಿಂ  ಸಮುದಾಯವನ್ನು ಗುರಿ ಪಡಿಸಿಕೊಂಡು ಪದೇ ಪದೇ  ಇಂತಹ ಸುಳ್ಳು ವಾರ್ತೆಗಳನ್ನು ಪುನರಾವರ್ತಿಸುತ್ತಿದೆ. ಇದರ ಬಗ್ಗೆ ಪೋಲಿಸ್ ಇಲಾಖೆ ನಿಷ್ಪಕ್ಷವಾಗಿ ತನಿಖೆ ನಡೆಸಿ ಆಧಾರ ರಹಿತ ವರದಿ ಪ್ರಕಟ ಮಾಡಿದ ಮಾದ್ಯಮಗಳ ವಿರುದ್ಧ ಮತ್ತು ಸುಳ್ಳು ವದಂತಿ ಹಬ್ಬಿಸಿದ ಕಿಡಿಗೇಡಿಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕಾಗಿ ಎಸ್‌ ಡಿ ಪಿ ಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಒತ್ತಾಯಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group