ರಾಜ್ಯ ಸುದ್ದಿ

ಅಮಾಯಕನಿಗೆ ಉಗ್ರನ ಪಟ್ಟ ಕಟ್ಟಿದ ಮಾಧ್ಯಮಗಳು; ಸುಳ್ಳಾರೋಪಗೈದ ಮಾಧ್ಯಮಗಳ ಮೇಲೆ ಪೊಲೀಸರು ಸ್ವಯಂ ಪ್ರೇರಿತ ಕೇಸು ದಾಖಲಿಸಿ, ಪರವಾನಿಗೆ ರದ್ದುಗೊಳಿಸಲಿ: ರಿಯಾಝ್ ಫರಂಗಿಪೇಟೆ

ವರದಿಗಾರ (ಆ.20): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಮೂಲಕ ಫೋನ್ ಕರೆಗಳು ಹೋಗಿದ್ದವು ಎಂಬ ಮಾಹಿತಿಯ ಪ್ರಕಾರ ಅಲರ್ಟ್ ಆದ ಪೊಲೀಸರು ತಾಲೂಕಿನಾದ್ಯಂತ ತೀವ್ರ ತಪಾಸಣೆ ನಡೆಸಿ ಕೇರಳದಲ್ಲಿ ಧಾರ್ಮಿಕ ಅದ್ಯಾಪಕನಾಗಿ ಸೇವೆ ಸಲ್ಲಿಸುತ್ತಿದ್ದ ರವೂಫ್ ಎಂಬವರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆಗಾಗಿ ಎನ್ಐಎ ಒಪ್ಪಿಸಿದ್ದಾರೆ ಎಂಬ ಹಸಿ ಹಸಿ ಸುಳ್ಳನ್ನು ಬಿತ್ತರಿಸಿದ ಕರ್ನಾಟಕದ ನ್ಯೂಸ್ ಚಾನಲ್ ಗಳು ತಾವೇನೋ ಸಾಧನೆ ಮಾಡಿದೆವು ಎಂದು ಬೀಗಿದ ಘಟನೆಯು ಅತ್ಯಂತ ಆಘಾತಕಾರಿಯಾಗಿದ್ದು, ಘಟನೆಗೆ ಸಂಬಂಧಿಸಿ ಅಮಾಯಕನ ವಿರುದ್ಧ ಸುಳ್ಳಾರೋಪಗೈದು, ಸಮಾಜವನ್ನು ಒಡೆಯಲು ಪ್ರಯತ್ನಿಸಿ, ದೇಶ ವಿರೋಧಿ ಕೃತ್ಯವನ್ನು ಮಾಡಿದ ಮಾಧ್ಯಮಗಳ ಮೇಲೆ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮವನ್ನು ಕೈಗೊಂಡು ಸುಳ್ಳಾರೋಪಗೈದ ಮಾಧ್ಯಮದ ಪರವಾನಿಗೆಯನ್ನು ರದ್ದುಗೊಳಿಸುವಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ- ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ವಾಸ್ತವದಲ್ಲಿ ರವೂಫ್ ಎಂಬವರು ಇತ್ತೀಚೆಗೆ ನಿಧನ ಹೊಂದಿದ ಅಲ್ ಮದೀನಾ ವಿದ್ಯಾ ಸಂಸ್ಥೆಯ ರೂವಾರಿ ಮಂಜನಾಡಿ ಉಸ್ತಾದರ ಶಿಷ್ಯ, ಅಪ್ಪಟ ಸೌಮ್ಯವಾದಿ ಎಂಬ ಕಾರಣಕ್ಕಾಗಿ ಉಸ್ತಾದರ ವಿಶ್ವಾಸಗಳಿಸಿ ಅವರ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇಂತಹ ಅಮಾಯಕ ಯುವ ಧಾರ್ಮಿಕ ಪಂಡಿತನ ಮೇಲೆ ಪೂರ್ವಾಗ್ರಹ ಪೀಡಿತ ಮಾಧ್ಯಮಗಳು “ಉಗ್ರನ ಪಟ್ಟ” ಕಟ್ಟಿರುವುದನ್ನು ನೋಡಿದರೆ ಜಾಗತಿಕ ಮಟ್ಟದಲ್ಲಿದ್ದ “ಇಸ್ಲಾಮೀ ಫೋಭಿಯಾ” ಭಾರತದ ಮಾಧ್ಯಮ ಲೋಕಕ್ಕೂ ಕಾಲಿಟ್ಟಿದೆ ಎಂಬುದು ಸ್ಪಷ್ಟವಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮಾಧ್ಯಮಗಳು ನಡೆಸುವ ಈ ಮಹಾತಪ್ಪುಗಳಿಗೆ ಪದೇ ಪದೇ ಅದೆಷ್ಟೋ ಅಮಾಯಕರು ಬಲಿಯಾಗುತ್ತಿದ್ದಾರೆ ಎಂದು ರಿಯಾಝ್ ಆತಂಕ ವ್ಯಕ್ತಪಡಿಸಿದ್ದಾರೆ.

ಆದರೆ ಮಾಧ್ಯಮಗಳು ಮಾತ್ರ ತನ್ನ ಚಾಳಿಯನ್ನು ಮುಂದುವರಿಸುತ್ತಲೇ ಇದೆ. ಪೊಲೀಸ್ ಅಧೀಕ್ಷಕರೇನೋ ಈ ಘಟನೆಯನ್ನು ಅಲ್ಲಗಳೆಯುವ ಮೂಲಕ ತನ್ನ ಕೈಯನ್ನು ತೊಳೆದುಕೊಂಡರು. ಆದರೆ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ತನ್ನ ಬಗ್ಗೆ ತಪ್ಪು ಕಲ್ಪನೆಗಳು ರವಾನೆಯಾಗಿ ಮುಖಭಂಗಕ್ಕೊಳಗಾದ ರವೂಫ್ ರವರ ಘನತೆಯನ್ನು ಮರಳಿಸುವವರು ಯಾರು ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ. ಕನಿಷ್ಠ ಪಕ್ಷ ಮಾಧ್ಯಮಗಳು ಒಂದು ಕ್ಷಮಾಪನೆ ಅಥವಾ ಸ್ಪಷ್ಟೀಕರಣ ಕೂಡಾ ನೀಡುತ್ತಿಲ್ಲ ಎಂದು ಅವರು ಖೇಧ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಈ ಸರ್ವಾಧಿಕಾರಿ ನಿಲುವುಗಳನ್ನು ಕೊನೆಗೊಳಿಸುವ ಸಲುವಾಗಿ ಪೊಲೀಸ್ ಇಲಾಖೆಯು ಅಮಾಯಕರು, ಪ್ರಗತಿಪರರು, ಧಾರ್ಮಿಕ ನಾಯಕರು, ಕನ್ನಡಪರ ಹೋರಾಟಗಾರರು ಮತ್ತು ಪ್ರತಿಭಟನಾ ನಿರತರ ಮೇಲೆ ಸ್ವಯಂ ಪ್ರೇರಿತ ಕೇಸುಗಳು ದಾಖಲಿಸುವುದನ್ನು ಬಿಟ್ಟು ಸುಳ್ಳು ಸುದ್ದಿಯನ್ನು ನಿರಂತರವಾಗಿ ಹರಿಯಬಿಟ್ಟು ಸಮಾಜದ ಸ್ವಾಸ್ಥ್ಯ ಕೆಡಿಸಲು ಪ್ರಯತ್ನಿಸುತ್ತಿರುವ ಇಂತಹ ಮಾಧ್ಯಮಗಳ ಮೇಲೆ ಕೇಸುಗಳನ್ನು ದಾಖಲಿಸಿ, ಪರವಾನಿಗೆಯನ್ನು ರದ್ದುಗೊಳಿಸುವ ಮೂಲಕ ತನ್ನ ಕರ್ತವ್ಯ ಪ್ರಜ್ಞೆಯನ್ನು ಮೆರೆಯಬೇಕಾಗಿದೆ ಎಂದು ರಿಯಾಝ್ ಫರಂಗಿಪೇಟೆ ಪ್ರಕಟಣೆಯಲ್ಲಿ ಹೇಳಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group